ಒಟ್ಟು 79 ಕಡೆಗಳಲ್ಲಿ , 27 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಪ್ರದಾಯ ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ 1 ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ 2
--------------
ಓರಬಾಯಿ ಲಕ್ಷ್ಮೀದೇವಮ್ಮ
(ಏ) ಸಂಪ್ರದಾಯದ ಹಾಡುಗಳು ಆರತಿ ಬೆಳಗುವೆ ನಿನಗೆ ಶ್ರೀರಾಮ ಸಾರಸಾಕ್ಷ ಹರಿ ಮೇಘಶ್ಯಾಮ ಪ ಪೀತಾಂಬರಧರ ತುಲಸೀಮಾಲ ಪಾತಕ ವಿದಳನ ಸೀತಾಲೋಲ 1 ಕುಂಡಲ ಮೃಗಮದತಿಲಕ ನಿರುಪಮ ಸುಂದರ ಮನ್ಮಥ ಜನಕ 2 ಭರತ ಶತ್ರುಘ್ನರ ಚಾಮರ ಸೇವ ಹರುಷದಿ ತೋರುವ ಪರಮಪ್ರಭಾವ 3 ಸೋದರ ಲಕ್ಷ್ಮಣ ಹನುಮ ಸಮೇತ ಮೋದದಿ ಮಾತೆಯರನು ಪೊರೆದಾತ 4 ಶುಕ ಮುನಿನುತ ಶುಭನಾಮ ಪತಿ ಪೂರ್ಣಸುಕಾಮ 5 ಶರಣಾಗತ ಪರಿಪಾಲಕ ಶೌರಿ ಕರುಣಾಕರ ಕಲಿವೈರಿ ಮುರಾರಿ 6 ಜಾಜೀಶ ಚನ್ನಕೇಶವ ಮೂರ್ತಿ ಅಗಣಿತ ಕೀರ್ತಿ 7
--------------
ಶಾಮಶರ್ಮರು
ಆರಗೊಡವೆ ನಮಗಿನ್ಯಾಕೊ ಹರಿ ಅ ಪಾರ ಮಹಿಮನ ದಯವೊಂದೆ ಸಾಕೊ ಪ ಮಾರಿಗೀರಾಗಲಿ ದೂರಿ ಸಕಲರೆನ್ನ ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ ಜಗಜನ ಕಂಡಂತೆ ಬೊಗಳಲಿ ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ ನಿಗಮಾಗಮನುತ ಜಗಜೀವೇಶನ ಸೊಗಸಿನ ಕೃಪೆಯೊಂದೆ ನಮಗಿರಲಿ 1 ದುರುಳ ಕೃತ್ತಿಮನೆಂದು ಜರಿಯಲಿ ಜರಿಜರಿದು ಮರೆದ್ಹೋಗಲಿ ಚರಣದಂತಿ ಪರಮ ಪಾವನಂಘ್ರಿ ಕರುಣಾಮೃತವೊಂದೆ ನಮಗಿರಲಿ 2 ಕ್ಷೇಮ ತುಸು ಕಾಣದಳಿದ್ಹೋಗಲಿ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಧ್ಯಾನವೊಂದೇ ನಮಗಿರಲಿ 3
--------------
ರಾಮದಾಸರು
ಆರತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ ಪ ಮಾರಸುಂದರ ಮೋಹನಾಂಗ ಸಾರಸಾಕ್ಷ ಕೃಪಾಪಾಂಗ ಕಮಲ ನಯನ ಹರಿಯೆ ನಿನಗೆ ವಿಮಲಮುತ್ತಿನ ಆರತಿಯ ಕಮಲ ಮುಖಿಯು ಕರದಿ ಪಿಡಿದು ಕಮಲವದನ ಕೃಷ್ಣ ನಿನಗೆ 2 ಜಾಣ ಪ್ರಾಣನಾಥ ವಿಠಲ ಆಣಿ ಮುತ್ತಿನ ಆರತಿಯ ಜಾಣತನದಿ ಕರದಿ ಪಿಡಿದು ಪ್ರಾಣಕಾಂತ ಕೃಷ್ಣ ನಿನಗೆ 3
--------------
ಬಾಗೇಪಲ್ಲಿ ಶೇಷದಾಸರು
ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ. ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ ಸೇರಿ ಲಕುನಿಯಿಂದ ಮೆರೆವೊ ಮೂರುಲೋಕದೊಡೆಯ ಕೃಷ್ಣಾ ಅ.ಪ. ಮೀನನಾಗಿ ವೇದ ತಂದು ದಾನವರ ವಂಚಿಸುತ್ತ ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1 ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2 ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3
--------------
ಸರಸ್ವತಿ ಬಾಯಿ
ಉ. ಲಕ್ಷ್ಮೀದೇವಿ ಅಂಬಾಬಾಯೇ ನಂಬಿದೆ ಬಾ ಜನನೀ ಪ ಕೋಮಲಾಂಗಿಯೇ ಕಾಮಿತದಾಯಕೆಕರುಣಾವಾರಿಧಿಯೇ ತಾಯೇ 1 ಸಾರಸಾಕ್ಷಳೇ ತೋರಿಸು ಹರಿಯನ್ನುಪೋಷಿಸೆನ್ನ ಮನಸು ತಾಯೇ 2 ಇಂದಿರೇಶನಂಕವಿಹಾರಿಣೀಸುಂದರಾಂಗ ಸುಭಗೇ ತಾಯೇ 3
--------------
ಇಂದಿರೇಶರು
ಕನಸಿನಲಿ ಕಂಡೆನಾ-ಶ್ರೀನಿವಾಸನಾ ಕಾಣದಾತನ ||ಕನಸಿನಲಿ|| ಪ ಶರದಾಭಗಾತ್ರನ-ಶಂಪಾಭೋಜ್ವಲ ಕರಪೀತವಸ್ತ್ರನ ಸಾರಸಾಕ್ಷನ ಶರದಿಂದುವಕ್ತ್ರನ ಸಿರಿಯನುರದಿತಾನಿರಿಸಿಕರಗಳಿಂ ದರಚಕ್ರಗಳನು ಧರಿಸಿರ್ಪಾತನ 1 ಕಾಮನಂ ಪೆತ್ತನ ಕಾಕುಸ್ಥನಿಗೆ ಕಾಮಿತವಿತ್ತನ ಕೌಸ್ತುಭಮಣಿ-ಧಾಮವಂ ಪೊತ್ತನ ಹೇಮ ಸೂತ್ರಮಣಿ ದಾಮಭೂಷಣ ಸ್ತೋಮ ದಿವ್ಯಗುಣರಾಮಣೀಯನ ||ಕನಸಿನಲಿ || 2 ಸುರವೃಂದಾನಂದದಿ-ಸ್ತುತಿಸುತ್ತ ಬರುತಿರೆ ತೂರ್ಯಾರವದಿ ಸಿತಛತ್ರಾದ್ಯುರುತರ ರಾಜ ಚಿಹ್ನದಿ ಗರುಡನೇರಿ ನಿಜ ಶರಣರ ಪೊರೆಯುವ ವರದಪುಲಿಗಿರಿ ವರದವಿಠಲನ ||ಕನಸಿನಲಿ|| 3
--------------
ಸರಗೂರು ವೆಂಕಟವರದಾರ್ಯರು
ಕರುಣವಾರಿಧಿಯಲಾ ವಿಶ್ವರೂಪ ಪ ಸಾರಸಾಕ್ಷ ನವನೀತಚೋರಾ ಅ.ಪ ಘನಗುಣ ಮಣಿಗಣ ರಂಜಿತ ವಿಮಲ 1 ದಾನವರಿಪು ಮಾಲೋಲ ಮಾಂಗಿರೀಶಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೇಳಿಪೇಳಮ್ಮ ನಮ್ಮಮ್ಮ ಲಕುಮೀ ಪ ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ ಅ.ಪ. ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ 1 ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ 2 ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ 3 ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ 4 ಪಾದ ಬಾಲ್ಯದಿಂದ ಸೇರಿದ್ದಕ್ಕೆನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ 5 ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣಅಮರ ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ 6 ಸುಂದರಿ ಸೌಭಾಗ್ಯವಂತೆ ಮಂದಿರದೋಳಿಪ್ಪನನ್ನುಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ 7
--------------
ಇಂದಿರೇಶರು
ಕೇಳೇ ಯಶೋದೆ ನಿನ್ನ ತನಯನ ಲೀಲೆಯ ಪೇಳಲು ಅಳವಲ್ಲವೇ ಪ ಬಾಳುವ ಸತಿಯರ ಧಾಳಿ ಮಾಡುವ ಯದÀು ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ ಇಂದುವದನ ಎಮ್ಮ ಮಂದಿರಗಳ ಪೊಕ್ಕು ಪೊಂದುವ ಪಾಲ್ಬೆಣ್ಣೆಯ ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು ಮಂದಹಾಸವ ಬೀರಿ ಮನವ ಸೋಲಿಸುವನು 1 ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ ಸೇರುವ ಎಮ್ಮೊಡನೆ ಮೀರಿ ಪೋಗಲು ಕಾಲು ಬಾರದ ಎಮ್ಮೊಳು ಸಾರಸಾಕ್ಷ ಕೃಷ್ಣ ಸರಸವ ತೋರುವ 2 ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು ಅನ್ಯಾಯಕಾರನಮ್ಮ ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ ಬೆನ್ನು ಹತ್ತುವೆವು ಕನ್ಯೆಯರೆಲ್ಲರು 3
--------------
ವಿದ್ಯಾಪ್ರಸನ್ನತೀರ್ಥರು
ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ ಅಸುವನೀಗಲು ನಾನ್ಹಸಗೆಟ್ಟು ಬೇಡದ ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ 1 ಅತಿಶಯದ ಬಡತನವು ಸತತ ಪೀಡಿಸಲೆನಗೆ ಗತಿಯಿಲ್ಲದವವೆನುತ ಸತಿಸುತರು ಜರಿಲಿ ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು ಹಿತದಿಂದ ತೊಲಗಿಸೈ ರತಿಪತಿಪಿತನೆ 2 ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು ಹರಕೊಂಡು ಹೋಗಲಿ ಹರಿ ಕರುಣದೋರೊ ನರಕಿಯೆನಿಸುವ ಮಹ ತಿರಕಿ ಸಂಸಾರದ ಮರುಕವನು ಪರಿಹರಿಸೊ ಪರಕೆ ಪರತರನೆ 3 ಊರು ನಾ ಸೇರಿರಲಿ ಅರಣ್ಯದೊಳಗಿರಲಿ ಮೀರಿದ ರೋಗದಿಂ ಘೋರ ಬಡುತಿರಲಿ ಆರೈಸದಾರನ್ನು ಸಾರಸಾಕ್ಷನೆ ನಿನ್ನ ಪಾರನಾಮದ ಸವಿ ಸುಸಾರ ಎನಗಿರಲಿ 4 ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ ಕೊಡುವುದಾದರೆ ನೀನೆ ಕೊಡು ಎನಗೆ ಇದನು ಪೊಡವಿಯವರಿಗೆ ಬಾಗಿ ಬೇಡದ ಪದವಿಯನು ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ 5
--------------
ರಾಮದಾಸರು
ಕ್ಷೀರಸಾಗರ ಸಂಭವೆ ರಮೆ ಪಾಲಯಾಶು ಮಾಂ ದೇವಿ ಪ ಮಾರಜನಕ ಮೋಹನಾಂಗಿಯೆ ಸಾರಸಾಕ್ಷಿಯೆ ವರಲಕ್ಷ್ಮಿಯೆ ಅ.ಪ. ಪದ್ಮಗಂಧಿಯೆ ಪದ್ಮ ವದನೆಯೆ ಪದ್ಮನೇತ್ರೆಯೆ ಪದ್ಮಹಸ್ತಯೆ ಪದ್ಮನಾಭ ಸುಪದ್ಮಿನೀ ಭಾಮೆಯೆ 1 ಮಣಿ ಚಂದ್ರಮಂಡಲೆ ಮಧ್ಯಭಾಸುರೆ ಶ್ರೀ ಸಿಂಧುರಗಮನೆಯೆ 2 ಭೋಗಭಾಗ್ಯವನಿತ್ತು ನೀ ಪಾಲಿಸು ಶ್ರೀ ಧೇನುಪುರೀಶ್ವರಿ 3
--------------
ಬೇಟೆರಾಯ ದೀಕ್ಷಿತರು
ಜಲಧಿ ಜಾತೆ ಬಾಲೆ ಸಾರಸಾಕ್ಷಿ ಮಂಗಳೆ ಹಾರನೂಪುರಾದಿ ಲೋಲೆ ಬಾರೆ ಕಮಲೆ ನಿರ್ಮಲೆ ಪ ರಾಜ ರಾಜ ಪೂಜಿತಾಂಘ್ರಿ ರಾಜಗೃಹ ನಿವಾಸಿನಿ ರಾಜಕಾಂತಿ ಕೋಮಲಾಂಗಿ ರಜಿಸೌ ಮಹಾತ್ಮಳೆ 1 ಮಂಗಳಾಂಗಿ ಭೃಂಗವೇಣಿ ಅಂಗನಾ ಶಿರೋಮಣಿ ಅಂಗಭವ ಸುಮಾತೆ ಪೊರೆಯೆ ಸಂಗತಾರ್ತಿಹಾರಿಣಿ 2 ದೀನನನ್ನು ನೋಡು ದಯದಿಂ ಸಾನುರಾಗದಿಂದಲಿ ಧೇನುನಗರ ಪಾಲಿನಿ ಶ್ರೀ ಮಾನಿನೀ ಹರಿಪ್ರಿಯೆ 3
--------------
ಬೇಟೆರಾಯ ದೀಕ್ಷಿತರು
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು
ದಾನವಕುಲ ದಮನಾ ಕೇಶವ ದೀನಪಾಲ ಗಾನಲೋಲ ಶ್ರೀಜನಾರ್ದನ ಪ ವಾನರಪತಿಸದನಾ ಸನಕಾದಿ ಸೇವಿತ [ದೀನ] ಶರಣ್ಯ ಸಾರಸಾಕ್ಷ ಲೋಕ ಮೋಹನ ಅ.ಪ ಶ್ರೀ ರಮಣೀ ಸೇವಿತ ಚರಣಾಬ್ಜ ವಾರಿಧಿ ಶಯನಾ ನಾರದನುತ ಚರಣಾ | ಸುರರಾಜ ಪೂಜಿತ ನೀರಜಾಕ್ಷ ಮಾಂಗಿರೀಶ ವಾರಿಜಾಸನಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್