ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ ನಾಂ ಬಳಲಿ ಬಂದೆನು ಭಾಮಿನೀ ಪ. ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ ನಾಂ ಕದವ ತೆಗೆಯೆನು ಸಾರೆಲೆ ಅ.ಪ. ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು ನೀ ನೀಪರಿಯೊಳ್ ಪೇಳ್ವುದು 1 ಪರಿ ಕಪಟನಾಟ್ಯವ ಮಾಳ್ಪರೇ ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ ನಾನೋಪೆ ಯಾರಿಗೆ ಸಾರೆಲೊ 2 ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ ಕೇಳ್ ನೀರನಾನೆಲೆ ಶ್ರೀಕರೆ 3 ನೀಂ ಜಾರನಂದದಿ ಕಾಣುವೆ ನೀನಾರು ಪೇಳು ನೋಡುವೆ 4 ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ ಸುಕುಮಾರನಾನೆಲೆ ಭಾಮಿನೀ ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ ದಯೆತೋರು ಮನೋಮೋಹಿನೀ5 ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ ಭಾವಿಸೀ ಭಯಪಡುವೆನೇಂ 6 ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ ನಾಂ ಬೇಡಿಕೊಂಬೆನು ನಿನ್ನನು 7 ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ ಕೈಪಿಡಿದ ದೇವನ ಮೋದದಿ 8 ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9
--------------
ನಂಜನಗೂಡು ತಿರುಮಲಾಂಬಾ
ಪೋ ಪೋಗೆÀಲೋ ಸಾ ಸಾರೆಲೊನಗೆಗಿಂತೆನಲು ಮುನಿದು ಪೋದನೆಮನುಮಥನಯ್ಯ ಕಾಣೆ ಪ.ಎನ್ನ ಪೆಸರು ಮಾಧವನೆಂದೆಂಬರುಅನ್ಯರನೊಲ್ಲದೆ ನಿನ್ನೊಳು ಮನವಿಟ್ಟೆವನವ ತಿರುಗುವ ವಸಂತ ನೀನಾದರೆಮನೆಗ್ಯಾತಕೆ ಬಂದೆ 1ವಕ್ರದ ನುಡಿಗಳ ನುಡಿಯದಿರೆನ್ನನುಚಕ್ರಧರನೆಂದೆಂಬರು ಎನ್ನನುರೊಕ್ಕಕ್ಕೆ ಮಡಕೆಯ ಮಾರುವ ಕುಂಬಾರಒಕ್ಕಲ ಮನೆಗೆ ಪೋಗೋ 2ಹಿರಿಯರು ಹರಿಯೆಂದೆಂಬರು ಎನ್ನನುತರಳೆ ನೀನೇನಾದರೆ ಎಂದೆನದಿರುತರುಗಳೇರಿ ಕುಣಿದಾಡುವ ಕಪಿಗಳತೆರದೊಳಾಡು ಪೋಗು 3ಸರ್ಪನÀ ಮಸ್ತಕದಲಿ ನಲಿದಾಡುವೆಅಲ್ಪಕನೆಂದು ನೀ ಬಗೆಯದಿರೆನ್ನನುತಪ್ಪದೆ ಗಗನದೊಳಿಪ್ಪ ಗರುಡನುಬಪ್ಪನೆ ಪುರದೊಳಗೆ 4ಎನ್ನ ಮಹಂತರನಂತನೆಂದೆಂಬರುಮನ್ನ ಬಂದಂತೆ ನೀ ಮಾತುಗಳಾಡದಿರುಪನ್ನಂಗನಾದರೆ ಪಾತಾಳಕ್ಕೆ ಪೋಗುನಿನ್ನ ಸಂಗಕ್ಕೆ ಅಂಜುವೆ 5ಕಡಲೊಳಗಿಪ್ಪನೆಂದೆಂಬರು ಎನ್ನನುಮಡದಿಯೇನಾದರು ಎಂದೆನ್ನದಿರುಮಡಿದು ಮಡಿದು ಹೋಹ ಮೀನು ಮೊಸಳೆಗಳಗಡಣವ ಕೂಡು ಪೋಗು 6ಸಚರಾಚರಂಗಳ ಸೃಜಿಸಬಲ್ಲವನೆಂದುಸುಚರಿತ್ರ ದೇವತೆಯೆಂದೆಂಬರುಉಚಿತವೆ ಹೆಣ್ಣುಮಗಳ ಕೂಡೆ ಮೋಹದವಚನವು ನಿನಗೆ ರಂಗ ಪೋಗು 7ಆಲದೆಲೆಯಮೇಲೆ ಮಲಗಿಪ್ಪ ವಸ್ತು ನಾನುಪಾಲಮಾರುವವರಿಗೆ ಪರತತ್ವನೆಂಬರುಕಾಲಬೆರಳ ಚುಂಬಿಸುವಗ್ಯಾತಕೆ ಗೋಪಾಲಬಾಲೆಯರಾಟ 8ಮೈಯೊಳು ಸಾವಿರ ಕಣ್ಣುಗಳುಳ್ಳವನಯ್ಯನೆಂದು ದೇವತೆಗ-ಳ್ದಿವ್ಯಚಾರಿತ್ರ ದೇವತೆಯೆಂತೆಂಬರುಅಯ್ಯ ನೀನಾದರೆ ಅಹಲ್ಯಾದೇವಿಯಕಯ್ಯ ಪಿಡಿದ ಕಳ್ಳನೆ ಪೋಗು 9ಕಂಗಳ ಕುಡಿನೋಟಗಳಿಂದ ತ್ರಿಜ-ಗಂಗಳನೆಲ್ಲವ ಸಂಹರಿಸುವೆÀ ನಾನುರಂಗ ನೀನಾದರೆ ಕೊಲೆಗಡುಕನು ನ-ಮ್ಮಂಗಳಕ್ಕೆ ಬರಬೇಡವೊ 10ಸ್ವರ್ಗಕ್ಕೆ ಹೋದರೆ ನಿನ್ನವಗುಣವಿದುಅಗ್ಗಳಿಯದ ಹೊನ್ನನ್ಗೆ(?) ಬಗ್ಗುವಳಲ್ಲ ನೀಒಗ್ಗುವೆ ನಾ ನಿನಗಯ್ಯ ಸ್ವರ್ಗಾಪ-ವರ್ಗವ ಕೊಡುವವನೆ ಪೋ ಪೋ 11ಒಲಿದು ನಾ ನಿನ್ನ ಮನೆಗಾಗಿ ಬಂದರೆಕಲಹದ ಮಾತುಗಳಾಡದಿರು ಎನ್ನಲಲನೆಉರದÀಲ್ಲಿದ್ದು ನಾಭಿಕಮಲದಿಂದಛಲದಿ ಮಗನ ಪಡೆದೆ 12ಮುನಿಗಳರ್ಚಿಸುವ ಶ್ರೀಹಯವದನನು ನಾನುವನಿತೆಯೆನ್ನಿರವನು ಬಲ್ಲವರೆ ಬಲ್ಲರುಉಣಲೀಸೆ ಉಡಲೀಸೆ ತಲೆಯೂರಿ ತಪವನುವನದೊಳು ಮಾಡಿಸುವೆ 13
--------------
ವಾದಿರಾಜ