ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
ಓಹೋ ಸುಮ್ಮನೆ ಮರುಳಾದೆ ಮಹಿಮೆಯನರಿಯದೆ ಪ. ದೇವಾಧಿ ದೇವ ಬಂದು ಮನೆಯಲಿಂದು ಕಾವಲಾಗಿರುವನೆಂದು ತಾ ತಿಳಿದಿರಲಿಂದು ನಾ ವನಿತೆಯ ಒಡಗೂಡುತ ಪೊರಟರೆ ಕಾವರಿದಾರೆಂಬುದ ಭ್ರಮೆಗೊಂಡು 1 ನೀರಿನ ಮೇಲೆ ಧರೆಯ ನಿಲ್ಲಿಸಿದಂಥ ಈರೇಳು ಲೋಕದ ದೊರೆಯ ವಕ್ಷಸ್ಥಿತ ಸಿರಿಯ ಸೇರಿದ ದಾಸರಿಗಾರಿಂದಲು ಭಯ ಬಾರದೆಂಬ ಶ್ರುತಿಸಾರವ ಗ್ರಹಿಸದೆ 2 ಎಲ್ಲಿ ನೋಡಿದರಲ್ಲಿಪ್ಪ ಶ್ರೀವನಿತೆಯ ನಲ್ಲ ಭೂಪತಿ ನಮ್ಮಪ್ಪ ನೆನೆದಲ್ಲಿಗೆ ಬಪ್ಪ ಅಲ್ಲಿ ಇಲ್ಲಿ ಭಯವೆಲ್ಲವು ಬಿಡಿಸಲು ಬಲ್ಲ ಶೇಷಗಿರಿವಲ್ಲಭನಿರುತಿರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ತತ್ವಮತವೇ ಮತವು ಸಾತ್ತಿ ್ವಕರಿಗೆ ಪ ನಿತ್ಯ ನಿರ್ಮಲರಾದ ಮುಕ್ತಿಜೀವರಿಗೇ ಅ.ಪ ಶ್ರೀವನಿತೆ ಮತಿಗೆ ವಾರಿಜಸಂಭವಾ ಆವಂಗಜರಿಪು ಮನಕೆ ಅಹಂಕಾರದಲಿ ಯೀವಿಧ ದಶೇಂದ್ರಿಯಕೆ ಸೂರ್ಯಾದಿಗಳು ಎಂಬೋ 1 ಪಂಚಭೇದವನು ತರತಮಗಳನು ತಿಳಿಯುತಂ ವಂಚನಾದಿಗಳಿಂದ ರಹಿತರಾಗಿ ಪಂಚ ಸಂಸ್ಕಾರದಿಂ ಪರಿಶುದ್ಧರಾಗುತೆ ಪ್ರ- ಪಂಚವನು ದಾಟಿರುವ ಪರಮ ಭಕ್ತರಿಗೆ 2 ವನ್ನು ಒಂದೇ ಬಗೆಯ ಗೈದು ಮುದದಿ ಪನ್ನಗಾದ್ರಿನಿವಾಸ ಗುರುರಾಮ ವಿಠಲನ ಅ- ಹರ್ನಿಶಿಯು ಬಿಡದೆ ಪೂಜಿಸುವ ಸುಜನರಿಗೆ 3
--------------
ಗುರುರಾಮವಿಠಲ
ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವ ತಂದು ವಿಧಿಗೀವಂದೆ ನೀಸಾಧು ಜನರ ಸಲಹಲಿ ಬಂದೆ ಪ. ಮೋದದಿಂದೆಮ್ಮ ಮನದಿ ನಿಂದೆ ನೀಬಾಧಿಪ ದುರಿತತತಿಯ ಕೊಂದೆ ಅ.ಪ. ಸಕಲ ಸುರರಿಗೆ ಶಿರೋರನ್ನ ನೀಅಕಳಂಕಾಶ್ರಿತಜನಮಾನ್ಯನಿಖಿಲ ನಿಗಮನಿಕರದಿ ವಣ್ರ್ಯ ನಿನ್ನಕರುಣಾಕಟಾಕ್ಷದಿ ನೋಡೆನ್ನ 1 ಕೈವಲ್ಯಪದವಿಯ ಕೊಡಬಲ್ಲ ನಿನ್ನಸೇವಿಪ ಸುಜನರಿಗೆಣೆಯಿಲ್ಲಭಾವಜಕೋಟಿಯಿಂದಚೆಲ್ವ ನೀಶ್ರೀವನಿತೆಗೆ ಸಿಲುಕುವನಲ್ಲ 2 ಹಯವದನ ಹೃದಯಸದನಜಯ ಶಶಿವರ್ಣ ಜಗತಿಪೂರ್ಣಭಯಹರ ಭಾಸುರ ಸಿರಿಚರಣ ನಿನ್ನದಯಪಾತ್ರಾನುದ್ಧರಿಸೆನ್ನ 3
--------------
ವಾದಿರಾಜ