ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ. ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1 ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2 ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3 ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4 ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5 ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6 ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7 ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8 ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9 ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
--------------
ವಾದಿರಾಜ
ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ 1 ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ 2 ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ 3 ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು 4 ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ 5 ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು 6 ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ 7
--------------
ಕನಕದಾಸ
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ ಪತಿಯನು ನೆನೆಯಲಿಲ್ಲ ಹಿತವಾದ ಪಥವು ಸಂತತ ತೋರದೆ ನೀನು ಖತಿಗೊಂಡು ವೆಂಕಟಪತಿಯನು ನೆನೆಯದೆ ಪ ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ ಜೊತೆಯಾಗಿ ಪೋಗಲು ಸಾವಿರ ಬಾರಿಯು ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು 1 ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ - ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು 2 ಕಾಯ ಬಿಡಿಸಿಕೊಂಬುದು ಜೀವ ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು ಕಾಲ ಮನದಿ ಬೇಸರಗೊಳಲು ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ 3 ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ ಜಲಜನಾಭನ ಬಿಟ್ಟು ಹೊಲಬುದಪ್ಪಿತಲ 4 ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು ಮೌನಕ್ಕೆ ಕೋಪದ ಬೀಜವಂಕುರಿಸಿತು ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು ಏನ ಮಾಡಿದರಿವರು ಬಿಡರಲ್ಲೊ ಮನವೆ 5 ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ- ರಂಗನ ನಾಮದ ಅಂಗಿಯ ಸಡಲಿಸಿದೆ 6 ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು ಎರವುದೋರದೆ ನೀನು ವರಾಹತಿಮ್ಮಪ್ಪನನು ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ 7
--------------
ವರಹತಿಮ್ಮಪ್ಪ
ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ಪ. ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು 1 ಪರಿಮಳಿಸುವ ಮಾಲೆಯ ನೆವದಿ ಹರಿಯುದರದಲ್ಲಿಸಿರಿಯೊಲಿಹಳುತÀರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು2 ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿಆ ಜನಾರ್ದನನಾಕ್ಷಣ ತಹಳು 3 ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ 4 ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವಜಲವೆÀರೆದು ಬೆಳೆಸಿದ ಮನುಜರಕುಲದವರ ಬೆಳೆಸು ವೈಕುಂಠದಲ್ಲಿ 5 ತುಲಸಿಯೆ ನಿನ್ನ ಪೋಲುವರಾರುಮೂಲದಲ್ಲಿ ಸರ್ವತೀರ್ಥಂಗಳಿಹವುದಳದಲ್ಲಿ ದೇವರ್ಕಳ ಸನ್ನಿಧಾನಚೆಲುವಾಗ್ರದಿ ಸಕಲ ವೇದಗಳು 6 ತುಲಸಿ ಮಂಜರಿಯೆ ಬೇಕಚ್ಚುತಂಗೆದಳಮಾತ್ರ ದೊರಕಲು ಸಾಕವಗೆಸಲುವುದು ಕಾಷ್ಠಮೂಲ ಮೃತ್ತಿಕೆಯುಫಲವೀವನಿವಳ ಪೆಸರ್ಗೊಳಲು 7 ಕೊರಳಲ್ಲಿ ಸರ ಜಪಸರಗಳನ್ನುವರ ತುಲಸಿಯ ಮಣಿಯಿಂದ ಮಾಡಿಗುರುಮಂತ್ರವ ಜಪಿಸುವ ನರರುಹರಿಶರಣರ ನೆಲೆಗೆ ಸಾರುವರು8 ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-ವಲ್ಲಭನು ಸರ್ವಸನ್ನಿಹಿತನಾಗಿನೆಲಸಿಹನಿವಳೆಸಳೊಂದಿಲ್ಲದಿರೆಸಲ್ಲದವಂಗನ್ಯಕುಸುಮದ ಪೂಜೆ 9 ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆಎಲ್ಲಿ ಪೋಪುದು ದೇಶದೇಶಂಗಳಿಗೆನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯಅಲ್ಲೀಗಲು ನಮ್ಮ ಬನದಲೊಪ್ಪಿಹಳು 10 ಹರಿಪಾದಕೆ ಶ್ರೀತುಲಸಿಯೇರಿಸಿದನರರನು ಪರಮ ಪದಕೇರಿಸುವುದುನಿರುತದಿ ತುಲಸಿಯ ಕಂಡರವಗೆನರಕಗಳ ದರುಶನ ಮತ್ತಿಲ್ಲ 11 ಪಡಿ ಆಯಿತು ಗಡನ್ನಿವಳ ವೃಂದಾವನದಲ್ಲಿ ನೆಟ್ಟುಮನೆಮನೆ ಮನ್ನಿಸದವನ್ಯಾವ12 ಕನಸಿನಲಿ ಕಂಡಂತೆ ಇನ್ನೊಂದುಕೊನೆವೆರಸಿದ ಪುಷ್ಪದಿ ಜಪಿಸಿಅನುದಿನ ಹಯವದನನ್ನ ತೀರ್ಥವನು ಕೊಂಡು ನಾ ಧನ್ಯನಾದೆನು 13
--------------
ವಾದಿರಾಜ