ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ಪ ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನಬೇಸರಿಸಿ ಬೇಡ ಬಂದುದಿಲ್ಲವಾಸುದೇವನೆ ನಿನ್ನ ದಾಸರ ದಾಸರದಾಸರ ದಾಸ್ಯವ ಕೊಡು ಸಾಕೆಂದರೆ 1 ಸತಿಸುತರುಗಳ ಸಹಿತನಾಗಿ ನಾಹಿತದಿಂದ ಇರಬೇಕೆಂಬೊದಿಲ್ಲಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನಕಥಾಮೃತವನೆ ಕೊಡು ಸಾಕೆಂದರೆ 2 ಸಾಲವಾಯಿತೆಂದು ಸಂಬಳ ಎನಗೆಸಾಲದೆಂದು ಬೇಡ ಬಂದುದಿಲ್ಲನಾಲಗೆಯಲಿ ನಿನ್ನ ನಾಮದುಚ್ಚರಣೆಯಪಾಲಿಸಬೇಕೆಂದು ಬೇಡಿದೆನಲ್ಲದೆ3 ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದುಬಡವನೆಂದು ಬೇಡ ಬಂದುದಿಲ್ಲಒಡೆಯ ನಿನ್ನಡಿಗಳಿಗೆರಗುವುದಕೆ ಮನಬಿಡದಿಹದೊಂದನು ಕೊಡು ಸಾಕೆಂದರೆ4 ಆಗಬೇಕು ರಾಜ್ಯಭೋಗಗಳೆನಗೆಂದುಈಗ ನಾನು ಬೇಡ ಬಂದುದಿಲ್ಲನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ5
--------------
ಶ್ರೀಪಾದರಾಜರು
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ ಬಟ್ಟೆ ಕಾಣದು1 ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ 2 ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ 3 ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು 4 ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ 5
--------------
ಕನಕದಾಸ
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು