ಒಟ್ಟು 7 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ನೀವೆಲ್ಲ ಪರಮಾತ್ಮನೆ ಏಳಿ ಸಾರುವೆ ಈ ನುಡಿ ಕೇಳಿ ಪ ತುಂಬಿಹ ಜಗವನು ನಿಮ್ಮೊಳಗಿರನೇ ಅಲೋಚಿಸಿರೀನುಡಿಯಾ ನಂಬಿರಿ ಶ್ರುತಿಶಿರ ಸಾರಿತು ಪರಮನು ಹೃದಯದ ಗುಹೆಯೊಳಗಿರುವಾ ಕಾಂಬನು ಗುಹೆಗಳ ಕಳೆದುಳಿದಾ ನಿಜ ಸಂಪೂರ್ಣಪದವೇ ಪರಾನಂದಾ 1 ಸ್ಥೂಲದೇಹಮೊದಲಾಗಿಹ ಗುಹೆಗಳ ನೈದನು ಕಳೆಯಲು ಉಳಿವಾ ಮೂಲರೂಪ ಪರಮಾತ್ಮನೆ ತಾನೆಂ ದರಿಯುತ ತಿಳಿಯಿರಿ ನಿಜವಾ ತಿಳಿಯಿರಿ ನಿರುತದಿ ನೀವೇ ಆ ಪದ ಮಾಯಾ ಶಂಕರಾರ್ಯ 2
--------------
ಶಂಕರಭಟ್ಟ ಅಗ್ನಿಹೋತ್ರಿ
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಪವಡಿಸು ಪರಮಾತ್ಮನೆ ಸ್ವಾಮಿಭವರೋಗ ವೈದ್ಯನೆ ಭಕ್ತರ ಪ್ರಿಯನೆ ಪಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿಇಂದ್ರನೀಲ ಮಣಿವiಂಟಪದಿ ||ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲುಸಿಂಧುಶಯನ ಆನಂದದಿಂದಲಿ 1ತೂಗುಮಂಚದಿ ಹಂಸತೂಲದ ಹಾಸಿಗೆನಾಗಸಂಪಿಗೆಯ ಹೂವಿನ ಒರಗು ||ಸಾಗರಸುತೆಯ ಸಮ್ಮೇಳದಲಿ ನಿಜಭೋಗವ ಪಡುತ ಓಲಾಡುತಿರು 2ಸದ್ದಡಗಿತು ಗಡಿಯಾರ ಸಾರಿತು ಬೇಗಮುದ್ರೆಗಳಾಗಿವೆ ಬಾಗಿಲಿಗೆ ||ತಿದ್ದಿದಧವಳ ಶಂಖಗಳ ನಾದದಿಂದಪದ್ಮನಾಭ ಶ್ರೀ ಪುರಂದರವಿಠಲ3
--------------
ಪುರಂದರದಾಸರು