ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ದೇವ, ಗುರುಸ್ತುತಿ ಅವತಾರತ್ರಯ ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ ಕಾಣದೆ ನಿನ್ನ ಮಹಿಮೆ ಧ್ಯಾನಿಸದೆ ಮರುಳಾದೆ ಪ ಸೂತ್ರ ನಾಮಕ ನೀನು ಛತ್ರಪುರದೊಳು ನೆಲೆಶಿ ಶತ್ರು ಪುಂಜವ ನಿಮಿಷ ಮಾತ್ರದಲಿ ತುಳಿದಿ ಗಾತ್ರದಲಿ ನೀ ಲಾಲಿಸು ಪಾತ್ರನೆಂದೆನಿಸೆನ್ನ ಕೃತ್ರಿಮದ್ವಿಜ ಸ್ತೋತ್ರ ಪಾತ್ರ ಕೃಷ್ಣನ ದಾಸ 1 ಕಾಮನೃಷನು ಹಿಂದೆ ರಾಮನಾಜ್ಞವ ತರಿಸಿ ಆ ಮಹಾಸುರರೇ ಮಧಾಮವನು ಸಾರೆ ಈ ಮಹಿಯೊಳಗೆ ನಿಸ್ಸೀಮನೊಬ್ಬನೆ ಯೆಂದು ಭೂಮಿಯಲಿ ನಿನ್ನ ಗುಣ ಸ್ತೋಮವನು ತೋರಿಸಿದೆ 2 ಅವತಾರ ತ್ರಯಗಳಲಿ ಸ್ವವಶವ್ಯಾಪಿ ಲಕ್ಷ್ಮೀ - ಧವನ ಮನವರಿತು ನೀ ಅವತರಿಸಿದೆ ಯುವತಿ ವೇಷದಿ ಗೌರೀಧವನ ಮೋಹಸಿದಂಥ ಶ್ರೀವತ್ಸಾಂಕಿತನಾದ ಅವನಿಗೊಡೆಯನ ದಾಸ 3
--------------
ಸಿರಿವತ್ಸಾಂಕಿತರು
ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ನೋಡಿರಯ್ಯ ಶ್ರೀರಾಮನ ಮೂರ್ತಿಯ ಪಾಡಿರೊ ಮಹಿಮೆಯನು ಪ ಅಗಣಿತ ಮಹಿಮನು ತ್ರಿಗುಣ ವರ್ಜಿತನು ಸುಗುಣೇಂದ್ರತೀರ್ಥರಿಂದ ಬಗೆಬಗೆ ಪೂಜೆಗೊಂಬ 1 ಸಂಜೀವವನು ತಂದ ಅಂಜನಸುತನಯ್ಯ ನಂಜನಗೂಡೊಳಿಪ್ಪ ಕಂಜಾಕ್ಷಕರುಣಿಯ 2 ವಾರಿಜ ಭವಪಿತ ಮಾರುತ ಗತಿಪ್ರಿಯ ವಾರಿಧಿಬಂಧಕ ಶ್ರೀರಮಾಧವನನ್ನು ಮಂಗಳ ಪುರದೊಳು ಮಂಗಳವಾರದಿ ಮಂಗಳದಿ ಮೆರೆದನಂಗನಪಿತನನ್ನು 3 ವರ ರಾಘವೇಂದ್ರರ ಕರುಣಾಗ್ರೇಸರ ಶ್ರೀವತ್ಸಾಂಕಿತನಾದ ಅರವಿದೂರನನ್ನು 4
--------------
ಸಿರಿವತ್ಸಾಂಕಿತರು