ಯುಕ್ತ ಕರ್ಮಮಾಡುವರಿಗೆ ಮುಕ್ತಿಯೇ ಫಲ ಪ
ಶಕ್ತರಾದ ಸಜ್ಜನರಿಗೆ ಶಾಂತಿಯೆ ಬಲ ಅ.ಪ
ಪಥ ಪಿಡಿದು ಕಾರ್ಯಕಾರಣವರಿದು
ಸೂರ್ಯ ಮಂಡಲದಲಿ ಮೆರೆವ ನಾರಾಯಣನಂ ಭಜಿಸುತ್ತ 1
ವೇದ ಶಾಸ್ತ್ರಗಳ ನೋಡಿ ಮಾಯಾವಾದಗಳೀಡ್ಯಾಡಿ
ಖೇದ ಮೋಹ ಸಮವೆಂದರಿತು ಸಾಧನಾನುಷ್ಠಾನದಿಂದ 2
ನಿತ್ಯ ನೇಮದಿ ಮನವಿಟ್ಟು
ತಾಮಸ ಗುಣವಿಲ್ಲದ ಗುರುರಾಮವಿಠಲನ ನಂಬಿ 3