ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡಿ ಶ್ರೀ ವಾಸುದೇವನ ದ್ರುವ ಆವಾಗ ನೋಡಿ ಚರಣ ಸೇವಿಸಿ ನಿಧಾನ 1 ಕಣ್ಣಮುಂದೆ ಕಟ್ಯಾನೆ ಭಿನ್ನವಿಲ್ಲದೆ ತುಂಬ್ಯಾನೆ ಸಣ್ಣ ದೊಡ್ಡರೊಳಗ್ಹಾನೆ ಕಾಣಿಸುತಲ್ಹ್ಯಾನೆ 2 ಚಿತ್ತಮನೊಂದು ಮಾಡಿ ಹತ್ತಿಲಿ ಸಾಭ್ಯಸ್ತ ನೋಡಿ ನಿತ್ಯ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು