ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ರಂಗನಾಥ ಬೇಗ ಬಾರೋ ಪ ತುಂಗಮಹಿಮ ಬಂದು ಭವಭಂಗ ಮಾಡೋ ಅ.ಪ ಇಂದು ಬಂದೆ ಕುಂದುಎಲ್ಲಹಿಂದುದೂಡೋ ಮುಂದುಮಾಡಿ ಛಂದಭಕ್ತಿ ಕಂದನೆಂದು ಕೈಯ ಪಿಡಿಯೋ 1 ಬಂಧುವಲ್ಲೆ ನೀನೇ ಜಗಕೆ ನಂದಶಯಸ ಬಂಧಮೋಚಕಾ ಕಾವೆ ಪೇಳುಗೋವಿಂದಾ 2 ಬಿಂಬನೀನು ಹೌದು ಪ್ರತಿಬಿಂಬ ನಾನು ನನ್ನ ವ್ಯಾಪಾರ ಅಂಬೋದೇಕೋ ದೋಷಿಯೆಂತೆನ್ನಾ 3 ಹಂಬಲವ ಬಿಟ್ಟುಸಕಲ ನಂಬಿದೆನೋ ಸ್ವಾಮಿಯೆಂತೆಂದು ತುಂಬಿಶುಧ್ದ ಜ್ಞಾನ ಭಕುತಿ ಅಂಬುಜಾಕ್ಷಯಿಂಬು ನೀಡೈಯ್ಯಾ4 ಭುಕ್ತಿ ನೀನೇ ಪ್ರಾಣ ನೀನೆಸರ್ವಸ್ವ ಏನು ಇನ್ನು ಮಾಡಲಾಪೆ ನೀನೆವಲಿದು ಕಾಯಬೇಕೈಯ್ಯ5 ವಾಸುದೇವ ಪೂರ್ಣ ಸುದ್ಗುಣಾ ತೋಷಕಾಯ ಶ್ರೀಶನಿನ್ನ ದಾಸನೆಂದು ಒಪ್ಪಿಕೊಳ್ಳಯ್ಯ 6 ಏಕಾನೇಕರೂಪ ಸಕಲ ಲೋಕ ಸೃಜಿಸಿ ಅಳಿವೆ ಅನೀಕಾ ಬೇಕು ಎನಿಪೆ ಭಕ್ತರಲ್ಲಿ ಸಾಕಬೇಕು ಶ್ರೀಗೆ ನಾಯಕ 7 ಮೋದ ಪೂರ್ಣ ಬಾದರಾಯಣಾ ಆದಿಮಧ್ಯ ಅಂತ್ಯದೂರ ಸಾಧುಪ್ರಾಪ್ಯನೇಮ ವರ್ಜಿತಾ 8 ಶರಣು ಶರಣು ಮಧ್ವಸದನ ಶರಣು ಶರಣು ಬೃಹತಿಪ್ರತಿಪಾದ್ಯ ಶರಣು ಶರಣು “ಕೃಷ್ಣವಿಠಲ” ಶರಣು ರಂಗ ಕರುಣಾ ಸಾಗರ9
--------------
ಕೃಷ್ಣವಿಠಲದಾಸರು
ವಿಠಲ ಓಡಿ ಬಾರೊ ತೊಟ್ಟಿಲನೇರೊ ಪುಟ್ಟ ಕಮಲದಂಥ ಬಟ್ಟ ಮುಖವ ತೋರೊ ಪ. ಜಟ್ಟಿಯಂದದಿ ಭುಜ ತಟ್ಟಿ ಹುಂಕರಿಸುತ ಅ- ರಿಷ್ಟ ವೃಷಭನನ್ನು ಮೆಟ್ಟಿ ಮಡುಹಿದಂಥ 1 ಹೇಷಿಕ ಭೀಷಣ ಕೇಶಿಯಂಬಸುರನ ಘಾಸಿಮಾಡಿದ ತೋಳ ಬೀಸುತ ಭರದಿಂದ 2 ಮಂದಹಾಸದಿ ಶರದಿಂದು ಕಾಂತಿಯ ಗೆಲ್ವ ಸುಂದರ ಮುಖ ಪೂರ್ಣಾನಂದ ಗೋಪಿಯ ತಂದ 3 ಮೀಸಲ ನೊರೆಹಾಲ ಕಾಸಿ ಸಕ್ಕರೆ ಕೂಡಿ ವಾಸ ಚೂರ್ಣವನಿಕ್ಕಿ ಶ್ರೀಶನಿನ್ನೊಶಕೀವೆ 4 ನಿತ್ಯ ಸುಖಾಂಬುಧೆ ನಿರವಧಿ ಫಲದ ಸ- ರ್ವೋತ್ತಮ ಶೇಷಾದ್ರಿ ಶಿಖರೀಶ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ