ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ಬಾರದೊ ಹರಿಯೆ ನೀತವೆ ಇದು ಸರಿಯೆ ಪ ನಿಗಮ ಸಂಗೀತನಾಮ ಜಲ ಜಾತನಯನ ಬಹುಪ್ರೀತಿ ಮಾಡಿದರು ಅ.ಪ ಕುಂದರದನ ಕುರುವಿಂದಾಧರ ಪೂ ರ್ಣೇಂದು ವದನ ಮುನಿವಂದ್ಯ ಎಂದಿಗೆ ಈ ಭವಬಂಧ ಬಿಡಿಸಿ ದಯ ದಿಂದ ತೋರುವಿಯಾನಂದ ಕುಂದುಗಳೆಣಿಸದೆ ಚಂದದಿ ಸಲಹಲು ಎಂದೆಂದಿಗು ನೀ ಗತಿಯೆಂತೆಂದರು 1 ಮಾರಜನಕ ಗಂಭೀರ ಹೃದಯ ಸಂ ಚಾರ ಭಜಕ ಮಂದಾರ ತೋರು ನಿನ್ನ ಪದ ಸಾರಸವನು ಮುನಿ ನಾರದಾದಿ ಪರಿವಾರ ಘೋರ ಶರಧಿಯೊಳು ಸೇರಿದವರಿಗಿ ನ್ನಾರು ಬಂದು ಉದ್ಧಾರ ಮಾಡುವರು 2 ಶ್ರೀಶ ಯದುಕುಲಾಧೀಶ ಮೇಘ ಸಂ ಕಾಶ ರೂಪ ಸರ್ವೇಶ ಘಾಸಿಪಡಿಪ ವಿಷಯಾಸೆಗಳೆಲ್ಲವ ನಾಶಗೈಸೊ ಶ್ರೀನಿವಾಸ ದಾಸ ಜನರಿಗುಲ್ಲಾಸವ ಕೊಡುತಿಹ ವಾಸುದೇವವಿಠಲಯ್ಯನೆ ಎನ್ನೊಳು 3
--------------
ವ್ಯಾಸತತ್ವಜ್ಞದಾಸರು
ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ. ನ್ಯಾಯವನರಿಯದೆ ನೀ ಮಾಯಾಮೋಹವೆ ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ. ತನುಮನಕನಕವಿದು ನಿತ್ಯದಿ ತನದಾಗಿಹುದೆಂದು ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ ಸಣ್ಣತನದಿ ಜೀವನ ವ್ಯರ್ಥವೆನಿಸುವ 1 ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು ಗಜಪತಿ ವರದನ ಪದಪಂಕಜ ಮಹಿಮೆಯ ನಿಜವರಿಯದೆ ದುರ್ಜೀವನವೆನಿಸುವ 2 ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು ಮಾರಪಿತನ ಪದಸಾರಸವನು ನೆನೆ [ನೆನೆದು] ನೀರ ಶೇಷಗಿರಿವರನೆÀ ಗತಿಯೆನೆ 3
--------------
ನಂಜನಗೂಡು ತಿರುಮಲಾಂಬಾ