ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ಘನ ಸುಖದಿಂಬು 1 ಅನುದಿನ ನೋಡಾ ನಂಬದೆ ನಿಜವನು ನೀ ಕೆಡಬ್ಯಾಡ 2 ಬ್ಯಾಡೆಂಬುದು ಈ ಮಾತನೆ ಕೇಳು ಬೇಡದೆ ಬಯಸದೆ ನಿಜದಲಿ ಬಾಳು 3 ಬಾಳುವದೀಪರಿ ಜನದಲಿ ಲೇಸು ತಿಳಿಯದೆ ಬಯಸುವದ್ಯಾತಕೆ ಸೋಸು 4 ಸೋಸ್ಹಿಡಿದರ ಬೇಕಾಹುದು ಜನ್ಮ ಕರ್ಮ 5 ಭವ ಬಂಧ ಮರ್ಮವ ತಿಳಿಯದವನೆ ತಾ ಅಂಧ 6 ಅಂಧಗ ತಿಳಿಯದು ಆತ್ಮದ ಗೂಢ ಸಂಧಿಸಿ ಬೀಳಲು ವಿಷದಲಿ ಮೂಢ 7 ಮೂಢಗೆಲ್ಲಿಹ್ಯ ಆತ್ಮದ ವಿಚಾರ ನೋಡುವ ನೋಟವು ಇದು ಬಲುದೂರ 8 ದೂರಕೇ ನೀ ದೂರಾಗಿಬ್ಯಾಡ ಅರಿಯಲು ತನ್ನೊಳು ಸಾರವೆ ನೋಡಾ 9 ನೋಡುವುದಿದು ಗುರುಙÁ್ಞನದ ಗುಟ್ಟು ಆಡಿದ ಅನುಭವ ಮಾತಿಗೆ ಮುಟ್ಟು 10 ಮುಟ್ಟಿದ ಖೂನವು ಮಿಸುಕಲಿ ಬ್ಯಾಡ ಘಟ್ಯಾಗಿ ನಿಜಘನ ಬೆರೆ ಗಾಢಾ 11 ಗಾಢಾಗಿಹುದು ನಿಜಗುರು ಙÁ್ಞನ ಮಾಡುವ ಧ್ಯಾನಕೆ ಅನುಸಂಧಾನ 12 ಉನ್ಮನದಲಿ ತಿಳಿವುದು ಗುರುಮುಖ 13 ಗುರು ಮುಖದಲಿ ಬೆಳಗಾಹುದು ಪೂರ್ಣ ಬೀರುವ ಪ್ರಭೆ ಸದ್ಗುರು ಕರುಣ 14 ಕರುಣದ ಸಾಗರ ಗುರುವರ ಮೂರ್ತಿ ಇರುಳ್ಹಗಲೆ ಕೊಂಡಾಡುವೆ ಕೀರ್ತಿ 15 ಕೀರ್ತಿಯ ಕೊಂಡಾಡುವನೀ ಮಹಿಪತಿ ಸಾರ್ಥಕವಿದು ಅನುಭವ ಮನೆಮೂರ್ತಿ 16
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರ್ಥಕವು ವರ ವೈಷ್ಣವ ಜನುಮವು ಸಾರ್ಥಕವು ಪ ಸಾರ್ಥಕವಿದು ಪುರುಷಾರ್ಥಕೆ ಸಾಧನಅ.ಪ ಸ್ವಾಮಿದಾಸ ಭಾವವನು ನಿರಂತರ ನಿಯಮದಿಂದ ಬೋಧಿಸುತಿರುವ ಕಾಮಕ್ರೋಧಗಳ ಜರಿದು ಶ್ರೀ ಹರಿಯಲಿ ಪ್ರೇಮವೇ ಪರಮ ಸಾಧನವೆಂದರಿತರೆ 1 ದಾನ ಸ್ನಾನ ಜಪ ಸಂಧ್ಯಾತ್ರಿಯಗಳು ಜ್ಞಾನಕೆ ಸಾಧನವೆಂಬುದರಿಯುತ ಕಾಣಲು ಹರಿಯನು ಹೃದಯಾಂಬರದಲಿ ಕರ್ಮ ಸವೆಯುತಿರೆ 2 ವಿಶ್ವ ಜನನ ಸ್ಥಿತಿ ಪ್ರಳಯಗಳಿಗೆ ಸದಾ ಈಶ್ವರ ತಾನು ಪ್ರಸನ್ನನಾಗಲು ಶಾಶ್ವತವಾದ ಸ್ವರೂಪಾನಂದವ ಸ್ವಪ್ನಯೋಗ್ಯ ರೀತಿಯಲಿ ಪಡೆಯುವುದೇ 3
--------------
ವಿದ್ಯಾಪ್ರಸನ್ನತೀರ್ಥರು