ಒಟ್ಟು 12 ಕಡೆಗಳಲ್ಲಿ , 7 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ. ಕಂಡೀಶವಿನುತ ಬ್ರಹ್ಮಾಂಡಪಾಲ ಮಾ- ರ್ತಾಂಡಮಂಡಲಗ ಶುಂಡಾಲವರದಅ.ಪ. ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ ನೇಮಾನುಷ್ಠಾನದೊಳಿರಲು ನಾ ಮಾಡಿದ ನಾನಾವಿಧ ಪಾಪವ ತಾಮಸಗೊಳಿಸುವ ಕಾಮಕ್ರೋಧಗಳಿಂ1 ಶಿಷ್ಟಾಚಾರದೊಳಿಷ್ಟನಾಗಿ ಪರ ಮೇಷ್ಠಿಜನಕ ಜಯ ಜಯವೆನಲು ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2 ನಾರಾಯಣ ನರಹರಿಯೆನ್ನುವ ವ್ಯಾ- ಪಾರವ ನಾ ಮಾಡುತ್ತಿರಲು ಆರೋಹಣಾವರೋಹಣ ನಾದವಿ- ಕಾರಗೊಳಿಪ ಶಾರೀರಪ್ರಕೃತಿಯಿಂ 3 ಆರ್ಕಾರಣ ರಿಪುಗಳಿಗೈ ಸರ್ವ ದೇ- ವರ್ಕಳ ಮಸ್ತಕಮಣಿ ನೀನೈ ತರ್ಕಾಗಮ್ಯ ಲಕ್ಷ್ಮೀನಾರಾಯಣ ಅರ್ಕಾಮಿತಪ್ರಭ ಕಾರ್ಕಳಪುರವರ4
--------------
ತುಪಾಕಿ ವೆಂಕಟರಮಣಾಚಾರ್ಯ
ನಾಮರಸಾಯನಂ ಪಿಬ ಹೇ ಮಾನಸ ಶ್ರೀಹರಿನಾಮ ಪ. ರಾಮನಾಮ ರಸಾಯನಂ ಸಂಸಾರರೋಗ ನಿವಾರಣಂ ಸಂಚಿತಪಾಪ ವಿಧ್ವಂಸನಂ ನಾಮಸಂಕೀರ್ತನಂ 1 ಭಕ್ತಾರ್ತಿವಾರಣಂ ಭವಭಯಾಬ್ಧಿತಾರಣಂ ಭಕ್ತಿ ಮುಕ್ತಿ ಸಾಧನಂ ನಾಮಸಂಕೀರ್ತನಂ2 ಕ್ಲೇಶಪಾಶ ವಿಮೋಚನಂ ಕಲಿಕಲ್ಮಷ ಭಂಜನಂ ಶೇಷಾದ್ರೀಶ ಸ್ಮರಣಂ ಸರ್ವೋಪದ್ರವಾರಣಂ 3
--------------
ನಂಜನಗೂಡು ತಿರುಮಲಾಂಬಾ
ಭಜಿಸಿ ಬದುಕೆಲೋ ಮಾನವ ಶ್ರೀಹರಿನಾಮ ತಾರಕಮಂತ್ರವ ಪ. ದುರಿತಕೋಟಿಗಳಂ ಪರಿಹರಿಸಿ ನಿಜಪದ ಸರಸೀರುಹದೊಳಗಿರಿಸಿ ಪೊರೆವನ 1 ದುರ್ಜನ ನಿಂದೆಗೆ ಲಜ್ಜಿತನಾಗದೆ ದುರ್ಜನ ದಮನನ ಧ್ಯಾನದೇ ನೀಂ 2 ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ ಬಗೆಕುಂದದೆ ಸಮ್ಮೋದದೇ ನೀಂ 3 ಅಷ್ಟಮದಂಗಳ ಕಟ್ಟುತೆ ದೃಢದಿ ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ4 ದೋಷರಹಿತ ಶ್ರೀಶೇಷಗಿರೀಶನ ದಾಸರವಾಸನೆನ್ನಿಸಿ ಸಂತತಂ 5
--------------
ನಂಜನಗೂಡು ತಿರುಮಲಾಂಬಾ
ಲೋಕನೀತಿ ಅಂತರಂಗದ ರೋಗ ಯಾವುದು ಅದುಚಿಂತೆಯಲ್ಲದೆ ಮತ್ತ್ಯಾವುದು ಪ. ಸಂತತ ಶ್ರೀಹರಿನಾಮದಿಂದ್ಹೋಹುದುಅಂತ್ಯಕೊದಗಿತಜಮಿಳನಿಗಿನ್ನಾವುದು ಅ.ಪ. ಶ್ರವಣ ಮನನ ಸಾಧನ ನವವಿಧಭಕ್ತಿಭವಬೇರ ಕಡಿವುದೆಂದರಿಯಬೇಕುರವಿಕುಲಾಂಬುಧಿಸೋಮ ರಾಮನ್ನ ಚಿಂತಿಸಿಭವವಾರಿಧಿಯ ದಾಟುವರೆಲ್ಲರು ಕೇಳಿ 1 ಜರಾಮರಣಾದಿ ದುಃಖಗಳ ಪರಿಹರಿಸಿಪರಿಪರಿಯಾನಂದ ಕೊಡುವುದಿದುಮರೆಯದೆ ಮನದಲಿ ಒಮ್ಮೆ ನೆನೆದು ಪಾಡೆಸರುವಾಭೀಷ್ಟವ ಕೊಡುವುದಿದೊಂದೆವೆ 2 ಭಯಗಳ ಬಿಡಿಸಿ ಅಭಯಗಳ ಕೊಡಿಸುವಭವದೂರ ಗೋವಿಂದನೆಂದರಿತುಹಯವದನನೆ ಎನ್ನ ಉದ್ಧರಿಸೊ ಎಂದುನಯದಿಂದ ಬೇಡುವರ ಭಾಗ್ಯವೆ ಭಾಗ್ಯ 3
--------------
ವಾದಿರಾಜ
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ. ತರಣಿಕೋಟಿಭಾಸುರ ಶ್ರೀನಾರಾಯಣನ 1 ಕಾಲನವರ ಕಂಡು ಬಾಲನ ಕರೆದಗೆ ಸಾಲೋಕ್ಯವಿತ್ತ ಶ್ರೀನಾರಾಯಣನ 2 ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು ನರಮೃಗೇಂದ್ರನಾಗಿ ಪೊರೆದ ನಾರಾಯಣನ 3 ಮಾತೆಯ ಸವತಿಯ ಮಾತಿಗಾಗಿ ಬಂ- ದಾತನ ಕಾಯ್ದ ಶ್ರೀನಾಥ ನಾರಾಯಣನ 4 ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ ಬಸವಳಿದಿಹನ ರಕ್ಷಿಸಿದ ನಾರಾಯಣನ 5 ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ- ಗಾದರಿಸಿ ರಕ್ಷಿಸಿದಾದಿನಾರಾಯಣನ 6 ಮಾರಜನಕ ರಮಾರಮಣ ಲಕ್ಷ್ಮೀ- ನಾರಾಯಣನ ಪಾದಾರವಿಂದಯುಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿನಾಮ ಘೋಷ ಧ್ರುವ ಎಲ್ಲಿ ಶ್ರೀಹರಿನಾಮ ಘೋಷ ಅಲ್ಲಿ ಸಕಲ ಸುಖ ಸಂತೋಷ ಸುಲಭಲಿಹುದು ಭವಭಯದ ನಾಶ ಹರಿನಾಮ ಘೋಷ 1 ಹರಸುವದಾನಂದದ ಹರುಷ ಹರಿಸುವದು ಕಲಿಮಲ ಕಲುಷ ತ್ವರಿತೋಡಿಸುವದು ಮಹಾಪಾತಕ ದೋಷ ಹರಿನಾಮ ಘೋಷ 2 ಸ್ವಹಿತ ಸಾಧನದ ಸುಉಪದೇಶ ಬಾಹ್ಯಾಂತರದೋರುವ ಪ್ರಕಾಶ ಮಹಿಪತಿಗಿದೆ ನಿತ್ಯವನುಭವದುಲ್ಹಾಸ ಹರಿನಾಮ ಘೋಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ ಪರಮದಯಾನಿಧಿಯು ಶ್ರೀಹರಿ ಮುಕುಂದ 1 ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ 2 ಗಜ ಭಯ ಸ್ಮರಿಸಿದಾಕ್ಷಣ ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ ಪರಮಭಕ್ತರ ಜೀವ ಶ್ರೀಹರಿ ನಾರಾಯಣ 3 ಹರಿನಾಮದಿಂದಾಯಿತು ಅಹಲ್ಯೋದ್ಧಾರಣ ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ ಸುರಮುನಿಜನರಿಗೆ ಇದೇ ನಿಜಭೂಷಣ ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ 4 ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ ನಿತ್ಯ ನಿಜಾನಂದ ತೋರುವ ಶ್ರೀಹರಿನಾಮ ಸುಖ ಸದಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದೆ ಕಂಡೆವು ಗುರುರಾಯನ ನಮ್ಮತÀಂದೆ ಸತ್ಯಾಭಿನವತೀರ್ಥನ ಫಲಿಸಬಂದೊದಗಿತು ನಮ್ಮಸುಕೃತಆನಂದರಸಾಬ್ಧಿ ಉಕ್ಕೇರಿತು ಪ.ಇದೀಗೆ ಕಲ್ಪದ್ರುಮ ಕಾಣಿರೈ ಅಹುದಿದೀಗೆ ಚಿಂತಾಮಣಿ ನೋಡಿರೈ ಮತ್ತಿದಿದೀಗೆಸುರಭಿಬಂದಿತೆನ್ನಿರೈ ತಮ್ಮಮುದದಿಂದ ಯತಿರೂಪವಾಯಿತೈ 1ಬಡವರ ದೊರೆ ನಮ್ಮ ಗುರುರಾಯ ಈಪೊಡವಿಲಿ ಯಾಚಕರಾಶ್ರಯ ಆಪ್ತಹಡೆದ ತಾಯಿತಂದೇರ ಮರೆಸಿದ ಎಮ್ಮೊಡೆಯ ಭಕ್ತಿ ಭಾಸವ ಬೆಳೆಸಿದ 2ಭಕ್ತಿ ಪಥವ ನೋಡಿ ನಡೆವನು ಯತಿಮುಕುಟಮಣಿಗೆ ಸರಿಗಾಣೆನು ಜ್ಞಾನಸುಖದ ಬಳ್ಳಿಯ ಬೆಳೆ ಬೆಳೆಸಿದ ಸಲೆಮುಕ್ತಿ ಮಂದಿರ ವಾತ್ರ್ಯರುಹಿಸಿದಒಂದೊಂದು ಗುಣಗಳ ಮಹಿಮೆಯು ಮತ್ತೆಂದಿಗೆ ಹೊಗಳಲಿ ತೀರವುಹಿಂದಾದ ಪೂತರು ಅಹರು ಯತೀಂದ್ರನ ಸಾಮ್ಯಕೆ ಸರಿಯಾರು 4ಗುರುಭಕ್ತಿನೆಲೆಕಳೆಮರೆಯದೆ ಶ್ರೀಧರಜೆ ರಾಘವಪಾದ ಜರಿಯದೆ ದೇವವರವೇದವ್ಯಾಸನ ಸೇವೆಗೆ ಒಂದರಘಳಿಗ್ಯಲಸ ತಾನೆಂದಿಗೆ 5ಹೊನ್ನ ತೃಣದೊಲು ಸೂರ್ಯಾಡಿದ ವಿದ್ಯೋನ್ನತರ ತವರುಮನೆಯಾದಮನ್ನಿಪ ಸುಜನಚಕೋರವ ಹೊರವಪೂರ್ಣ ಚಂದಿರನಂತಲ್ಲೊಪ್ಪುವ 6ತಪ್ತಲಾಂಛನ ತೀರ್ಥವೀವಾಗಭೃತ್ಯರುಪಟಳಕೊಲಿದು ನಲಿವನಾಗಕಪಟವ ಲೇಶಮಾತ್ರರಿಯನು ಇಂಥಗುಪ್ತ ಮಹಿಮಗೆಣೆಗಾಣೆನು 7ಸಕಳ ಪುರಾಣೋಕ್ತ ದಾನವ ಬಿಡದಖಿಳ ಧರ್ಮವನೆಲ್ಲ ಮಾಡುವನಿಖಿಳತತ್ವವನೊರೆದು ಹೇಳುವ ಈಅಕಳಂಕನೆಂದೂ ನಮ್ಮನುಕಾವ8ಕಷ್ಟ ಮೌನದಿ ವಾರಣಾಸಿಯ ಬಹುಶಿಷ್ಟರ ಸಲಹುತ ಯಾತ್ರೆಯ ಮಾಡಿತುಷ್ಟಿಬಡಿಸಿದಲ್ಲಿವಾಸರಬೇಡಿದಿಷ್ಟಾರ್ಥವನೀವನು ದಾಸರ 9ಪ್ರತಿದಿನ ಗುರುಪಾದುಕೆಯನಿಟ್ಟು ಮೇಲೆನೂತನವಸನಹೊನ್ನಾರ್ಚನೆಗಿಟ್ಟು ಮುಂದೆನುತಿಸಿಹಿಗ್ಗುವ ನವಭಕುತಿಂದ ಈವ್ರತಕಾಗಲಿಲ್ಲ ಒಂದಿನಕುಂದು10ಶ್ರೀಭಾಗವತಶಾಸ್ತ್ರ ಟೀಕನುಹರಿಗಾಭರಣವ ಮಾಡಿಟ್ಟನುಈ ಭೂಮಿಲಿಹ ಶಿಷ್ಯ ಜನರನು ತತ್ವಶೋಭಿತರನು ಮಾಡಿ ಹೊರೆದನು 11ಬಲುಹಿಂದ ಯವನನ ಬಲದಲ್ಲಿ ಕೃಷ್ಣಒಳಪೊಕ್ಕು ಸದೆದ ಪರಿಯಲ್ಲಿಕಲಿನೃಪ ಮ್ಲೇಚ್ಛನ ಬಂಧನ ತಪೋಬಲದಿಂದ ಗುರುರಾಯ ಗೆಲಿದನು 12ಭಕ್ತಿವಿರತಿಜ್ಞಾನಪೂರ್ಣನು ಸೇವಕ ಜನರಿಗೆ ಪ್ರಾಣಪ್ರಿಯನುಪ್ರಕಟಿಸಿದನು ನಿಜಕೀರ್ತಿಯನಿತ್ಯಸಕಲ ಸದ್ಗುಣಗಳ ವಾರ್ತೆಯ 13ಈಪರಿಬಹು ಪಟ್ಟವಾಳುತ ದಿವ್ಯಶ್ರೀಪಾದವ್ರತ ಪೂರ್ಣ ತಾಳುತಸ್ಥಾಪಿಸಿದನು ಮಧ್ವಸಿದ್ಧಾಂತ ದುಷ್ಟಕಾಪುರುಷರ ಮೊತ್ತ ಗೆದ್ದಾತ 14ಹರಿಗುಣ ಜಿಜ್ಞಾಸೆಯಿಂದ ಶ್ರೀಹರಿಮೂರ್ತಿ ಧ್ಯಾನ ಚಿಂತನೆಯಿಂದ ಶ್ರೀಹರಿನಾಮ ಸ್ಮರಣಶ್ರವಣದಿಂದ ಶ್ರೀಹರಿಪ್ರೀತಿಬಡಿಸಿದ ನಲವಿಂದ15ನಿರುತ ಉದಯಸ್ನಾನ ಮೌನವ ಶ್ರೀಗುರುಮಧ್ವಶಾಸ್ತ್ರವ್ಯಾಖ್ಯಾನವ ಮಹಾಗೀರ್ವಾಣ ವಾಕ್ಯದಿಂದ ಪೇಳುವ ಆತ್ಮಗುರುಗಳ ಸ್ಮರಣೆಯ ಮಾಡುವ 16ಗುರುಸತ್ಯನಾಥರ ತಂದನು ನಿಜಗುರುಪದವೇ ಗತಿಯೆಂದನು ತನ್ನಸ್ಮರಣೇಲಿ ಇಹರ ಕಾವನು ಬೇಡಿದರೆ ಅಭೀಷ್ಟಾರ್ಥವನೀವನು 17ಗುರುಸತ್ಯನಾಥಾಬ್ಧಿ ಸಂಜಾತ ಸಜ್ಜನರಹೃತ್ಕುಮುದತಾಪಸಂಹರ್ತಸರಸ ಸುಧಾಂಶು ವಾಕ್ಯಾನ್ವಿತ ಸಿತಕರನಹುದಹುದಯ್ಯ ಧರೆಗೀತ 18ಆವ ಪ್ರಾಣಿಯು ಗುರುಮಹಿಮೆಯ ಸದ್ಭಾವದಿ ನೆನೆಯಲು ಸುಖಿಯಾದದೇವ ಪ್ರಸನ್ವೆಂಕಟಾದ್ರೀಶ ಅವಗಾವಗೆ ಪಾಲಿಪ ಮಧ್ವೇಶ 19
--------------
ಪ್ರಸನ್ನವೆಂಕಟದಾಸರು
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆ ಪ.ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-ರ್ತಾಂಡಮಂಡಲಗ ಶುಂಡಾಲವರದ ಅ.ಪ.ಕ್ಷೇಮದಿ ಶ್ರೀಹರಿನಾಮವ ವರ್ಣಿಸೆನೇಮಾನುಷ್ಠಾನದೊಳಿರಲುನಾ ಮಾಡಿದ ನಾನಾವಿಧ ಪಾಪವತಾಮಸಗೊಳಿಸುವ ಕಾಮಕ್ರೋಧಗಳಿಂ 1ಶಿಷ್ಟಾಚಾರದೊಳಿಷ್ಟನಾಗಿಪರಮೇಷ್ಠಿಜನಕ ಜಯ ಜಯವೆನಲುಭ್ರಷ್ಟಾಲೋಚನೆ ಪುಟ್ಟಿಸಿ ಪಾಪದಬಟ್ಟಿಯ ಹೊದ್ದಿಪ ದುಷ್ಟಸಂಗದಿಂ 2ನಾರಾಯಣ ನರಹರಿಯೆನ್ನುವ ವ್ಯಾ-ಪಾರವ ನಾ ಮಾಡುತ್ತಿರಲುಆರೋಹಣಾವರೋಹಣ ನಾದವಿ-ಕಾರಗೊಳಿಪ ಶಾರೀರಪ್ರಕೃತಿಯಿಂ 3ಆರ್ಕಾರಣ ರಿಪುಗಳಿಗೈ ಸರ್ವ ದೇ-ವರ್ಕಳ ಮಸ್ತಕಮಣಿ ನೀನೈತರ್ಕಾಗಮ್ಯ ಲಕ್ಷ್ಮೀನಾರಾಯಣಅರ್ಕಾಮಿತಪ್ರಭ ಕಾರ್ಕಳಪುರವರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ.Àರುಣಾಕರ ನಿಜ ಶರಣ ರಕ್ಷಾಮಣಿತರಣಿಕೋಟಿಭಾಸುರ ಶ್ರೀನಾರಾಯಣನ 1ಕಾಲನವರ ಕಂಡು ಬಾಲನ ಕರೆದಗೆಸಾಲೋಕ್ಯವಿತ್ತ ಶ್ರೀನಾರಾಯಣನ 2ತರಳಪ್ರಹ್ಲಾದನು ಕರೆಯೆ ಕಂಬದಿ ಬಂದುನರಮೃಗೇಂದ್ರನಾಗಿ ಪೊರೆದ ನಾರಾಯಣನ 3ಮಾತೆಯ ಸವತಿಯ ಮಾತಿಗಾಗಿ ಬಂ-ದಾತನ ಕಾಯ್ದ ಶ್ರೀನಾಥ ನಾರಾಯಣನ 4ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿಬಸವಳಿದಿಹನ ರಕ್ಷಿಸಿದ ನಾರಾಯಣನ 5ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ-ಗಾದರಿಸಿ ರಕ್ಷಿಸಿದಾದಿನಾರಾಯಣನ 6ಮಾರಜನಕರಮಾರಮಣ ಲಕ್ಷ್ಮೀ-ನಾರಾಯಣನ ಪಾದಾರವಿಂದಯುಗ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹರಿಯೆನ್ನಬಾರದೆಜಿಹ್ವೆವಾರಂವಾರಪ.ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
--------------
ಪ್ರಸನ್ನವೆಂಕಟದಾಸರು