ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪÀ ವೇದ ಓದಿದರೇನು ಶಾಸ್ತ್ರ ನೋಡಿದರೇನು | ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ 1 ಕಾನನ ಸೇರಿದರೇನು | ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ 2 ಜಪತಪ ಮಾಡಲೇನು, ಜಾಣತನ ಮೆರೆದರೇನು | ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ 3
--------------
ವಿಜಯದಾಸ
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯೇನಾದರೇನು ಜ್ಞಾನವಿಲ್ಲದೆ ಮೋಕ್ಷವಿಲ್ಲಾ ಪ ವೇದವನೋದಿದರೇನು | ಶಾಸ್ತ್ರವ ನೋಡಿದರೇನು | ಕಾದಿ ಕಾದಾಡಿದರೇನು || 1 ಕಾಶಿಗೆ ತಾ ಹೋದರೇನು | ಕಾನನವ ಸೇರಿದರೇನು | ಕಾಶಿ ಪೀತಾಂಬರ ಉಟ್ಟರೇನು 2 ಜಪ ತಪವ ಮಾಡಲೇನು | ಜಾಣತನದೊಳ್ ಮೆರೆದರೇನು | ವಿಜಯವಿಠ್ಠಲನ್ನ ಸಾರಿದರೇನು 3
--------------
ವಿಜಯದಾಸ