ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ ಸಲಹಿದ ನರಹರಿ ಒಂದೇ ಮನದಂಬರೀಷನ ಕಾಯ್ದ ಹರಿ ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ ನಿತ್ಯ ನೆನಯಿರಿ ಹರಿ ಭಕ್ತರು 1 ಸಾರ ನಾಲ್ಕು ಯುಗದಾಧಾರ ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ ಹರಿ ಭಕ್ತರೆ ಕೇಳಿ2 ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು 3 ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು ತಾನೇ ನುಡಿಸಿದನಿಂದು ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ ಹರಿಯದೆಂದು ನುಡಿವುದು ಹರಿಭಗವದ್ಭಕ್ತರು 4 ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು ವರವ ತೋರಿ ಪಾಮರರ ಪುನೀತರನು ಮಾಡೆ ಹರಿ ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ 5 ಜತೆ ಶರಣು ಭಕ್ತರ ಪಾಲ ಶರಣು ಶ್ರೀಲೋಲಾ ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಜಯಜಯ ನಂದಕುಮಾರ ಜಯ ವೃಂದಾವನ ವಿಹಾರ ಪ ನಾರಾಯಣ ನಾರಾಯಣ ಜಯ ಗೋವಿಂದ ಹರೆ ಅ.ಪ ವಾಗೀಶಾರ್ಚಿತಪಾದ ಯೋಗೀಧ್ಯಾನವಿನೋದ ನಾರಾಯಣ ನಾರಾಯಣ ಜಯಗೋವಿಂದ ಹರೆ 1 ಲೀಲಾಮಾನುಷರೂಪ ಶ್ರೀಲೋಲಾ ಜಿತಕೋಪ ನಾರಾಯಣ ನಾರಾಯಣ ಜಯಗೋವಿಂದ ಹರೆ 2 ಶ್ರೀ ಶೇಷಾಚಲವಾಸ ಶ್ರೀಶ ಜಯ ಸರ್ವೇಶ ನಾರಾಯಣ ನಾರಾಯಣ ಜಯಗೋವಿಂದ ಹರೆ 3
--------------
ನಂಜನಗೂಡು ತಿರುಮಲಾಂಬಾ
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶರಣರ ಪರಿಪಾಲಾ ಶ್ರೀಲೋಲಾ ಪರಮ ಸುಂದರ ಬಾಲಾ ಪ. ರುಕ್ಮಿಣಿ ರಮಣಾ ರಕ್ಕಸ ಹರಣಾ ಶಕ್ರಾದಿನುತ ಚರಣಾಭರಣಾ 1 ಮಧ್ವ ಮುನೀಶಾ ಶುದ್ಧ ಪ್ರಕಾಶಾ ಪದ್ಮನಾಭ ಮನಶುದ್ಧಿಯ ನೀಡೋ 2 ಕಾಮಿತ ಫಲದಾ ಕೋಮಲ ಪಾದಾ ಶ್ರೀ ಮನೋಹರ ಸುರ ಕಾಮ್ಯ ಪ್ರದಾತಾ 3 ಮೃಡ ಸುರ ಪ್ರೀಯಾ ಧೃಡಮನ ಕೊಡು ನಿನ್ನಡಿಯಲಿ ಜೀಯಾ 4 ಗೋಪಿಯ ತನಯಾ ನೀ ಪಿಡಿ ಕೈಯ್ಯಾ ಗೋಪಾಲಕೃಷ್ಣವಿಠ್ಠಲ ಹೇ ಜೀಯ್ಯಾ 5
--------------
ಅಂಬಾಬಾಯಿ
ಎಂಥ ದಯಾವಂತನೊ ಲಕ್ಷುಮಿಕಾಂತಎಂಥ ದಯಾವಂತನೊ ಪ.ಕರಿಜನ್ಮ ತಾಳ್ದರಸ ನೀರೊಳಗೆ ನಕ್ಕರಿಯೊಳು ಕಾದಿ ಮುಳುಗಿ ಹರಿಹರಿಹೊರಿಯೆಂದು ಹರಣವ ತೊರೆವಾಗಬರಿಮಂಡೆಯಲಿ ಬಿಟ್ಟರಸಿಯ ಭರದ್ಯುದ್ಧರಿಸಿದೆ ಭಳಿ ಕಿಂಕರರಭಿಮಾನಿ 1ಶೂಲಿಯ ಮತಿಕದ್ದುವರಕೊಂಡು ಮಹಾಸುರಮೇಲೆ ಬೆಂಬತ್ತಿ ಓಡಲುಶ್ರೀಲೋಲಾಕಾಲಕೆ ಆಲೋಚಿಸಿಬಾಲೆಯ ಲೀಲೆಲಿ ಖಳನ ಜ್ವಲಿಸಿ ಕಪಾಲಿಯ ಪಾಲಿಸಿದೆ ಸುರ ಶಾರ್ದೂಲ 2ನಿನ್ನನುಜೆಯಮಾನವಕೊಂಡೇನೆಂದುಕುನ್ನಿ ಕೌರವನೆಳೆಯೆ ಕೃಷ್ಣಣ್ಣ ಪ್ರಸನ್ವೆಂಕಟ ರನ್ನ ಬಾರೆನ್ನಲುಪುಣ್ಯ ಪುರುಷವರೇಣ್ಯ ನೀ ಬಂದೆಮನ್ನಿಸಿ ಬಣ್ಣ ಬಣ್ಣದ ವಸ್ತ್ರವÀನುಡಿಸಿದೆ 3
--------------
ಪ್ರಸನ್ನವೆಂಕಟದಾಸರು
ಪಾಲಿಸು ಲೋಕಾ | ಪಾಲ ಶ್ರೀಲೋಲಾ |ಪಾಲಯಾಚ್ಯುತ ವನಮಾಲ ಗೋಪಾಲಾ ಪಅಗಣಿತಮಹಿಮಾ | ಆಶ್ರಿತದಾತಾ |ಆಘಹರನಗಧರ| ಆತ್ಮಾಭಿರಾಮಾ 1ಶಾಂತ ಸ್ವರೂಪಾ | ನಿಶ್ಚಿಂತ ನಿರಾಮಯ |ಅಂತ್ಯರಹಿತ | ರಮಾಕಾಂತ ಪ್ರಖ್ಯಾತಾ 2ನಂದನ ನಂದಾ | ನಂದ ಮುಕುಂದಾ |ಸುಂದರಮೂರ್ತಿ|ಗೋವಿಂದದಾಸನ ವಂದ್ಯ 3
--------------
ಗೋವಿಂದದಾಸ