ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಮುಖ ಗಣಪನಂಬುಜಪಾದಕ್ಕೆರಗುವೆ ನಿಜವಾದ ವರವ ನಾ ಬೇಡಿಕೊಂಬೆ ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ ತ್ರಿಜಗವಂದಿತನ ಕತೆಯ ಪೇಳ್ವೆನು 1 ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ ಏಕವಾಗಿ ಮಾತನಾಡಿಕೊಂಡು ತಾವು ಅ- ನೇಕ ಸಂಭ್ರಮದಿಂದ ಆಡಿ ನೀರಾಟವ ಬೇಕಾದೂಟವನುಂಡು ಬರುವೋಣೆಂದು 2 ಘೃತ ಪರಮಾನ್ನವು ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3 ಕೇಸರಿ ಕುಂಕುಮರಿಷಿಣ ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ ಪತ್ರೆ ಲವಂಗ ತಬಕಿಲೆ ತಂದರು 4 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು- ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5 ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ ವಾಲೆ ಸರಪಳಿ ಮುತ್ತು ಬು- ಗುಡಿ ಚಂದರ ಬಾಳ್ಯ ಹೊಳೆಯುತಲಿ 6 ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ- ಜ್ರದ್ಹರಳು ಬಲಮೂಗಿನಲಿ ದಿವ್ಯ ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ ಪದ್ಮದ್ಹೂವಿನ ಕುಬುಸಗಳ ತೊಟ್ಟು 7 ಹರದಿಯರೆಲ್ಲರು ಪರಮ ಸುಭ್ರಮದಿಂದ ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು ಪರಿ ಬಣ್ಣ ಸೀರೆಗಳುಟ್ಟು ಕಾಲ- ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8 ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ ಅಲ್ಲಲ್ಲೆ ನಿಂತು ನೋಡುತ ಬಂದರು 9 ಕುಂದ ಮಂದಾರ ಸುಗಂಧಿಕ ದವನವು ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು ಚೆಂದ ಚೆಂದದ ಶಾವಂತಿಗೆ ವನವು 10 ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ- ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು- ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ ಪಕ್ವಾದ ಜಂಬು ಸೀತಾಫಲವು 11 ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ ಕಳಿತ ಮಾವಿನ ಹಣ್ಣು ಕದಳೀ ಫಲ ಬೋರೆ ಶ್ರೀತುಳಸಿ ವನಗಳಲ್ಲೆ ಅರಿಷಿಣಂಜೂರಿ ಔದುಂಬ್ರ ಫಲ 12 ಚಕೋರ ಚಾತಕ ಗಿಳಿ ಚಕ್ರವಾಕ ಪಕ್ಷಿ ಗಿಳಿಹಿಂಡು ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ ತಂದೆ ಮಕ್ಕಳು ಏರೋವಾಹನವು 13 ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ ಕೊಟ್ಟವು ಶಕುನ ಜಲಕ್ರೀಡೆಗೆ 14 ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ ಏನು ಪುಣ್ಯ ಮಾಡಿದ್ದಳೊ ಯಮುನಾ 15 ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ- ದಳು ತಾ ಪ್ರಯಾಗದಲಿ ತ್ರಿವೇಣಿ ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ ಪೋಗೋಳು ಕಾಶಿ ಪಟ್ಟಣಕೆ 16 ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು ವರುಣನರ್ಧಾಂಗಿ ನೀ ವರವ ಕೊಡೆ ತಾಯೆ ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ- ಫಲಕೊಟ್ಟು ಪಾಲಿಸೀಗೆಂದೆನುತ 17 ನೋಡುತ ನಗುತ ಮಾತಾಡುತ ನಿಂತರು ಓಡುತಾವೆ ಜಲ ಸೆಳವಿನಿಂದ ಆಹ ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18 ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು ಥಟ್ಟನೆ ಇಳಿದರು ನದಿಯೊಳಗೆ 19 ವಾರಿಗೆ ಗೆಳೆತೇರು ವರ ಮೋಹನಾಂಗೇರು ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ ನೀರೊಳು ನಿಂತು ಮೈ ತೊಳೆದರಾಗ 20 ಭಾರಿ ಸೆಳವಿನೊಳು ಬತ್ತಲೋಲ್ಯಾಡುತ ಸಾರಸಮುಖಿಯರು ಸರಸದಿಂದ ಚೆಲ್ಲೆ ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು ತುಂಬಿ ಚೆಲ್ಲ್ಯಾಡುತಲಿ 21 ಸರ್ಪನಂಥ ಹೆರಳೊಲಿವುತ ನೀರೊಳು ಮುತ್ತಿನ ಸರಪದಕ್ಹೊಳೆಯುತಲಿ ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು ತೆಪ್ಪದಂದದಲಿ ತೇಲಾಡುತಿರೆ22 ಅಂಬುಜಮುಖಿಯರು ಸಂಭ್ರಮದಿಂದಲಿ
--------------
ಹರಪನಹಳ್ಳಿಭೀಮವ್ವ
ಆರತಿಯೆತ್ತಿದರು ಅಪ್ರಮೇಯಗೆ ಪ ಸಾರಸಮುಖಿಯರು ಸಂತೋಷದಿಂದ ಅ.ಪ ತರಳಗೋಸುಗ ಕಂಬ ಬಿರಿದು ಅವತಾರಗೈದು ದುರುಳನುದುರವ ಸೀಳಿ ಕರುಳ ಧರಿಸಿದವಗೆ 1 ದಾದಿ ಕಾರಣ ಪೂರ್ಣ ಭೋದಾಮೃತಮಯಗೆ 2 ಕಾಮುಕರನು ಕೊಂದು ಭೂಮಿ ಭಾರವನಿಳುಹಿ ಸ್ವಾಮಿಯಾಗಿ ಮೆರೆವ ಶ್ರೀ ಮನೋಹರನಿಗೆ 3 ಸ್ವಸ್ತಿಯಾಗಲಿ ಎಂದು ಹಸ್ತಿನಿಯರು | ಹವಳದ 4 ಕಿಂಕರ ಜನಮನ ಸಂಕಟಹರ ನಿಷ್ಕ ಳಂಕ ನೀನೆನ್ನುತ ಶಂಕಿನಿಯರು | ರತ್ನದ 5 ಭೃತ್ಯವತ್ಸಲನೆಂದು ಚಿತ್ತಿನಿಯರು | ಮುತ್ತಿನ 6 ಕುಂದಣ 7 ಸೌಪರ್ಣಿ ವಾರುಣಿ ರ್ವಾಣಿÉ ಸ್ಮರನ ರಾಣಿ ಯಿಂದ್ರಾಣಿ ಮುಖ್ಯರು | ಹುವ್ವಿನ 8 ಪುರಹರ ವೈರಿ ಮುಖ್ಯ ಸುರವಂದ್ಯ ಶರಣ ಶ್ರೀ ಗುರು ರಾಮವಿಠಲಗೆ 9
--------------
ಗುರುರಾಮವಿಠಲ
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ