ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತತ್ವದರ್ಶನದಲ್ಲಿ ಮಂತ್ರಮಹಿಮೆ ಸ್ವಾಮಿಗರ್ಪಿಸೋ ಮಾನವಾ ಪ ಕಾಮಿತಾರ್ಥವ ಬೇಡದೆ ಶತ ಸಾಮಜಾಪತಿ ನೆನೆವ ಮಂತ್ರ ಅ.ಪ ದಿವಿಜರನಿಶ ಪಠಿಪ ಮಂತ್ರ ಜವನ ಭಟರ ಸದೆದ ಮಂತ್ರ 1 ಲಲನೆಪಾಂಚಾಲಿ ಹೇಳಿದ ಮಂತ್ರ ಬಲಿಗೆ ವರವನಿತ್ತ ಮಂತ್ರ 2 ಸಾರಸಭವನುಲಿದ ಮಂತ್ರ ಘೋರದುರಿತನಾಶಕ ಮಂತ್ರ ಸಂ ಸಾರಜಲಧಿ ದಾಟಿಪ ಮಂತ್ರ 3 ಉಸುರಲಳವೆ ಪರಮ ಮಂತ್ರ 4 ನರನ ಪಾಲಿಪೊಂದು ಮಂತ್ರ 5 ಸಿರಿಗೋವಿಂದನೆಂಬ ಮಂತ್ರ ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಮಿಸುವೆನಾಂ ಶ್ರೀ ಹಯವದನಾ ನಿನ್ನ ನಮಿಸುವೆನಾಂ ಪ. ಕಾಮಜನಕ ಸದಾಶಿವಸನ್ನುತ ಕಾಮಿತ ಶುಭಫಲದಾ ವರದಾ ಅ.ಪ. ಸಾರಸ ಸಖ ನಿಭ ವದನಾ ಸರಸಿಜನಯನಾ ಶ್ರೀನಾರೀಮಣಿ ಸದನ ಸಾರಸಭವನುತ ಚರಣ ಮುರಮದ ಹರಣ ಭೂರಿ ಪೂರಿತ ಲೋಚನ ಶರಣಾಗತ ಜನಾರ್ತಿ ಹರಣ ಚಾರುತರ ಸುಜ್ಞಾನದಾಯಕ ಧೀರ ಗುಣ ಗಂ ಭೀರ ಸುಮನೋಹರ ಶ್ರೀಹಯವದನಾ 1 ಕೌಸ್ತುಭ ಮಣಿಹಾರ ಪುಸ್ತಕಧÀರ ಶ್ರೀಕರ ಶ್ರೀ ವತ್ಸಾಂಕಿತ ವಕ್ಷ ಸುಂದರ ಪಕ್ಷಿಗಮನ ಪುರು ಷೋತ್ತಮ ನಮಪೂರ್ಣಕಾಮ ಭಕ್ತಿವರ್ಧನ ನಿಲಯಾಪ್ರಮೇಯ ಭಕ್ತಿ ಜ್ಞಾನ ಪ್ರದಾಯಕ ಮುಕ್ತಿ ಮಾರ್ಗ ಪ್ರದರ್ಶಕ ನಕ್ತÀಂ ಚರರಾಜತಮೋಮಿಹಿರ ಶ್ರೀಹಯಾಸ್ಯ 2 ಶ್ರೀಶ ಜನಾರ್ದನ ಛಿದ್ವಿಲಾಸ ಕಮನೀಯವೇಷ ಶ್ರೀ ಶೇಷಾದ್ರಿ ನಿವಾಸ ದಾಸಜನ ಹೃತ್ಪದ್ಮ ವಿ ಕವಿ ಮನೋಲ್ಲಾಸ ಭಾಸ್ಕರಕೋಟಿ ದ್ಯುತಿಭಾಸ ಹಯವದನಾ ನಿನ್ನ ನಮಿಸುವೆನಾ 3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೋ ವನಮಾಲಾ | ಗೋಪಾಲಬಾಲಾ ಪ ಮುರಾರಿ ಪೂಜಿತ | ಸಾರಸಭವನುತ ನಾರದಮುನಿ ವಿದಿತಾ | ನೀರಜನೇತ್ರ 1 ನೀಲ ನೀರದಕಾಯ | ಪಾಲಿತ ಮುನಿಗೇಯ ಮಾಲಕುಮಿಪ್ರಿಯಾ | ಲೀಲಾಮಯ 2 ಶೃಂಗಾರರಾಜಿತ ಮಂಗಳವೇಷಿತ ಮಾಂಗಿರಿಚರಣಾದಿತ | ಗಂಗಾನತ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರಧರ ಗೋವಿಂದ ಮುಕುಂದ ಸ ನಂದವಂದ್ಯನೆ ಲಾಲಿಸೋ ಪ ಕುಂದರದನ ಶರದಿಂದುವದನ ಮುಚು ಕುಂದ ವರದನೆ ಪಾಲಿಸೋ ಅ.ಪ ಸಾರಸಭವನುತ ಸಾರಚರಿತ ಸಂ ಸಾರಪಯೋನಿಧಿ ಪಾರದನೆ ವಾರಿಧಿ ಶಾರೀರ ವಿಹಾರ ವಿಶಾರದನೆ 1 ಪಾಶ ವಿಮೋಚನ ಪಟುಚರಿತ ವಿನುತ ಕೇಶವ ಸದ್ಗುಣ ಗಣಭರಿತ 2 ಧರೆಯೊಳು ಶ್ರೀ ಪುಲಿಗಿರಿಯೊಳು ನೆಲೆಸಿಹ ಶರಣರ ಸಲಹುವ ಶ್ರೀಧರನೆ ಚಕ್ರಧರ ವರನೆ 3
--------------
ವೆಂಕಟವರದಾರ್ಯರು
ವಿನುತ ಚರಣ ನಾರಾಯಣ ಪ ವಾರಿಧಿಶಯನ ಘಣಿಮಣಿ ಭೂಷಣಾ ಸಾರಸಭವನುತ ನಾರಾಯಣಾ ಅ.ಪ ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ ಸಿಂಧುಶಯನ ಗೋವಿಂದನು ನೀನೇ ಮಂದರಧರ ಮುಚುಕುಂದ ವರದ ನೀನೇ ಇಂದಿರೆಯರಸ ಮಾಂಗಿರಿಯ ರಂಗಯ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು