ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆಜರ ಇನ್ಯಾತಕೆ ಬಂತಮ್ಮಾ ಸಜ್ಜನರಿಗೆ ಪ ಪರಮೇಷ್ಠಿ ಜನಕಾನೆಪರನೆಂದು ತಿಳಿಸಾದೆ ಪರಗತಿಯ ತೋರದ ಅ.ಪ. ಸ್ನಾನವ ಮಾಡಿಕೊಂಡು ಕುಳಿತು ಬಲುಮೌನದಿಂದಿರಲೀಸಾದೆ ||ಶ್ರೀನಿವಾಸನ ಧ್ಯಾನ ಮಾಡಾದೆ ಮನಸುಶ್ವಾನನೋಪಾದಿಯಲ್ಲಿ ತಾ ಓಡುವಂಥ 1 ಜಪ ಮಾಡುವ ಕಾಲದಲ್ಲಿ ಕರೆಯ ಬರೆವಿಪರೀತವಾಗುವದು ಮನಸು ||ಸ್ವಪನದಂತೆ ಮನಸಿಗೆ ಪೊಳದು ಬಲುಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2 ಯಜಮಾನನು ಮಾಡಿದ ಪಾಪಂಗಳವ್ರಜವು ಬಿಡದೆ ಅನ್ನದೊಳಗಿಪ್ಪುದ ||ದ್ವಿಜನು ಭುಂಜಿಸಲಾಗಿ ಅವನ ಉದರದೊಳುನಿಜವಾಗಿ ಇಪ್ಪಾವು ಸುಜನಾರು ಲಾಲಿಸಿ 3 ಉದರದೊಳಗೆ ಬಿಚ್ಚದ ಸಾವಿರಾರುವಿಧವಾಗುವದು ಕೇಳು ||ಅದೇ ದೇಹ ಪುಷ್ಟಿ ಮಲ ರೇತಸ್ಸುಅದೇ ಪಾಪಿಗೆ ತಿಳಿಯದೆ ಭುಜಿಸುವಂಥ 4 ಕೆಳಗೆ ಕುಳ್ಳಿರಿಸಿದಾರೆ ಜ್ಞಾನಿ-ಗಳ ಬೊಗಳುವೆ ಕುನ್ನಿಯಂದದಿ ||ಒಳಗೆ ಕರೆದು ಒಯ್ದು ಬೆಳಗಿಲಿಕುಳ್ಳಿರಿಸೆ ಸಾಯಂ ಪ್ರತಿ ಸ್ತುತಿ ಮಾಡುವಾ 5 ಪ್ರಸ್ತದಾ ಮನೆಯೊಳಗೆ ಕರೆಯಾದಲ್ಲಿಗೆಸ್ವಸ್ಥಾದಿ ನೀ ಕುಳಿತುಕೊಂಡು ||ವಿಸ್ತಾರದಿ ಹಾರೈಸಿ ಪ್ರ-ಶಸ್ತವಾಯಿತೆಂದೂ ಮಸ್ತಕ ತಿರುಹುವೆ 6 ಮಾಡಿದ ಮಹಾ ಪುಣ್ಯದ ಓದನಕಾಗಿಕಾಡಿಗೊಪ್ಪಿಸಿ ಪೋದಂತಾಯಿತು ||ಗಾಡಿಕಾರ ಮೋಹನ್ನ ವಿಠಲನಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 7
--------------
ಮೋಹನದಾಸರು
ತೇಜಿಯೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ. ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ1 ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ 2 ಮುತ್ತಿನ ತುರಾಯಿ ಅಂಗಿ ಮುಂಡಾಸು ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು 3 ರಂಭೆ ಮೊದಲಾದ ದೇವರಮಣಿಯರು ಕುಂಭದ ಆರತಿಯೆತ್ತಿ ಕೂಡಿ ಪಾಡಲು ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ 4 ವೇದಘೋಷದಿಂದ ವಿಪ್ರರು ಸ್ತುತಿಸಲು ಮೋದದಿಂದ ಗಾಯಕರು ಹಾಡಿ ಪಾಡಲು ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ 5 ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು 6 ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ 7
--------------
ವಾದಿರಾಜ
ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು
ಮೀಸಲಾಗಿ ನಿನ್ನದೊಂದು ಚೆಲ್ವರೂಪವನ್ನಿಡೋವಾಸುದೇವ ನಿನ್ನನಂತ ದಿವ್ಯರೂಪಗಳಲಿ ಎನಗೆ ಪ ಮಣಿವ ಭಕುತ ಜನರು ಕರೆದಕ್ಷಣಕೆ ಓಡಿಬಂದು ಮುಂದೆಕುಣಿದು ಕುಣಿದು ಕುಣಿದು ಹೋಗಿ ಬಂದುದಣಿದುಕೊಳುವ ಮೊದಲು ಎನಗೆ 1 ಎಷ್ಟು ನೋಡಿದರು ಎನಗೆತುಷ್ಟಿಯಿಲ್ಲವಯ್ಯ ಕೃಷ್ಣಅಷ್ಟಷ್ಟಕೆ ಹೋಗಿಬರುವಕಷ್ಟವೇಕೆ ದಯದಿ ಎನಗೆ 2 ಮಾಡಿದಘವ ಕುಟ್ಟಿ ಹಣಿವೆನೋಡಿ ನೋಡಿ ಪದಕೆ ಮಣಿವೆಹಾಡಿಹಾಡಿ ನಲಿದು ಕುಣಿವೆನಾಡೆ ಕುಣಿದು ತುಂಬ ತಣಿವೆ 3 ಸಾವಿರಾರು ಭಕ್ತಜನರುದೇವ ನಿನಗೆ ಗೈವೆಯೆಂತುಪಾವನಾತ್ಮ ಗದುಗು ವೀರನಾರಾಯಣ ದಯವ ತೋರಿ 4
--------------
ವೀರನಾರಾಯಣ
ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? ಪ.ಆದರಣೆಯಿಲ್ಲದೂಟ ಅಮೃತಾನ್ನವಾದರೇನುವಾದಿಸುವಸತಿ - ಸುತರಿದ್ದು ಫಲವೇನು ?ಕ್ರೋಧ ಬಳೆಸುವ ಸಹೋದರರು ಇದ್ದರೇನುಮಾದಿಗರ ಮನೆಯೊಳೆ ಮದುವೆಯಾದರೇನು ? 1ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನುದೇವಾಂಕಿತವಿಲ್ಲದ ಕವಿತ್ವವೇನು ?ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನುಹಾವಿನ ಘಣಿಯೊಳಗೆ ಹಣವಿದ್ದರೇನು ? 2ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನುತನ್ನ ತಾನರಿಯದ ಜ್ಞಾನವೇನು ?ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? 3
--------------
ಪುರಂದರದಾಸರು