ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ವಿಧಾತೃದೇವತೆಗಳೂ ವಿಷ್ಣುವಿನ ಹಿಂದೆ |ಇದಕೆ ತಪ್ಪಿದರೆ ಫಣಿಫಣವ ಪಿಡಿವೆ ಪ.ಸಕಲ ತೀರ್ಥಗಳೆಲ್ಲ ಸಾಲಗ್ರಾಮದ ಹಿಂದೆ |ಪ್ರಕಟಗ್ರಂಥಗಳೆಲ್ಲ ಭಾರತದ ಹಿಂದೆ ||ಸಕಲ ವೃಕ್ಷಗಳೆಲ್ಲ ಶ್ರೀ ತುಳಸಿಯ ಹಿಂದೆ |ಸಕಲ ಪರ್ವತಗಳು ಮೇರುವಿನ ಹಿಂದೆ 1ಮತಗಳೆಲ್ಲವು ಮಧ್ವಮತದ ಸಾರದ ಹಿಂದೆ |ಇತರ ವರ್ಣಗಳೆಲ್ಲ ವಿಪ್ರರ ಹಿಂದೆ ||ವ್ರತಗಳೆಲ್ಲವು ಹರಿಯ ದಿನದ ವ್ರತದ ಹಿಂದೆ |ಅತಿಶಯದ ದಾನಗಳು ಅನ್ನದಾನದ ಹಿಂದೆ 2ಉತ್ತಮಗುಣಗಳೆಲ್ಲ ಉದಾರತ್ವದ ಹಿಂದೆ |ಮತ್ತೆ ಕರ್ಮಗಳು ಮಜ್ಜನದ ಹಿಂದೆ ||ಪೃಥ್ವಿಯೊಳಗೆ ನಮ್ಮ ಪುರಂದರವಿಠಲನ |ಭಕ್ತವತ್ಸಲನೆಂಬ ನಾಮವೇ ಮುಂದೆ 3
--------------
ಪುರಂದರದಾಸರು
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
--------------
ಪ್ರಾಣೇಶದಾಸರು