ಬಾರೆ ನೀ ಹಂಸಗಮನೆ ಮಾರನ ಪೀಠಕ್ಕೆ
ಸಾರಿ ಕರೆವೆ ಲಕ್ಷ್ಮೀದೇವಿಯೇ ಪ.
ಕಮಲ ಪುಷ್ಪದೊಳು ನೆಲಸಿದ ಲಕ್ಷ್ಮಿಯೆ
ಕಮಲದ ಹಾಸಿಗೆ ಕಾಮಜನಕನ ಸಹಿತ 1
ಮುತ್ತು ಮಾಣಿಕ್ಯವು ಕೆತ್ತಿದ ಹಾಸಿಗೆ
ಮುತ್ತೈದೆರೆಲ್ಲರೂ ಮುದದಿಂದ ಕರೆಯುವೊರು 2
ಶ್ರೀ ಲಕ್ಷ್ಮೀದೇವಿಯೆ ಶ್ರೀ ಕೃಷ್ಣನರಸಿಯೆ
ಶ್ರೀನಿವಾಸನ ಕೂಡಿ ಪ್ರೀತಿಯಿಂದ ಸರಸನಯನೆ 3