ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುದುಕನಾಗಿ ಬದುಕಿ ಫಲವೇನು ತನ್ನಯ ಪ್ರಾಣ ಪದಕವಾ ಕಂಡರಿಯದನಕಾ ಪ ಬದುಕಿ ಸಂಸಾರ ಸೆಲೆಯೊಳು ಅದಕಿದಕೆಂದು ಓಡ್ಯಾಡಿ ಮದಕೆ ಮಾಯೆಯೊಳು ಸಿಕ್ಕಿ ಬದರಿಕೊಳ್ಳುತ್ತಿರುವಾ ಮನುಜಾ ಅ.ಪ. ಸತ್ತು ಹುಟ್ಟು ಹುಟ್ಟು ಸಾವಿಗೆ ಅದಕೆ ತಕ್ಕ ಉತ್ತಮ ಶ್ರೀ ಗುರುಮಂತ್ರವನ್ನು ಚಿತ್ತದಿ ಧ್ಯಾನಿಸದೆ ಮುದಿ ಕತ್ತೆಯಂತೆ ಧರೆಯೊಳಗೆ ವ್ಯರ್ಥವಾಗಿ ಜನಿಸಿ ಮದೋ ನ್ಮತ್ತನಾಗಿ ಇರುವ ಮನುಜಾ 1 ಗುರೂಪದೇಶವನ್ನು ಪಡೆಯದೆ ಸಂಸಾರವೆಂಬ ಶರಧಿಯೊಳು ಈಸಾಡಿ ಬಳಲುತ್ತ ಹರಿಯಧಿಕ ಹರನಧಿಕನೆಂದು ವಾದಿಸುತ್ತ ಪರರ ಬರಿದೆ ನಿಂದಿಸಿ ಹೊಟ್ಟೆಯ ಮಂದ ಮನುಜಾ2 ಪರಿಪೂರ್ಣಾತ್ಮಕನನ್ನು ನೋಡದೆ ಪರಾತ್ಮರ ಗುರು ವಿಮಲಾನಂದನೊಳಾಡದೆ ಮರಗಳಲ್ಲಿ ಹಾರುವವಾ ನರನಂತೆ ಮನದೊಳು ಸಿಕ್ಕಿ ನರಳುತ್ತ ಪ್ರಾಯವು ಹೋದ ನರಿಯಂತೆ ಕೂಗುವ ಮನುಜಾ 3
--------------
ಭಟಕಳ ಅಪ್ಪಯ್ಯ
ಸಾಹುಕಾರರು ನಾವು ಜಗದ ಹುಟ್ಟುಸಾವಿಗೆ ಭಯಪಡೆವು ಪ ದೇಹಗಳ್ ವಸ್ತ್ರಗಳಂದದಿ ಬರುವುವು ಸಾಹಸಿವಳಗಿರುವನೊಬ್ಬನವನಕಡೆಯ ಅ.ಪ ಮೂಲ್ಯರತ್ನಗಳು ನೇಮ ಕಾಲಕಾಲಕೆ ನಿತ್ಯಕರ್ಮಾಚರಣೆ ಬಂಡ- ವಾಳವಾಗಲು ಸದ್ವ್ಯಾಪಾರ ಮಾಡುವಂಥ 1 ರಡ್ಡಿಯು ಉಂಟಾಗದು ಕಡ್ಡಿಯ ಕೊಟ್ಟು ಪೇಳುವೆವು ನಿಜದಲಿ ಕೇಳಿ ಕಲುಷಾತ್ಮರಿಗೆ ಸಾಲಕೊಡುವುದಿಲ್ಲವು 2 ದೊಡ್ಡಸಮಯಕೆ ಬೇಕಾದಷ್ಟು ಬಡ್ಡಿಯು ಬರೆ ಸಮವಾಗಿಹುದಿದುವೆ ಗುಟ್ಟು ಕ್ರಮವಾಗಿ ಲೆಕ್ಕ ಒಪ್ಪಿಸಬೇಕು ವರುಷಕೊಮ್ಮೆ 3
--------------
ಗುರುರಾಮವಿಠಲ