ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ ಎಡಬಿಡದಲೆ ತವಅಡಿಭಕ್ತಿಜ್ಞಾನ ಪ ವನವಸೇರಿರಲಿ ಮತ್ತನುಗಾಲ ಬಡತನ ವನುಭವಿಸುತಿರಲಿ ಘನಸುಖದಿರಲಿ 1 ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು 2 ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು 3 ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ 4 ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ 5 ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ 6 ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ ಸಾವಿರನಾಮ ಎನ್ನ ಭಾವದಿ ನುಡೀತಿರಲಿ 7
--------------
ರಾಮದಾಸರು
ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ ಶ್ರುತಿಗಗೋಚರ ಯತಿಜನಾಶ್ರಯ ಅತಿಶಯಾನಂದಾತ್ಮನ ಭಜಿಸು ಮನವೆ ಧ್ರುವ ಪವಿತ್ರಪ್ರಣವ ಸುವಿದ್ಯದಾಗರ ವ್ಯಕ್ತಗುಣ ಅವಿನಾಶನ ಘವಿಘವಿಸುವಾನಂದಮಯ ರವಿಕೋಟಿ ತೇಜಪ್ರಕಾಶನ ಭವರಹಿತ ಗೋವಿಂದ ಗುರುಪಾವನ ಪರುಮಪುರುಷನ ಭುವನತ್ರಯಲಿಹ್ಯ ಭಾವಭೋಕ್ತ ಸಾವಿರನಾಮ ಸರ್ವೇಶನ 1 ಮೂಜಗದಿ ರಾಜಿಸುತಿಹ್ಯ ತೇಜೋಮಯ ಘನಸಾಂದ್ರನ ಅಜಸುರೇಂದ್ರ ಸುಪೂಜಿತನುದಿನ ರಾಜಮಹಾರಾಜೇಂದ್ರನ ಭಜಕ ಭಯಹರ ನಿಜ ಘನಾತ್ಮಗಜವರದ ಉಪೇಂದ್ರನ 2 ಪರಾತ್ಪರ ಪರಿಪೂರ್ಣ ಪರಂಜ್ಯೋತಿ ಘನಸ್ವರೂಪನ ಪರಂಬ್ರಹ್ಮ ಪರೇಶ ಸುರವರನಾಥ ಗುರುಕುಲದೀಪನ ನಿರಾಳ ನಿರ್ವಿಶೇಷ ನಿರಾಕಾರ ನಿರ್ವಿಕಲ್ಪನ ಕರುಣದಿಂದಲಿ ಹೊರೆವ ಮಹಿಪತಿಸ್ವಾಮಿ ಚಿತ್ಸ ್ವರೂಪನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದಪ್ರೇಮ ಪಾಲಿಸು ಪಾದಪ್ರೇಮ ಪಪಾಪವಿರಾಮ ಪಾವನನಾಮ ಅ.ಪಸ್ಮರಿಪರ ಪ್ರೇಮ ವರಬಲಭೀಮವರನೀಲಶ್ಯಾಮ ರಘುಕುಲಸೋಮಶರಣರಸುರತರುಜಗದೋದ್ಧಾಮ1ಗೋವುಗಳ ಪಾಲ ಗೋಕುಲಬಾಲಪಾವನಮಾಲ ಗಾನವಿಲೋಲಸಾವಿರನಾಮಕ ಸುಜ್ಞಾನಸಪಾಲ 2ಸಾಗರ ಕನ್ನಿಕಾ ಪ್ರಾಣರಮಣನಾಗಾರಿಗಮನ ನಾಗಶಯನಆಗಮನುತ ಮಮಪ್ರಾಣ ಶ್ರೀರಾಮ ನಿನ್ನ 3
--------------
ರಾಮದಾಸರು