ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ನೀನೊಲಿದರೇನಾಹುದು - ಶ್ರೀಹರಿಯೆ - |ಮುನಿಯೆ ನೀನೆಂತಾಹುದು ಪವಾಲಿಬಲ್ಲಿದ ವಾನರರಿಗೆ - ಶ್ರೀಹರಿಯೆನೀ ಮುನಿದು ಎಚ್ಚವನ ಕೊಂದೆ |ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನವಾಲಿಯ ಪದದಲ್ಲಿಟ್ಟೆ 1ಮೂರು ಲೋಕವನಾಳುವ - ರಾವಣನಊರ ಬೂದಿಯ ಮಾಡಿದೆ |ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆಸ್ಥಿರಪಟ್ಟವನು ಕಟ್ಟಿದೆ 2ಪನ್ನಗವನುದ್ಧರಿಸಿದೆ - ಕೌರವರ -ಹನ್ನೊಂದಕ್ಷೋಣಿ ಬಲವ |ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆಪಾಂಡವರ ಪದವಿಯಲಿಟ್ಟೆ 3ಹಿರಣ್ಯಕನು ಸುತನ ಕೊಲಲು - ಆಗ ನೀಕರುಣದಿಂದೋಡಿ ಬಂದೆ |ಮರಣವೈದಿಸಿ ಪಿತನತರಳ ಪ್ರಹ್ಲಾದನನುಶರಣರೊಳು ಸರಿಮಾಡಿದೆ 4ಭಾಷೆ ಪಾಲಿಪನೆನುತಲಿ - ನಾ ಬಹಳಆಸೆ ಮಾಡುತಲಿ ಬಂದೆ |ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯನಾಶಮಾಡೆನ್ನ ಸಲಹೊ 5
--------------
ಪುರಂದರದಾಸರು