ಒಟ್ಟು 16 ಕಡೆಗಳಲ್ಲಿ , 9 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ತತ್ವದರ್ಶನದಲ್ಲಿ ಮಂತ್ರಮಹಿಮೆ ಸ್ವಾಮಿಗರ್ಪಿಸೋ ಮಾನವಾ ಪ ಕಾಮಿತಾರ್ಥವ ಬೇಡದೆ ಶತ ಸಾಮಜಾಪತಿ ನೆನೆವ ಮಂತ್ರ ಅ.ಪ ದಿವಿಜರನಿಶ ಪಠಿಪ ಮಂತ್ರ ಜವನ ಭಟರ ಸದೆದ ಮಂತ್ರ 1 ಲಲನೆಪಾಂಚಾಲಿ ಹೇಳಿದ ಮಂತ್ರ ಬಲಿಗೆ ವರವನಿತ್ತ ಮಂತ್ರ 2 ಸಾರಸಭವನುಲಿದ ಮಂತ್ರ ಘೋರದುರಿತನಾಶಕ ಮಂತ್ರ ಸಂ ಸಾರಜಲಧಿ ದಾಟಿಪ ಮಂತ್ರ 3 ಉಸುರಲಳವೆ ಪರಮ ಮಂತ್ರ 4 ನರನ ಪಾಲಿಪೊಂದು ಮಂತ್ರ 5 ಸಿರಿಗೋವಿಂದನೆಂಬ ಮಂತ್ರ ಮಂಗಳಕರ ರಂಗಮಂತ್ರ ಗಂಗಾಜನಕನೇಂಬೀ ಮಂತ್ರ ಶೃಂಗಾರಾಬ್ಧಿ ಸೋಮಮಂತ್ರ ಮಾಂಗಿರೀಶನೆಂಬ ಮಂತ್ರ 6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೂರದಿ ನಿಲಿಸಯ್ಯ ರಂಗಯ್ಯ ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ ಸಾರಸಭವ ವಾಲ್ಮೀಕಿ ಪುರಂದರ ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ ಹನುಮ ಖಗೇಶ್ವರ ದನುಜ ವೈರಿಗಳೆಲ್ಲ ನಿತ್ಯ ಸೂರಿಗಳು ಘನ ವೇದಾಂತ ಸಂಗೀತ ಕೋವಿದರು ವನಜನಾಭನೆ ನಿನ್ನ ಸೇವಿಸುತಿರಲಿ 1 ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ ಕುಣಿ ಕುಣಿದೆರಗುವ ಭಕ್ತರ ಬಳಿ ನಾ ತೃಣಕೆ ಸಮ ನಾನಿಣುಕಿ ಬಾಗಿ ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಮಿಸುವೆನಾಂ ಪಾಲಿಸು ನಾಥನೆ ಪ ಸಾರಸಭವತಾತ ನಾರದ ಮೌನಿನುತ ಮೂರ ಕೋಟಿ ಸುಂದರಾಂಗ ಮುರಹರ ಗೋವಿಂದ 1 ಶಂಖಚಕ್ರ ಗಧಾ ಪಂಕಧಾರಿ ಸದಾ ಕಿಂಕರಗಣ ಪಾವನಘನ ವೆಂಕಟರಮಣ2 ಶ್ರೀಜನಾರ್ಧನ ರಾಜಸತನಾ ಮೂಜಗಭರಿತ ಪರಾತ್ಪರ ಜಾಜಿಶ್ವರಾ 3
--------------
ಶಾಮಶರ್ಮರು
ನಮಿಸುವೆನಾಂ ಶ್ರೀ ಹಯವದನಾ ನಿನ್ನ ನಮಿಸುವೆನಾಂ ಪ. ಕಾಮಜನಕ ಸದಾಶಿವಸನ್ನುತ ಕಾಮಿತ ಶುಭಫಲದಾ ವರದಾ ಅ.ಪ. ಸಾರಸ ಸಖ ನಿಭ ವದನಾ ಸರಸಿಜನಯನಾ ಶ್ರೀನಾರೀಮಣಿ ಸದನ ಸಾರಸಭವನುತ ಚರಣ ಮುರಮದ ಹರಣ ಭೂರಿ ಪೂರಿತ ಲೋಚನ ಶರಣಾಗತ ಜನಾರ್ತಿ ಹರಣ ಚಾರುತರ ಸುಜ್ಞಾನದಾಯಕ ಧೀರ ಗುಣ ಗಂ ಭೀರ ಸುಮನೋಹರ ಶ್ರೀಹಯವದನಾ 1 ಕೌಸ್ತುಭ ಮಣಿಹಾರ ಪುಸ್ತಕಧÀರ ಶ್ರೀಕರ ಶ್ರೀ ವತ್ಸಾಂಕಿತ ವಕ್ಷ ಸುಂದರ ಪಕ್ಷಿಗಮನ ಪುರು ಷೋತ್ತಮ ನಮಪೂರ್ಣಕಾಮ ಭಕ್ತಿವರ್ಧನ ನಿಲಯಾಪ್ರಮೇಯ ಭಕ್ತಿ ಜ್ಞಾನ ಪ್ರದಾಯಕ ಮುಕ್ತಿ ಮಾರ್ಗ ಪ್ರದರ್ಶಕ ನಕ್ತÀಂ ಚರರಾಜತಮೋಮಿಹಿರ ಶ್ರೀಹಯಾಸ್ಯ 2 ಶ್ರೀಶ ಜನಾರ್ದನ ಛಿದ್ವಿಲಾಸ ಕಮನೀಯವೇಷ ಶ್ರೀ ಶೇಷಾದ್ರಿ ನಿವಾಸ ದಾಸಜನ ಹೃತ್ಪದ್ಮ ವಿ ಕವಿ ಮನೋಲ್ಲಾಸ ಭಾಸ್ಕರಕೋಟಿ ದ್ಯುತಿಭಾಸ ಹಯವದನಾ ನಿನ್ನ ನಮಿಸುವೆನಾ 3
--------------
ನಂಜನಗೂಡು ತಿರುಮಲಾಂಬಾ
ನಿರ್ಮಲ ವಿಧುಹಾಸಂ ಪ ಮಾನಂದ ವಿಲಾಸಂಅ.ಪ. ಶ್ರೀ ವೇದಪುಷ್ಕರಣೀ ತಟ ಶ್ರೀ ಕರೋದ್ಯಾನ ವಿಹಾರಂ ಪಾವನ ವೃದ್ಧಿ ವಿಮಾನಾಂತರ ಪದ್ಮಾಸನ ಕೃತ ನಿಜಪರಿಚಾರಂ 1 ಸಂಪದಮಾತ್ರಿತ ಸುರಭೂಜಂ ನಿಜ ಸಂಸ್ತುತಿ ಭಾಜಂ 2 ಸಾರಸಭವ ಸಂಕ್ರಂದನಮುಖ ತ್ರಿದಶಾಧಿಪಜನ ಪರಿವಾರಂ ವರದ ವಿಠಲ ಮುಕ್ತಿ ಸುಗುಣಮುದಾರಂ3
--------------
ಸರಗೂರು ವೆಂಕಟವರದಾರ್ಯರು
ಪಾಲಿಸೋ ವನಮಾಲಾ | ಗೋಪಾಲಬಾಲಾ ಪ ಮುರಾರಿ ಪೂಜಿತ | ಸಾರಸಭವನುತ ನಾರದಮುನಿ ವಿದಿತಾ | ನೀರಜನೇತ್ರ 1 ನೀಲ ನೀರದಕಾಯ | ಪಾಲಿತ ಮುನಿಗೇಯ ಮಾಲಕುಮಿಪ್ರಿಯಾ | ಲೀಲಾಮಯ 2 ಶೃಂಗಾರರಾಜಿತ ಮಂಗಳವೇಷಿತ ಮಾಂಗಿರಿಚರಣಾದಿತ | ಗಂಗಾನತ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಮಂದರಧರ ಗೋವಿಂದ ಮುಕುಂದ ಸ ನಂದವಂದ್ಯನೆ ಲಾಲಿಸೋ ಪ ಕುಂದರದನ ಶರದಿಂದುವದನ ಮುಚು ಕುಂದ ವರದನೆ ಪಾಲಿಸೋ ಅ.ಪ ಸಾರಸಭವನುತ ಸಾರಚರಿತ ಸಂ ಸಾರಪಯೋನಿಧಿ ಪಾರದನೆ ವಾರಿಧಿ ಶಾರೀರ ವಿಹಾರ ವಿಶಾರದನೆ 1 ಪಾಶ ವಿಮೋಚನ ಪಟುಚರಿತ ವಿನುತ ಕೇಶವ ಸದ್ಗುಣ ಗಣಭರಿತ 2 ಧರೆಯೊಳು ಶ್ರೀ ಪುಲಿಗಿರಿಯೊಳು ನೆಲೆಸಿಹ ಶರಣರ ಸಲಹುವ ಶ್ರೀಧರನೆ ಚಕ್ರಧರ ವರನೆ 3
--------------
ವೆಂಕಟವರದಾರ್ಯರು
ರಂಗವಲಿದ ರಾಯರ ಪಾಡಿರೆ ಪ ಸಲೆನಂಬಿದವರ ಕಲುಷಗಳೋಡಿಸಿ ಸಲುಹಲು ಸ್ತಂಭದಿ ನೆಲೆಸಿದಂಥ ರಾಯರ 1 ಬಾಗಿ ನಮಿಸಿ ಮುಂ ನವ್ಯಾತಕೆ ತವ ಸೂಸು ನಾನಲ್ಲವೆ | ಮಾನವಿ ನಿಲಯ 1 ದಾಸವರ್ಯನೆ | ಭಾಸುರಸ್ತಂಭ ನಿವಾಸ ಧೀರನೆ ಈ ಸಮಯಿದಿ ಷಡ್ದ್ವೇಷಿಗಳೆನ್ನತಿ ಘಾನಿಗೊಳಿಸುವರುದಾಸೀನ ಮಾಡದೆ 2 ಸಾಧು ಶೀಲನೆ ಪ್ರಹ್ಲಾದ ನನುಜ ಸÀಹ್ಲಾದ ಶಲ್ಯನೆ ವಾದಿರಾಜ ಶತಮೇಧ ನಾಮಾರ್ಯರ ಪಾದಾರಾಧಕ ಭೇದ | ಬೋಧಕ 3 ಭಾರತಿವರ ಕೃತ ಶಾಸ್ತ್ರಮರ್ಮವಿಚಾರ ಬಂಧೂರ ಸಾರಸಭವ ಪಿತ | ಶ್ರೀರಮಾಪತಿ ಸಾರ ವಕ್ತಾರ 4 ಪ್ರೇಮಸಾಗರ ನೀ ಮರೆದರೆ ಈ ಪಾಮರನಿಗೆ ಯಮ ಧಾಮವೆ ಗತಿ ನಿಜ ಹೇ ಮಮ ಸ್ವಾಮಿ 5
--------------
ಶಾಮಸುಂದರ ವಿಠಲ
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಿನುತ ಚರಣ ನಾರಾಯಣ ಪ ವಾರಿಧಿಶಯನ ಘಣಿಮಣಿ ಭೂಷಣಾ ಸಾರಸಭವನುತ ನಾರಾಯಣಾ ಅ.ಪ ತಂದೆ ತಾಯಿಯು ನೀನೆ ಬಂಧು ಬಳಗವು ನೀನೇ ಸಿಂಧುಶಯನ ಗೋವಿಂದನು ನೀನೇ ಮಂದರಧರ ಮುಚುಕುಂದ ವರದ ನೀನೇ ಇಂದಿರೆಯರಸ ಮಾಂಗಿರಿಯ ರಂಗಯ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ. ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ ಫಣಿವೇಣಿ ಮಂಜುಳವಾಣಿ ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1 ದೂರೆ ಶುಭ್ರಾಂಬರೆಧಾರೇ ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ ಕರಪಲ್ಲವ ಚತುರೇ 2 ವರದೇ ರಸನದೆ ನಿಂತವಸರದೇ ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ ತೆರದಿಂ ಕುಡುವರಮಂ 3
--------------
ನಂಜನಗೂಡು ತಿರುಮಲಾಂಬಾ
ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ. ಸಾರಸದಳನಯನೆ ಸುಗುಣಾಭರಣೆ ಸಾರಸಭವವಂದಿತಚರಣೆ ಕ್ಷೀರಸಾಗರನಂದನೇ ವರ ಕಾರುಣ್ಯಾಮೃತಪೂರಿತ ವದನೆ 1 ಪವನಾತ್ಮಜಸಂಸೇವಿತಾಂಘ್ರಿಯುಗಳೇ ಪಾಲಿತಾಮರ ಜಾಲೇ ಪಾವನಗುಣಶೀಲೇ ಶಶಾಂಕನಿಭಫಾಲೇ ಪಾಲಿಸುನೀಂ ಪಂಕಜಸುಮಮಾಲೆ 2 ಕೇಶವಹೃದಯನಿವಾಸಿನೀ ಪದ್ಮಾಸಿನೀ ಕ್ಲೇಶ ನಿವಾರಿಣಿ ಭುವನೈಕ ಜನನಿ ಕಾಂಕ್ಷಿತಾರ್ಥ ಪ್ರದಾಯಿನಿ 3
--------------
ನಂಜನಗೂಡು ತಿರುಮಲಾಂಬಾ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು