ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಗುರುಸ್ತುತಿ ಆಶೀರ್ವದಿಸು ಗುರುರಾಜ ನಾ ಶೀರ್ಷವನೆ ಬಾಗುತ ನಮಿಸುವೆ ಜ್ಞಾನದಾತ ಕರುಣಿಸು ತಾತಾ ಆತ್ಮಾನುಭವಾ ಪಡೆವ ವರವಾ ಜ್ಞಾನನಿಧಿಯ ಬೇಡುವೆ ನಿನ್ನೋಳ್ ಮನದಿ ಜ್ಞಾನವು ಹೊಳೆಯುವತೆರನಾ ದೇವನಾನೆಂದರಿವತೆರದಿ ಜೀವಭಾವ ಮರೆವತೆರದಿ ಭಾವದಿ ನೀನೆ ನೆಲೆಸುವ ತೆರದಿ ಸಾವಿನಂಜಿಕೆ ಸರಿಯುವತೆರನಾ ಅನುಭವನಿಧಿಯೆ ಚಿನುಮಯರೂಪಾ ಮನವು ನಿನ್ನೋಳ್ ಮುಳುಗುವ ತೆರದಿ ಆ ನಾರಾಯಣ ಶಿಷ್ಯ ಶಿಖಾಮಣಿ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ