ಏಕ ಬÁಣ ಬಿಟ್ಟನು ಜಾಣ ಪ
ಏಕ ಸಂಕಲ್ಪದಿ ಏಕ ವಾಕ್ಯವನು ಅ.ಪ.
ಏಕ ದೈವ ಲೋಕೈಕ ಮಹಿಮ ಜಗ-
ದೇಕ ಕಾರಣ ಭಕ್ತ ಶೋಕ ನಿವಾರಣ
ಶ್ರೀಕರ ಶುಭಗುಣ ಸೀತಾರಮಣ ಪೂರ್ಣ
ರಾಕೇಂದು ವದನ ದಿವಾಕರ ಕುಲಭೂಷಣ 1
ಕಾಕುಜನರ ಬಲು ಶೋಕಕಾರಣ ಕರು
ಣಾಕರ ಶರಣಾಗತ ಜನ ರಕ್ಷಣ
ಶ್ರೀಕಮಲೇಕ್ಷಣ ಲೋಕ ವಿಲಕ್ಷಣ
ಲೋಕವಿನುತ ಶ್ರೀ ಕರಿಗಿರಿ ನಿಕೇತನ 2