ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರ್ಮವ ಮಾಡಿ ನಾ ನಿನ್ನ ಒಲಿಸಲಿ ಶ್ರೀನಿವಾಸ ಧ್ಯಾನಕೆ ನಿಲುಕದ ಜ್ಞಾನಿಗಳರಸ ನೀನು ಶ್ರೀನಿವಾಸ ಪ ಗಂಗೆಯ ತಂದು ಮಂಗಳಸ್ನಾನ ಮಾಡಿಸೆ ಶ್ರೀನಿವಾಸ ಗಂಗೆಯು ನಿನ್ನಂಗುಷ್ಟದಲ್ಲಿಹಳಲ್ಲೊ ಶ್ರೀನಿವಾಸ 1 ಮನಮೆಚ್ಚುವಂತೆ ನಿನ್ನ ಸುಮಗಳಿಂದರ್ಚಿಪೆನೆ ಶ್ರೀನಿವಾಸ ವನಜ ಪುಷÀ್ಪವು ನಿನ್ನ ನಾಭಿಯೊಳಿಹುದಲ್ಲೋ ಶ್ರೀನಿವಾಸ 2 ಅಂಗಿವಸ್ತ್ರಗಳಿಂದ ಶೃಂಗರಿಸುವೆನೆಂದರೆ ಶ್ರೀನಿವಾಸ ಅಂಗನೆ ಲಕುಮಿ ಸಕಲಾಭರಣಂಗಳಾಗಿರುವಳಲ್ಲೊ ಶ್ರೀನಿವಾಸ 3 ಅನ್ನ ಪಾನಗಳಿತ್ತು ಧನ್ಯನಾಗುವೆನೆ ಶ್ರೀನಿವಾಸ ಅನ್ನಪೂರ್ಣಿ ಷಡುರಸದನ್ನವ ಮಾಳ್ಪಳಲ್ಲೊ ಶ್ರೀನಿವಾಸ 4 ಕಡುಭಕ್ತಿಯಿಂದ ನಿನ್ನಡಿ ಸೇವೆ ಮಾಳ್ಪೆನೆ ಶ್ರೀನಿವಾಸ ಎಡಬಿಡÀದೆ ಹನುಮ ನಿನ್ನಡಿಯ ಪಿಡಿದಿಹನಲ್ಲೊ ಶ್ರೀನಿವಾಸ 5 ಜಗದುದರ ನಿನ್ನ ಬಗೆ ಬಗೆ ನಾಮಗಳ ಸ್ತುತಿಸೆ ಶ್ರೀನಿವಾಸ ಅಗಣಿತವಾಗಿಹುದು ಮುಗಿಯದಂತಿಹುದಲ್ಲೊ ಶ್ರೀನಿವಾಸ6 ಶ್ರಿಷ್ಟಿಕರ್ತ ಶ್ರೀ ರಂಗೇಶವಿಠಲನೆ ಎಂಬೆ ಶ್ರೀನಿವಾಸ ಇಷ್ಟೆಂದ ಮಾತ್ರಕೆ ಒಲಿದಿಷ್ಟವ ಸಲಿಸೈಯ್ಯಾ ಶ್ರೀನಿವಾಸ 7
--------------
ರಂಗೇಶವಿಠಲದಾಸರು
ಗುರುರಾಜಾ - ಗುರುರಾಜಾ ಪ ಧರಣಿಸುರರ - ಸುರಭೂಜಾ ಅ.ಪ ಜ್ಞಾನಿಗಳರಸನೆ - ಧ್ಯಾನಿಪಜನರಿಗೆ ಜ್ಞಾನವು ಪಾಲಿಸೊ - ಜ್ಞಾನಿಜನನಾಥ 1 ಭವ ಕಾನನ ಚರಿಸುವೆ ಮಾನಸದಲಿ ತವ - ಧ್ಯಾನವ ಸಲಿಸೈ 2 ಅನ್ಯರ ಭಜಿ¸ದೆ - ನಿನ್ನನೆ ನಿತ್ಯದಿ ಮನ್ನದಿ ಭಜಿಸುವ ಉನ್ನತ ಮತಿ ನೀಡೈ 3 ನೀಚರ ಮನಿಯಲಿ - ಯಾಚಿಪಗೋಸುಗ ಯೋಚಿಪ ಮನವನು ಮೋಚನೆ ಮಾಡೈ 4 ದಾತನೆ ಗುರುಜಗ - ನ್ನಾಥ ವಿಠಲದೂತಾ5
--------------
ಗುರುಜಗನ್ನಾಥದಾಸರು
ಗುರುರಾಯ - ಗುರುರಾಯ ಪ ನಿರುತದಿ ನಿನ್ನನು ಸ್ಮರಿಸುವೆ - ಶುಭಕಾಯಾ ಅ.ಪ ಕುಧರರದನಜ - ನದಿಯ ತೀರದಿ ನಿಜ ಸದನನೆ ಹರಿಪದ - ಮಧುಕರ ಸೈ ಸೈ 1 ಮಾಗಧರಿಪು ಮತ ಸಾಗರ ಝಷsÀಸಮಾ - ಮೋಘ ಮಹಿಮ ಎನ್ನ - ಬ್ಯಾಗನೆ ಪೊರಿಯೈ 2 ಕಾಮಿತ ಫಲಪ್ರದ - ಪ್ರೇಮದಿ ನಿನ್ನಯ ನಾಮವ ನೆನಿವಂತೆ - ನೇಮವ ಸಲಿಸೈ 3 ಸುಜನ ಸ -ನ್ಮಾನದ ಎನ್ನನು ಮಾನದಿ ಪಾಲಿಸೊ - ಮಾನಿಜನಪ್ರಿಯ 4 ದಾತಗುರು ಜಗನ್ನಾಥವಿಠಲ ಸಂ - ಪ್ರೀತಿ ಪಾತ್ರ ನಿಜ - ದೂತನ ಪಾಲಿಸೊ 5
--------------
ಗುರುಜಗನ್ನಾಥದಾಸರು