ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಕರುಣ ರಮೆಯ ರಮಣ ಉರಗಭೂಷಣಾ ಪ ದುರಿತಹರಣ ಶರಣಾವರಣ | ವರದ ಕಂಕಣಾ ಅ.ಪ ಶ್ರುತಿಗಳೆಲ್ಲ ನುಡಿವುದಲ್ಲ | ಪಿತನೆಂಬ ಸೊಲ್ಲ ಪತಿತರ ನೀ ಪೊರೆದೆಯೆಲ್ಲ | ಹಿತವೇಕೆನ್ನೊಳಿಲ್ಲಾ 1 ಅಸ್ತಿಪಂಜರವೆಂಬೀ ಮಂದಿರ | ವಸ್ತಿರಾಂಬರ ವ್ಯಸ್ತ ಪಂಚಭೂತದಾಕಾರಾ ಗ್ರಸ್ತ ನಶ್ವರಾ 2 ಜನನ ಮರಣ ದುರಿತಗಡಣ | ಮನುಜ ಭವಿ ಶರಣ ಮನಕೆ ಶೋಕಾನೇಕ ಕಾರಣ | ದನುಜ ವಿದಾರಣಾ 3 ಧರೆಯೊಳುದಿಪ ಸೆರೆಯ ಬಿಡಿಸೋ | ವರವ ಕರುಣಿಸೋ ಹರಿಯೆ ರಾಮ ವಿಠಲ ಪಾಲಿಸೋ | ನಿರುತ ನಿರುಕಿಸೋ4 ಕಾವರನ್ಯರಿಲ್ಲವೆನ್ನ | ಶ್ರೀವನಿತಾರನ್ನ ಮಾವಿನಕೆರೆಯರಸ ಮುನ್ನ | ನೋವ ಬಿಡಿಸೆನ್ನ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆ ನಿರ್ದಯವೋ ದೇವ ದೇವ ಸ್ವಭಾವ ಯಾಕೆ ಮರೆತೆ ದೇವಾ [ಎನ್ನನು] ಪ ಯಾಕೆಂಬುದರಿಯೆನಾ ಶ್ರೀಕರಾಂಬುಜನೇತ್ರ ಕಾಕುಮನುಜನೆಂದು ನೀಕರಿಸಿದೆಯೋ ಅ.ಪ ಉದರ ಪೋಷಣೆಗಾಗಿ ವಿಧ ವಿಧ ದೇಶದಿ ಬಧಿರ ಹೆಳವ ಮೂಗ ಅಧಿಕರೋಗಿಯು ಅಂಧಾ ವಿದಿತ ವೇಷಗಳಿಂದ ಅಧಿಕ ಬಳಲಿದೆನಯ್ಯ ಪದುಮಾಕ್ಷ ಪರಂಧಾಮ ಮುದದೆ ಪೋಷಿಸಲು1 ಪರರ ನಿಂದನೆ ಗೈದೆ ನೆರೆಯವರನು ಕೊಂದೆ ಪರರ ಸ್ವತ್ತನು ತಂದೆ ಪರರನ್ನವನು ತಿಂದೆ ದುರಿತಕಾರ್ಯವಗೈದೆ ನರಹರಿ ನಿನ್ನ ಮರೆದೆ ಪರರು ಕಾವವರಿಲ್ಲ ನೆರೆನಂಬಿದೇ ನಿನ್ನ 2 ಸಾವು ಜನ್ಮಂಗಳಿಂದ ನೋವು ಬಂಧನವಡೆದು ಬೇವಿನಂದದೆ ದುರ್ಗುಣಭಾವವ ತಳೆದೆನೋ ಕಾವರಿಲ್ಲವೋಯೆನ್ನ ಶ್ರೀವನಿತಾರನ್ನ ಸಾವುನೋವನು ಬಿಡಿಸೊ ಮಾವಿನಕೆರೆರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್