ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೀವನೇ ಶಶಿಹಾಸ ಕೇರಳ ಜಡಪ್ರಕೃತಿ ಕುಂತಳಪುರ ಶರೀರವಿದು ಸಮ್ಯಕ್ ಜ್ಞಾನ ಪಾವನದ ಶಾಸ್ತ್ರಗಳು ಗಾಲವ ಭಾವಿಸಲು ಶುಭಫಲವು ಚಂಪಕ ಮಾಲಿನಿಯು ಕನ್ಯೆ 1 ಮದನ ಚಂದ್ರಮುಖಿ ವಿಷಯೆಯು ವಿಷಯವುಮು ಕುಂದನಾತ್ಮನು ಸಾಲಿಗ್ರಾಮವು ಕಂದನೊಯ್ದ ಕಟುಕರು ಪಂಚಾಘಗಳು ತಿಳಿಯುವುದೂ 2 ಕೆಟ್ಟಕರ್ಮವು ಕಾಲೊಳಾರನೆ ಬೆಟ್ಟುನೋಡಲು ಕಾಳಿಕೆಯು ತಾ ಶ್ರೇಷ್ಠಮೂಲಪ್ರಕೃತಿ ಖಡ್ಗವು ನಿಷ್ಠೆಯೆನಿಸುವುದೂ ಸೃಷ್ಟಿಯೊಳಗೀ ವಿವರ ತಿಳಿದು ತ್ಕøಷ್ಟವೆಂದಾಲಿಪರ ಗುರುರಾಮ ವಿಠ್ಠಲನು ಕೈಪಿಡಿದು ಕೊಡುವನಭೀಷ್ಟಸಿದ್ಧಿಗಳಾ 3
--------------
ಗುರುರಾಮವಿಠಲ
ಪಾಷಾಣವಲ್ಲವದು ಭೂಷಣವು ಕರಕೆ ದೋಷವಾ ದೂರಿಪುದು ತೋಷ ಜನಿಪುದು ಮನಕೆ ಪ ದಾಸಳುದಕದಿ ಜನಿಸಿ ಶ್ರೀಶನಂಕಿತ ವಹಿಸಿ ವಾಸುದೇವನ ಭಜಕರೆದೆ ಪಿರಿದು ಎನಿಸಿ ದಾಸಜನರಿದನು ನಿತ್ಯದಿ ಪಾಡಿ ಪೂಜಿಸಲು ಘಾಸಿಯಕ್ಷಯ ಲೋಕಪಥವ ಸಲೆ ಕರುಣಿಪುದು 1 ಶ್ರೀದೇವಿ ವಲ್ಲಭನು ಭೂದೇವಿ ರಮಣನು ಸಾಧುಗಳ ಪ್ರಿಯ ಶ್ರೀಗಿರಿನಿಲಯನು ಮೋದದಲಿ ಶಕ್ತ ಮೌಕ್ತಿಕ ಸ್ವರ್ಣಸರಿಯಲ್ಲ ಭೇದ ತೋರಲು ದೃಶನ್ಮಾಯಯಂತಿಹ ಸ್ವಾಮಿ 2 ಭಕ್ತರೊಳು ನಿಜದಾಸ ಯುಕ್ತ ಚಂದ್ರಹಾಸ ವಕ್ತøದೊಳ್ಗೊಳಸಿಹನು ನರಸಿಂಹದಾಸ ಮುಕ್ತಿಪಂಥ ಕಂಡನವ ಸಂದೇಹ ಬೇಡಿದಕೆ ಶಕ್ತ ನರಸಿಂಹವಿಠ್ಠಲ ಸಾಲಿಗ್ರಾಮವು 3
--------------
ನರಸಿಂಹವಿಠಲರು
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಸೂರೆಮಾಡೆ ವರಗಳ ಹೊಸೂರ ದೇವತೆ ತೋರೆ ನಿನ್ನ ದಯವ ತುಂಬಿಕೊಂಡು ನಾ ಪೋಗುವೆನು ಮನೆಗೆ ಪ ಶೀಘ್ರದಿಂದ ನಿನ್ನ ಸಾಲಿಗ್ರಾಮವುಳ್ಳ ನೇತ್ರದಿಂದ ಅ- ನುಗ್ರ (ಹ) ಮಾಡಿ ನೋಡೆ ಎನ್ನ ಶಿರಬಗ್ಗಿಸ್ವಂದನೆ ಮಾಡುವೆನು 1 ರೇಣುಕಾಂಬ ನಿನ್ನ ಪಾದರೇಣು ತೋರೆ ಕರುಣದಿಂದ ಕಾಣೆ ನಿನ್ನ ಸರಿ ಲೋಕದೊಳಗೆ ಪಾಣಿ ಹಿಡಿಯೆ ಪಾಲಿಸೆನ್ನ 2 ಸತ್ಯವಂತೆ ಕಳೆಯೆ ಈ ತಾಪತ್ರಯ ದಾರಿದ್ರ್ಯ ದೋಷ ನಿತ್ಯದಲಿ ನಾ ನಿನ್ನ ಭಾಳ ಭಕ್ತಿಯಿಂದ ಬೇಡಿಕೊಂಬೆ3 ಬಾಳೆದಂಡಿಗೆ ಪಾಯಸ ನಿನ್ನ ಭಾಳ ಮಹಾತ್ಮ್ಯಗಳನೋಡಿ ಅ- ಕುಸುಮ ಕುಂಕುಮ ಬೇಡುವೆ ಪ್ರಸಾದವನ್ನು 4 ಜಮದಗ್ನಿಸತಿಯೆ ನೀ ಭೀಮೇಶಕೃಷ್ಣನಾದ ಭಾರ್ಗವ- ರಾಮನ ಮಾತೆಯೆ ಕರುಣದಿ ಕಾಮಿತಾರ್ಥವ ಕೊಟ್ಟು ಕಾಯೆ 5
--------------
ಹರಪನಹಳ್ಳಿಭೀಮವ್ವ