ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಮಾಡೋ ರಂಗ ಹೇ ಕೃಪಾಂಗ ಪ ದಯಮಾಡಿ ನೀಯೆನ್ನ ಭಯವ ಪರಿಹರಿಸು ಚಿ- ನ್ಮಯ ಮೂರುತಿ ಸುಖಮಯ ಮಂದರಧರ ಅ.ಪ. ಪತಿತ ಪಾವನ ನೀನು ಪತಿತಾಗ್ರೇಸರ ನಾನು ಜತನದಿ ಭಕುತಿಯ ಪಥವ ತೋರಿ ನೀನು 1 ಮುಕ್ತಿ ಫಲಪ್ರದ ಶಕ್ತಿಯು ನಿನ್ನ ವ್ಯತಿರಿಕ್ತವಲ್ಲವೆಂದು ಭಕ್ತಿಯುವರವಳು...[?] 2 ಕಾಮಧೇನು ನೀನು ಕಾಮನಯ್ಯನು ನೀನು ಕಾಮಿತಫಲದಾತ ಮಾಮನೋಹಕ ತ್ರಾತ 3 ಸೃಷ್ಟಿಪಾಲಕ ನಿನ್ನ ಯಷ್ಟೆಂತವರ್ಣಿಪೆ ಅಷ್ಟು ಕರ್ತೃತ್ವಕ್ಕೆ ಶಿಷ್ಟಮೂರುತಿ ನೀನೆ 4 ಭಾರಿಭಾರಿಗೆ ನಿನ್ನ ಆರಾಧಿಸುವರ ಚಾರುಚರಣವನು ತೋರೊ ಮಾರಜನಕ 5 ಸಕಲಕ್ಕು ನೀ ಮುಖ್ಯ ಶಕಟಭಂಜನ ಕೇಳು ಪ್ರಕಟನಾಗಿಯೆನಗೆ ಶಕ್ತಿಯ ನೀಡೋ6 ಭೂವಲಯದೊಳು ನಾ ಆವಲ್ಯಪೋಗಲು ಕಾವಲು ನೀನೇ ಶ್ರೀವತ್ಸಾಂಕಿತನೇ 7
--------------
ಸಿರಿವತ್ಸಾಂಕಿತರು
ಧರೆಯೊಳು ನಾ ಬಂದು ಇರುಳು ಹಗಲು ನಿನ್ನ ಸ್ಮರಣೆಯ ಮಾಡದೆ ಪರರ ಬಾಗಿಲ ಕಾಯ್ದೆ ಮುರಲೀಧರ ಶ್ರೀಕೃಷ್ಣ ಪೊರಿಯೊ ತಪ್ಪನು ಕ್ಷಮಿಸಿ ಗೊಲ್ಲರ ಸಖದವನೇ ಶ್ರೀವತ್ಸಾಂಕಿತನೇ ನಾರದನಂದನ ನೀನು ಗಾರುಮಾಡಿಯೆನ್ನ ದೂರಗ್ರಹಿಸಲು ಈಗ ಆರು ಕಾಯರೋ ಜಾರ ಚೋರ ಕೃಷ್ಣ ಮಾರಜನಕ ನೀನು ಪಾರಗಾಣಿಸು ದೇವ ಶಿರಿವತ್ಸಾಂಕಿತನೇ
--------------
ಸಿರಿವತ್ಸಾಂಕಿತರು