ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು
ಹನುಮಂತ ಹನುಮಂತ ಹನುಮಂತ ಪ ಜನರ ಪೊರೆಯುತ ತತುವರೊಳು ಪ್ರೇರಿತ ಅ.ಪ ಪವಮಾನ ಪವಮಾನ ಪವಮಾನ ಪವಮಾನ ಪರಮ ಪಾವನ ಅಣುಮಹದ್ಘನ ವನಧಿಲಂಘನ ವೀತಿಹೋತ್ರನ ಪಡಿಸಿತೃಪ್ತನ ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ ಕುಶಲವಾರ್ತೆಯ ಪೇಳಲು ಜೀಯಾ ರಾಮಾಲಿಂಗನದಿಂದ ಆನಂದ ತಾ ನಿಂದಾ ತಾ ನಿಂದ ತಾ ನಿಂದ ನೆರಹಿ ಆನಂದ ರಣಮುಖಕೆಂದಾ ಮಾಡಿಸಿ ನಿಂದಾ ರಾವಣವಧೆಗೆಂದಾ 1 ತ್ರಿಜಗ ಖ್ಯಾತ ಅತಿ ಮಹಾರಥ ಯದುಪತಿ ಪ್ರೀತಾ ಸುರರ ಸೇವಿತಾ ಗರಳಭುಂಜಿತಾ ಸತಿಗೆ ಪೂವಿತ್ತ ಭುಜಬಲಯುತಾ ಧೀಮಂತಾ ಧೀಮಂತಾ ಧೀಮಂತಾ ಧೀಮಂತಾ ಭಾರತೀಕಾಂತಾ ದುರಳ ಮಣಿಮಂತಾ ಸೆಣಸಿಬರೆ ನಿಂತಾ ಹರಣ ಮಾಡಿ ಪಂಥಗೆಲಿದು ತಾ ನಿಂದಾ ಪ್ರಣಯನಾಗಿ ನಿಂತಾ ಕೀಚಕನ ಧ್ವಾಂತದೊಳು ತಾ ನೋಡಿ ತಾ ನೋಡಿ ತಾ ನೋಡಿ ತಾ ನೋಡಿ ಅವನೊಳು ಕೂಡಿ ಕೈಯ ಹಿಡಿದಾಡಿ ಕೇಳಿಯೊಳು ಕೂಡಿ ಉರದಿಶಿರ ನೆಲಕೆ ಈಡಾಡಿ ನಲಿದು ತೋರಿದಾ 2 ಆನಂದ ಆನಂದ ಆನಂದ ಆನಂದ ತಾ ನಿಂದ ಶ್ರೀಮ ದಾನಂದ ಆನಂದ ಬುಧಜನಕ್ಲೇಶದಿಹ ಮನ ನೋಡಿ ಜೀ ಸೂತ್ರ ವ್ಯಾಖ್ಯಾನ ಮಾಡಿ ಪಾವನ ವಾದಿಭಂಜನ ಬಾದರಾಯಣ ಪ್ರೀತಿಪಾತ್ರ ಏಕಾಂತ ಭಕ್ತ ತಾನಿತ್ತ ತಾನಿತ್ತ ತಾನಿತ್ತ ತಾನಿತ್ತ ಜಗಕತಿಮೋದ ಶಾಸ್ತ್ರ ತ್ರಿವಿಧ ತರತಮಭೇದ ನಿತ್ಯ ಕಾರಣ ನಿತ್ಯ ಕಾರ್ಯ ಅನಿತ್ಯ ಪ್ರಕೃತಿ ಸತ್ಯ ಸುಗುಣವೆ ನಿತ್ಯ ನಿತ್ಯ ದ್ವೈತವು ಸತ್ಯವೆಂದ ಶ್ರೀವೇಂಕಟೇಶನ ನಿಜದೂತ 3
--------------
ಉರಗಾದ್ರಿವಾಸವಿಠಲದಾಸರು