ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕೆಟ್ಟೆಯಲ್ಲೋ ಮನುಜ ಹಾನಿಯಾದೆಯಲ್ಲೋ ಪ ಕಾಣದೆ ಏನೇನು ಗಾಣದೆತ್ತಿನಂತೆ ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ 1 ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ ಧಾರುಣಿಸುಖವಿದು ಸಾರಮಯ ಸುವಿ ಚಾರದೆ ನೋಡದೆ ಘೋರನರಕಿಯಾದೆ 2 ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ ವನಜನಾಭ ನಮ್ಮ ಜನಕ ಶ್ರೀರಾಮನ ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ 3
--------------
ರಾಮದಾಸರು
ಬರಿದೆ ಹಾಳು ಶರೀರ ಬಾಳು ಅರಿದಡಿದು ಮಹ ಟೊಳ್ಳು ಟೊಳ್ಳು ಪ ನಾರಿಪುರುಷರು ಮಾರಕದನದಿಂ ಸೇರಿ ಸುಖಿಸಲು ಜಾರಿದಿಂದ್ರಿಯ ಕಾರಣಾಗಿ ಮೂರುದಿನದಿ ತೋರಿ ಪೋಗ್ವಸಾರಮಯ 1 ಮಿಡುಮಿಡುಕಿ ಒಡಲಿಗಾಗಿ ದುಡಿದು ಮೂಢರಡಿಯ ಪಿಡಿದು ಬಿಡದೆ ರೋಗದೊಡನೆ ನರಳಿ ಪಡುತಕಷ್ಟ ಕಡೆಗೆ ಸಾಯ್ವ 2 ಪರರಸೇವೆ ನಿರುತಗೈದು ಪರಕೆ ಇಹ್ಯಕೆ ತಿರುಗಿ ತಿರುಗಿ ಗರುವದಿಂದ ಚರಿಸಿ ನಮ್ಮ ಸಿರಿಯರಾಮನ ಚರಣಕ್ಹೊಂದದ 3
--------------
ರಾಮದಾಸರು