ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡು ನಿನ್ನೊಳು ನಿನ್ನುಗಮ ಮನವೆ ಧ್ರುವ ನೋಡು ಒಡನೆ ಖೂನ ಬಿಡದೆ ಸಾರುತದೆ ನಿಗಮಾ ದೃಢ ಭಾವದಲಿ ಪಡೆದು ಸದ್ಗುರು ದಯ ವಿಡಿದು ಸೆರಗ ಕುಡುವದಿದು ಸುಗಮ 1 ಉಗಮಸ್ಥಾನದ ಉದ್ಭವ ತಿಳಿಯದೆ ಬಿಗಿದ್ಹೆಮ್ಮಿಲಿಹುದ್ಯಾಕೆ ಬಗೆ ಬಗೆ ಸಾಧನ ಶ್ರಮಗೊಂಡು ಜಗಜಾಲದಿ ಭ್ರಮಿಸುವುದಿದೇಕೆ 2 ನಿರ್ಮಳ ನಿಶ್ಚಳ ನಿಜಘನವರಿತು ಕರ್ಮ ಬಂಧನವ ಗೆಲಿಯಾ ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ ನಿರ್ಮನದಲಿ ನಿಜಗೂಡ ಮನವೇ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಂದ ದುರಿತಗಳೆಲ್ಲ ಪರಿಹರಿಸಿ ಪೊರೆವದು ಪ ಎಷ್ಟು ಪರಿಯಲಿ ನಿನ್ನ ಎಷ್ಟು ನಾ ಮೊರೆ ಇಡಲು ಕಷ್ಟವನು ಕಳೆವ ಭರ ಕಾಣಲಿಲ್ಲ ದೃಷ್ಟಿಲಿ ನೋಡದೆ ಹೋಗಿ ದಣಿಸುವ 1 ಸಾರ್ಥಕವು ಏನು ಎನ್ನ ಸಲಹದಿರಲು ಕೀರ್ತಿವಂತನು ಎನಿಸಿಕೊಂಡು ಕಾಯದಿರೆ ಅಪಕೀರ್ತಿ ಬಾರದೆ ನಿನಗೆ ಅಧಿಕ ಜನರೊಳಗೆ 2 ಧಾರುಣಿಯೊಳಧಿಕರಿನ್ನಾರು ನಿನಗಿನ್ನು ತೋರು ಮಾರಜನಕನಾದ ಮಹಾಮಹಿಮನೆ ಧೀರ 'ಹೊನ್ನಯ್ಯ ವಿಠ್ಠಲ’ ದೀನ ರಕ್ಷಕನೆಂದು ಸಾರುತದೆ ನಿಮ್ಮ ಕೀರ್ತಿ ಸಕಲ ಲೋಕದಲಿ 3
--------------
ಹೆನ್ನೆರಂಗದಾಸರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು