ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ರಾಮಾನುಜರು ಆಚಾರ್ಯ ಪ್ರಾಚಾರ್ಯ ಪರಮಾಚಾರ್ಯಾ ನೀಚತೆ ನೀಗಿಸಿ ನಿನ್ನಂತೆ ಗೈದೇ ಪ ಸರ್ವಗುರುವೇ ನಮಿಪೆ ಧ್ಯಾನಿಪೆ ಶ್ರೀನಿವಾಸಾ ಅ.ಪ ಪಾದೋದಕದಿಂ ಪಾವನಗೈದೇ ಸಾಧು ಸಂಗತಿಗಳ ಸಂತಸದಿ ಪೇಳ್ದೇ1 ಭೇದವ ತೊರೆದೇ ವೇದಗಳೊರೆದೇ ಸಾದರದಿಂ ಸದ್ಬಂಧು ನೀನಾದೇ 2 ಪಾಪವ ಕಳೆದೇ ಗೋಪ್ಯಗಳುಸುರಿದೆ ಶ್ರೀಪತಿಮೂರ್ತಿಯ ಹೃದಯದಿ ತೋರ್ದೆ 3 ಕೃಪೆಯನ್ನು ತೋರ್ದೆ ಅಪಾರ ಮಹಿಮ ಉಪಕರಿಸುತ ಎನ್ನ ಉನ್ನತಿಗೆ ತಂದೆ 4 ಸಂಸಾರಾಂಬುಧಿ ಹಿಂಸೆ ದಾಂಟಿಸಿದೆ ಹಂಸನೆ ಸಿಂಹ ಕಿಶೋರ ನ್ಯಾಯದಿ 5 ವಿಪರೀತಮತಿಯನ್ನ ಪರಿಹರಿಸಿದೆ ನೀಂ ಸುಪಥದಿ ಸುಖದಾನಂದನಿಧಿಯಿತ್ತೇ 6 ಜಾಜೀಶನಿಗೆ ಪ್ರೇಮಪುತ್ರನು ನೀಂ ಪೂಜಿಪೆ ಪದಯುಗ ಶರಣನೆ ಕರುಣಿಸು 7
--------------
ಶಾಮಶರ್ಮರು
ಒಂದು ಬಾರಿ ಸ್ಮರಣೆ ಸಾಲದೆ ಆನಂದ- ಪ. ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರಅ.ಪ. ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದುಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ 1 ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದುಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ 2 ಆರುಮಂದಿ ವ್ಶೆರಿಗಳನು ಸೇರಲೀಸದಂತೆ ಜರಿದುಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ 3 ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ4 ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ 5
--------------
ವಾದಿರಾಜ
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಗುರುಪಾದವೇ ಗತೀ ಮತೀ [ವರ]ಭಕ್ತಿ ಮಾರ್ಗಮೊಳ್ಳಿತೆಲೈ ಮನುಜ ಪ ಗುರುರಾಜ ಶ್ರೀ ರಾಘವೇಂದ್ರನಾ ಸ್ಮರಣಾಮೃತಂ ಹಿರಿದಪ್ಪುದೈ ಅ.ಪ ದ್ವೈತ ತತ್ವ ಸಾರಾಂಬುಧಿ ಚಂದ್ರಮಂ ಭೂತ ಪ್ರೇತ ಭೇತಾಳ ಭಂಜನಂ ಪ್ರೀತ ಮಾಂಗಿರೀಶ ನಿತ್ಯಸೇವನಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ 1 ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ2 ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ ಕರುಣಾಪಾಂಗ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ. ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ 1 ಪಥ ಪುನರುದ್ಧರಿಸಿದ 2 ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ 3 ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ 4 ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ 5
--------------
ಗುರುಗೋವಿಂದವಿಠಲರು