ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜದಾಕ್ಷಣ ಕಂಜನೇತ್ರನೆ ಸಂಜೀವಿನಿಯಾ ತಂದು ನೀಡಿದಾ ಪ ಪಸುಳನೈಯಾ ವಪುವೆಸೆವ ರಾಯ ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ 1 ಭೀಮಸೇನಾ ಭಕ್ತಕಾಮಪೂರ್ಣಾ ಕಾಮಕೀಚಕಾ ಬಾರ ಪಾಮರರಿದಾ ನಾಕ ನಾನು ಮೆರೆದಾ 2 ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ 3 ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ ವಾಸನ ರಹಿತಾ ಗುಣಗಣಗಡಣಾ ಗರಿಮಾ 4 ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ ವಿಠಲನರಸಿಂಹಾ ಎದೆಯಾರವಿಂದ ನಯನಾ ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ 5
--------------
ನರಸಿಂಹವಿಠಲರು
ಹನುಮನ ಮತದಲಿ ಅನುಮಾನ ಬೇಡವೊ ಮನಮುಟ್ಟಿ ಭಜಿಸಲೊ ಎಲೆ ಮನವೇ ಪ ಸನಕಾದಿ ವಂದಿತ ಮನಸಿಜ ಜನಕ ವನಜನಯನ ಹರಿಗನುಮತವಾದಂತ ಅ.ಪ ವಿಧಿ ಭವಾದಿಗಳಲ್ಲಿ ಅನುಚರರಿವನಿಗೆ ಪರತಂತ್ರರು ವಿವಿಧ ತಾರತಮ್ಯ ನಿರತ ಪೊಂದಿರುವರು ಸಕಲ ಜಗಂಗಳು ನಿಜವೆಂದು ಬೋಧಿಪ1 ಮುಕುತಿಯೆಂಬುದು ನಿಜಾನಂದದ ಅನುಭವ ಭಕುತಿಯೇ ಪಡೆಯಲು ಸಾಧನವು ಪ್ರಕೃತಿ ಸಂಯುತವಾದ ದೇಹವ ಕಳೆಯಲು ಯುಕುತಿ ಬೇರಿಲ್ಲವೆಂದು ಭರದಿ ಸಾರುವಂಥ 2 ನಯನಕೆ ಗೋಚರ ಒಣ ಊಹೆಯಿಂದಲಿ ತಿಳಿಯಲು ಹರಿಯನು ಅಳವಲ್ಲವು ನಿಗಮಗಳಿಂದಲೆ ಅರಿತ ಜ್ಞಾನಿಗೆ ಪ್ರ ಸನ್ನನಾಗುವನೆಂದು ದೃಢದಿಂದರುಹುವ 3
--------------
ವಿದ್ಯಾಪ್ರಸನ್ನತೀರ್ಥರು