ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದು ಸಂಸಾರದೊಳಗೊಂದಿಸುವೆನೋ ಇಂದು ಮಾಧವ ಯಾದವ ಪ ಕರುಣಬಾರದೆ ನಿನಗೆ ಅಕಟಕಟ ಅಕಟಕಟ ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ ಎರವು ಮಾಡುವರೇನೋ ಪ್ರೇಮಿ-ಇನ್ನು ಪರಿಹರಿಸು ಸಂಚಿತಾಗಾಮಿ-ಇದೇ ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ1 ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ ಗತಿಯ ಕಾಣದಲೆ ಚಾಲ್ವರಿದೆ ಭೇದ- ಮತಿ ಕೊಡದೆ ನೋಡುವುದು ಬರಿದೆ-ಸರ್ವ ಕ್ಷಿತಿಯೊಳಗೆ ನೀನೆಂದು ಅರಿದೆ-ವರ- ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ ಶತಪತ್ರ ತೋರಿಸೈಯ್ಯಾ ಜೀಯಾ 2 ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ ಇತಿಹಾಸ ಪಾಂಚರಾತ್ರ ನಿಗಮ-ನಿನ್ನ ತುತಿಪ ಭಕುತರಿಗೆ ತಲೆಬಾಗಿ-ಕೊಂಡು ಪ್ರತಿದಿವಸದಲಿ ಚೆನ್ನಾಗಿ-ವಲಿದು ಅತಿಶಯವ ಕೊಡುತ ಲೇಸಾಗಿ-ವಿಘ್ನ ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ ಪತಿತಿ ಪಾವನ ಮೋಹನ-ಚೆನ್ನ3 ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ ವಡೆಯ ಎನ್ನಾಧೀನವೇ ಪೇಳೊ-ದು:ಖ ಬಿಡಿಸುವುದು ನಿನಗುಚಿತವಲ್ಲ-ಪಾಟು ಸಿರಿ ಲಕುಮಿನಲ್ಲ-ಒಂದು ನುಡಿವೆ ನಾನಾಂತರ್ಯ ಸೊಲ್ಲ-ಇಂತು ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ ಬಡವರಾಧಾರಿ ಕರುಣೀ-ದಾನಿ4 ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ ಭುವನದಲಿ ಬಲಿರಾಯನ ನೋಡಿ, ನಾನು ತವಪಾದ ಗತಿಯೆಂದು ಬಂದೆ-ಮಹಾ ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ ತ್ರಿವಿಧ ತಾಪಗಳಿಂದ ನೊಂದೆ-ಈ ಅವಸರಕೆ ಬಂದೊದಗಿ ನಿನ್ನ ನಾಮಾಮೃತದ ಸವಿದೋರೊ ದ್ವಾರಾವತಿಯ-ಜೀಯ 5 ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ ಕ್ಕಂದವಾಗಿದೆಯೊ ಕಾಣೆ-ನಾನು ಸಂದೇಹ ದ್ವೇಷದವನಲ್ಲ-ಇದು ಎಂದೆಂದಿಗೂ ಪುಸಿಯು ಅಲ್ಲ-ಹೃದಯ- ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು ಇಂದು ಎತ್ತಲಿ ಪೋಯಿತೋ ತಾತ-ನೀತ 6 ಗುಣವಂತ ಬಲವಂತ ಜಯವಂತ ಸಿರಿವಂತ ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ ಮನದ ದುಮ್ಮಾನವನೆ ಬಿಡಿಸೊ-ನಿನ್ನ ಅನವರತ ನಾಮವನು ನುಡಿಸೊ-ಮಧ್ವ ಮುನಿ ಕರುಣ ಕವಚವನು ತೊಡಿಸೊ-ಇದೇ ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ 7 ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ ಜ್ಞಾನಮಯನೆ ನಿನ್ನ ಮರೆದೆ-ಕರ್ಮ ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ ಜಾಣತನ ಬಹಳ ಸಂತಸವೊ-ಹೀಗೆ ಮಾಣದಲೆ ಇಪ್ಪ ಸಾಹಸವೋ ಚನ್ನ ಜ್ಞಾನ ಭಕುತಿ ವಿರಕುತಿ ಕೊಟ್ಟು ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ 8 ಶಂಖ ಚಕ್ರ ವರಾಭಯ ಹಸ್ತದಲಿ ನಿಂದ ವೆಂಕಟಾಚಲ ನಿವಾಸ ಶ್ರೀಶ-ನಿನ್ನ ಕಿಂಕರನ ಕಿಂಕರನೊ ನಾನು-ಅಕ- ಳಂಕ ಮನುಜನ ಮಾಡೊ ನೀನು-ಭವ ಸಂಕಟವ ಕಳೆಯಾ ಸುರಧೇನು-ಬೊಮ್ಮ ವಿನುತ ವಿಜಯವಿಠ್ಠಲ ಹರಿ- ಣಾಂಕ ಸೌವರ್ಣ ಪೂರ್ಣ ಸಂಪೂರ್ಣ 9
--------------
ವಿಜಯದಾಸ
ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ಕ ರುಣಾಶಾಲಿಗಳನ್ನು ಪಣೆಗಣ್ಣ ಮೊದಲಾದಮರ ಗಣದೊಳು ಇನ್ನು ನಾ ಕಾಣೆ ಮುನ್ನ ಪ ಗುಣನಿಧಿಯೆ ಎಣಿಯಿಲ್ಲ ನಿನ್ನಯ ಅಣು ಮಹಘನರೂಪ ಕ್ರಿಯಗಳು ಕ್ಷಣಬಿಡದೆ ನೀನಖಿಳಜೀವರ ತ್ರಿ- ಗುಣ ಕಾರ್ಯವ ಗೈವೆ ಮುಖ್ಯ ಅ.ಪ ಕರ್ಮ ಜೀವರೊಳು ನೀನೆಸಗಿ ತೋರ್ಪುದೆ ಧರ್ಮ ನಾನರಿಯೆ ಪ್ರತಿ ಕರ್ಮ ಎನ್ನನುಭವಕೆ ತಂದಿಡುವುದೇ ನಿನ್ನ ಧರ್ಮ ನಾ ಕಾಣೆ ಮರ್ಮ ಜನುಮ ಕೋಟಿಗಳಿಂದಲಿ ಅನುಸರಿಸಿ ಬಂದಿಹ ಎನ್ನ ಕರ್ಮವ ಅನಿಲದೇವ ನಿನ್ನಿಂದ ಅಲ್ಲದೆ ಎನಿತು ಇತರನಿಮಿಷರು ಮಾಳ್ವರು ಜ್ಞಾನದಾಯಕ ನೀನೆ ಎನ್ನಯ ಮನದಲಿಹ ಜಂಜಡವ ಕಳೆದು ಹೀನಕರ್ತನು ತಾನು ಅಲ್ಲದೆ ನೀನೆ ಸರ್ವರ ಕರ್ತನೆಂಬುವ ಜ್ಞಾನಿ ಧ್ಯಾನ ಸ್ಮರಣೆಯನು ಸಾನುರಾಗದಿ ಇತ್ತು ನಿನ್ನ ಮತಾನುಗರಲ್ಲನವರತ ಇಡು ಅನೇಕ ಜನುಮಜನುಮಾಂತರದೊಳು 1 ಶ್ವಾಸನಾಮಕ ನೀನು ಜಗದೀಶ ನೀ ಜೀ- ವೇಶ ಸರ್ವಶಕ್ತಾನು ನೀ ತಾಸಿಗೊಂಭೈನೂರು ಶ್ವಾಸಗಳನ್ನು ಈ ಶರೀರದಿ ಜೀವರಿಂ ದೆಸಗುವೆಯೊ ನೀನು ಉಸುರಲೇನಿನ್ನು ವಾಸುದೇವಗೆ ಪ್ರೀತನಾಗಿ ಅ- ಶೇಷತತ್ತ್ವಕ್ಕೀಶನಾಗಿಹೆ ವಾಸವಾದಿಗಳೆಲ್ಲರೊಳು ಇನ್ನು ಈಸುಭಾಗ್ಯವು ಕಾಣಲಿಲ್ಲ ಏಸುಕಾಲಕು ನೀನೇ ಗತಿಯೆಂದು ಈಶ ಶೇಷ ಖಗೇಶ ಪ್ರಮುಖರು ದಾಸರಾಗಿಹಗರಯ್ಯ ಬಿಡದೆ ದೇಶಕಾಲಗಳಲ್ಲಿ ನಿನ್ನೊಳು ಸೂಸುವಾ ಅತಿಭಕುತಿಯಿಂದಲಿ ಈಶ ತಪದಲಿ ನಿನ್ನ ಮೆಚ್ಚಿಸೆ ಶೇಷಪದವಿಯ ಕೊಟ್ಟು ಶ್ರೀಶ- ನ ಶಯನಸೇವೆ ಸಂಪದವನಿತ್ತೆ 2 ಭಕುತ ಜನರ ಬಂಧೂ ಶ್ರೀಹರಿಗೆ ನೀ ಪ್ರಥ- ಮಾಂಗನಹುದೆಂದೂ ಈ ಸಕಲ ಜಗದಾ ಚೇಷ್ಟಪ್ರದನೆಂತೆಂದೂ ನೀನೆ ಭಗವತ್ಕಾರ್ಯಸಾಧಕನೆಂದೂ ಸಾರುತಿದೆ ಶ್ರುತಿ ಇಂದೂ ಲೋಕಮಾತೆಗೆ ನಮಿಸಿ ದಶಶಿರ ನಂದನನ ಸಂಹರಿಸಿ ಮಹದಾನಂದ ನೀ ವನವ ಭಂಗಿಸಿ ರಘುನಂದನಗೆ ಮುದದಿಂದ ವಂದಿಸಿ ನೊಂದ ದೃ- ಪದನಂದನೇಯಳಾ- ನಂದಪಡಿಸಲು ಕೊಂದೆ ಕೌರವ ವೃಂದವೆಲ್ಲವ ಸವರಿ ನಂದನಂದನಿಗಾನಂದ ಪಡಿಸಿದೆ ಇಂದಿರೇಶ ಶ್ರೀ ವೇಂಕಟೇಶನೆ ಎಂದಿಗೂ ಪರದೈವವೆಂದು ಬಂದು ಬೋಧೆಯನಿತ್ತ ಆ- ನಂದತೀರ್ಥ ನೀ ಸಮರ್ಥಾ3
--------------
ಉರಗಾದ್ರಿವಾಸವಿಠಲದಾಸರು