ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ 157 ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಕೃತಿ ನಡೆಸಿ ಶರಣರ ಕಾಯ್ವ ಪ ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1 ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2 ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು