ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ ಕ್ಷೀರಾನ್ನ ದಧ್ಯೋದನ್ನ ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು ಉಪ್ಪಿನಕಾಯಿಗಳ ಪಚ್ಚಡಿ ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ 1 ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನÉೀ? 2 ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ ಸಿಟ್ಟುಮಾಡದೆ ಗುರುರಾಮವಿಠಲನ್ನಾ ಸ್ಮರಿಸಿಕೊಂಡು ದಿಟ್ಟೆ ಬೀಗಿತ್ತಿ 3
--------------
ಗುರುರಾಮವಿಠಲ
ಚಿರಶಾಂತಿ ಪ್ರದಾತಾ ಗುರುವರಾ ಪರಮಾರ್ಥಪ್ರಬೋಧಾ ಸುಖಕರಾ ಭವವಿತರಣಾ ದಿವ್ಯಚರಣಾ ತಿಮಿರ ಮುಸುಕಿರೆ ಸೋಹಮೆನಿಪ ಜ್ಞಾನಸೂರ್ಯ ಉದಿಸಿ ನೀ ಘನಸ್ವಾತ್ಮರಂಜನಾ ಶೃತಿಶಿರಗಳಿಗೂ ಪೇಳಲಾಗದೆ ನೇತಿ ಎನ್ನುವ ಮೌನವ ಧರಿಸಿದ ಆತ್ಮತತ್ವವ ಪೇಳ್ದೆ ಧೀರನೇ ಭವಶರಧಿಯಲಿ ನಾವಿಕ ನೀನೇ ಸಾವಕಾಶದಿ ದಾಂಟಿಸುತಿರುವೀ
--------------
ಶಂಕರಭಟ್ಟ ಅಗ್ನಿಹೋತ್ರಿ