ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುವೇ ಸಾಧಕ ವೃತ್ತಿಗಳು | ಇದೇ ಅಬಾಧಕ ಯುಕ್ತಿಗಳು ಪ ಸದ್ಗುರು ಪಾದಕ ಸದ್ಭಾವದಿ ನಂಬಿ | ಹೃದ್ಗತ ಗುಜವನು ಪಡೆದಿಹನು | ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ | ಉದ್ಗಾರ ಪ್ರೇಮದ ಮಾಡುವನು 1 ಬಲ್ಲವನು ಕಂಡೆರಗಿ ಸಿದ್ಧಾಂತದಾ | ಉಳ್ಳಸದ್ಭೋಧವ ಕೇಳುವನು | ಮೆಲ್ಲನೆ ಮನನದಿ ಧ್ಯಾಸವು ಬಲಿಯುತ | ಕ್ಷುಲ್ಲರ ಮಾತಿಗೆ ಮನ-ವಿದನು 2 ಅನ್ಯರ ಸದ್ಗುಣ ವಾರಿಸಿ ಕೊಳುತಲಿ | ತನ್ನವಗುಣಗಳ ಜರಿಸಿದವನು | ಸನ್ನುಡಿ ಬಿರುನುಡಿಗಳಕದೆ ಕುಜನರ | ಮನ್ನಿಸಿ ಶಾಂತಿಯನು ಜಡಿದಿಹನು 3 ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ | ತಿದ್ದುದರಂದದಿ ತಿದ್ದುವನು | ಇದ್ದಷ್ಟರೊಳಗೆ ಸಾರ್ಥಕದಲಿ ದಿನ | ಗದ್ದಿರ ಹೊರಿಯಲು ಉದರವನು 4 ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ | ಗರ್ವವ ತ್ಯಜಿಸಿಹ ಜನರೊಳಗೆ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು | ಅರ್ವವ ಜಗಸನ್ಮತನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೈವಲ್ಯ ಪಡೆವರು ಜನರು - ಹರಿ ಪ ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು ಅ ಹಗೆ ಮಾಡಬೇಡಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡನಲಿದು ಹರಿಯ ಪೊಗಳದ ನಾಲಗೆಯು ಬೇಡ 1 ಮಂದಮತಿಗಳ ಕೂಡ ಮಹಕಥೆಯ ನುಡಿಬೇಡಯತಿಯಾದ ಮೇಲೆ ಸತಿಸುತರಾಸೆ ಬೇಡ..................................................................ಹಿತ ತಪ್ಪಿ ನಡೆವಂಥ ಹೆಂಡತಿಯು ಬೇಡ 2 ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡಮುಟ್ಟಾದ ಮೇಲೆ ಮೋಹಿಸಿ ಕೂಡಬೇಡಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡಕಷ್ಟದೆಸೆಯೊಳು ಧೈರ್ಯ ಬಿಟ್ಟು ಕೆಡಬೇಡ 3 ಜಂಭ ಬೇಡ 4 ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ-ತಾರ್ಥನಾದೆನು ಎಂಬ ಘನತೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಸಾರ್ಥಕದಿ ಭಜಿಸಿ ಸುಖಿಯಾಗು ಮನುಜ 5
--------------
ಕನಕದಾಸ
ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವಗುಣ ಜರಿದು ಎನ್ನ ಮನವೇ | ನಿನ್ನವಗುಣ ಜರಿದೆನ್ನ ಮನವೇ | ಶಿರಿ | ಪನ್ನಗಾದ್ರೀಶನಾ ಕೂಡೋ ಸುಖ ಸೂರ್ಯಾಡೋ ಪ ಕೆಲವು ಪುಣ್ಯವನೇ ಮಾಡಿ | ನರದೇಹದಲ್ಲಿ | ಇಳಿಯೊಳಾಗ್ರದಲಿ ಮೂಡಿ | ಹಲವು ಹಂಬಲಿಂದ ಗೆಳೆಯರೈವರ ಛಂದಾ | ಬೆಳೆಸಿ ಸದ್ಗುಣ ಬಿಡುವರೇ ಅಂಧರಾಗುವರೇ 1 ಮರಹು ಮನೆಯನೆ ಸೇರಿ | ಮಂದತನದೀ | ಅರಿವ ಪಂಥದಲಿ ಜಾರಿ | ಅನುದಿನ | ಕೊರವನಾ ಕೋಡಗದಂತೆ ಕುಣಿದುಚಿತೆ 2 ಒಂದೇ ನಿಷ್ಟೆಯಾ ವಿಡಿದು | ಸದ್ಭಾವದಿಂದಾ | ದುಂದುಗಾವೃತ್ತಿ ಕಳೆದು | ತಂದೆ ಮಹಿಪತಿದಯಾ ನಂದ ಪಡೆದು | ನಿನ್ನಾ ಬಂದ ಸಾರ್ಥಕದಿ ಬಾಳು ಮುನ್ನಿನ ಕೇಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು