ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಹ್ಯ ಗುರುತವು ಪೂರ್ಣ ಸುಳ್ಹವುದೋರಿಕೊಡುವ ನಿಜ ಸದ್ಗುರು ಕರುಣ ಧ್ರುವ ಜೀವ ಶಿವ ದಾವ ದೆಂದಿಳಿವ್ಯಾವ ನೋಡಿ ನಾವು ನೀವೆಂದು ಹ್ಯಾವ ಹೆಮ್ಮೆಯ ಹಿಡಿಯ ಬ್ಯಾಡಿ ಮಾವಮಕರ ಗುಣಬಿಟ್ಟು ಭಾವ ಭಕ್ತಿ ಮಾಡಿ ದೇವದೇವೇಶನ ದಿವ್ಯಪಾದಪದ್ಮ ಕೂಡಿ 1 ಬಾಯ್ದೆರೆದು ಬರೆ ಭ್ರಮೆಗೆ ಸಾಯಗೊಂಬುದು ಏನು ನ್ಯಾಯ ಜರೆದು ನೋಯಗೊಂಬುಪಾಯ ನಿನ್ನಾಧೀನ ಮಾಯ ಮರ್ಮಪಾಯವರಿದು ಧ್ಯಾಯಿಸೊ ನಿಧಾನ ಸೋಹ್ಯದೋರುತಿದೆ ನೋಡಿ ಸದ್ಗತಿ ಸಾಧನ 2 ಸಾವಧಾನವೆಂದು ಶ್ರುತಿ ಸಾರುತಿದೆ ನೋಡಿ ಗೋವಿಸುವ ವಿದ್ಯದೊಳು ಸಿಲುಕಿಬೀಳಬ್ಯಾಡಿ ಆವ ಪರಿಯ ಭಾವ ಕಾವ ದೈವ ನೋಡಿ ಜೀವ ಜೀವಾಗಿಹ್ಯ ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ ಸಾವಧಾನಾಗಿ ಸಾಧಿಸಿ ಶ್ರೀಹರಿ ಸ್ವರೂಪಜ್ಞಾನ ಧ್ರುವ ಕಾಯದ ಕಳವಳ ಕಂಗೆಡಿಸದೆ ಮುನ್ನೆ ಸಾವಧಾನ ಮಾಯಮೋಹದ ಭ್ರಮೆದೋರದ ಮುನ್ನೆ ಸಾವಧಾನ 1 ಕಾಮಕ್ರೋಧ ತನ್ನ ನೇಮಗೆಡಿಸಿದ್ಹಾಂಗ ಸಾವಧಾನ ತಾಮಸದೊಳು ಕೂಡಿ ತರ್ಕಸ್ಯಾಡದ್ಹಾಂಗ ಸಾವಧಾನ 2 ಆಸನ ವ್ಯಸನ ಕೂಡಿ ಹಸನ ಕೆಡದ್ಹಾಂಗ ಸಾವಧಾನ ವಿಷಯ ವಿಭ್ರಮದೊಳು ವಶವಗುಡದ್ಹಾಂಗ ಸಾವಧಾನ 3 ನಿದ್ರಿವೆಂಬುದು ತನ್ನ ಬುದ್ಧಿಗೆಡಿಸದ್ಹಾಂಗ ಸಾವಧಾನ ಸದ್ಯ ತಾನಾರೆಂದು ಶುದ್ಧಿ ತಿಳುವ್ಹಾಂಗ ಸಾವಧಾನ 4 ಪಾದ ರಕ್ಷಿಸುವದರಲಿ ಸಾವಧಾನ ನಿತ್ಯ ಸಾವಧಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವೆಂದು ಶ್ರುತಿಸಾರುತಿದೆಕೋ ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ ಭವದ ನಿದ್ರಿಗಳೆದು ಸಾವದಾನವಾಗೋ ನಿವಾಂತ ಕೂಡಲಿಕ್ಯದ ಬಲು ಬೆಳಗೋ ವಿವೇಕವೆಂಬ ಸ್ಮರಣೆ ಇದೆ ನಿನಗೋ ಭವಹರ ಗುರುವಿಗೆ ಶರಣಯುಗೋ 1 ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ ಅಚ್ಯುತಾನಂತನ ಕಾಂಬುದನುಸಂಧಾನ ಅಚಲವೆಲ್ಲಕ್ಕಿದೆ ಸುಪಥಸಾಧನ 2 ಬೆಳಗಿನ ಬೆಳಗಿದೆ ಬಲು ನಿಶ್ಚಲ ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ ಬೆಳಗಾಯಿತು ಗುರುದಯ ಪ್ರಬಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು