ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸು ಜನ್ಮದಲೇನು ಪುಣ್ಯಮಾಡಿದೆವೊ ಲೇಸಾಗಿನ್ನು ಸ್ವಾಮಿ ನಿಮ್ಮನ ಕಂಡೆವೊ ಧ್ರುವ ಸಾಧನವೆಂಥಾದೆಂಬುದು ನಾವಿನ್ನರಿಯೆವೊ ನಿಮ್ಮ ದರುಶನದಲಿ ಪಾವನಾದೆವೊ ಇದೆ ಸಕಲ ಸಾಧನದ ಸುಫಲವೊ ಸ್ವಾಮಿ ನಿಮ್ಮ ದಯಕ ಸಾನುಕೂಲವೊ 1 ಮನೋಹರ ಮೋಹನಮೂರ್ತಿ ಕಂಡೆವೊ ಕೃಷ್ಣ ನಿಮ್ಮನ ಬಿಗಿದಪ್ಪಿಕೊಂಡೆವೊ ನಾನಾಸವಿಯ ನೆಲೆಗಳೂಟ ಉಂಡೆವೊ ಎಂದೂ ಬಿಡದೆ ಹೃದಯಲಿಟ್ಟುಕೊಂಡೆವೊ 2 ಹೆಣ್ಣು ಪ್ರಾಣಿಗಳು ನಾವೇನು ಬಲ್ಲ್ಲಿವೊ ನಿಮ್ಮ ವಿನಾ ಇನ್ನೊಂದು ನಾವೊಲ್ಲಿವೊ ಚನ್ನಾಗೊಲಿದ ಭಾನುಕೋಟಿ ನಮ್ಮಲ್ಲಿವೊ ಚಿಣ್ಣಮಹಿಪತಿಗಿದೆ ಸಾಫಲ್ಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು
ವದನದಲಿ ಮನವೇ ನೆನಿನಾಮ ಶ್ರಿಹರಿಯಾ | ಸದಮಲದಲಿ ಮರೆಯದೆ ಬಾವದಲಿ ಪ ದಾವನು ದಾಸರ ದಾಸರ ಪದರಾ | ಜೀವ ಯುಗಳ ದರುಶನದಲಿ | ತೀವಿಕೊಂಡಿಹ ಬಹುಜನ್ಮದು ಷ್ಕøತ | ಲಾವಡಗುತಿಹವು ನಿಮಿಷದಲಿ 1 ನಾಮದ ಮಹಿಮೆಯ ತಿಳಿಯಲು ಅರಸಲು | ಅಮಹಾನಿಗಮಾಗಮದಲಿ | ವ್ಯೋಮ ಕೇಶನಾರದಾಹನುಮರೆ ಬಲ್ಲ | ನಾಮದ ಸುಖವೆಂತೋ ಭುವನದಲಿ2 ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ | ಅರ್ವವ ಹಿಡದು ತ್ರಿಕರ್ಣದಲಿ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ | ಮೆರ್ಪಪಾದುಕ ವಿಟ್ಟು ಹೃದಯದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಯು ಕುಮಾರ ಸುಜನೋದ್ಧಾರ ಮಾ ರಮಣ ಪ್ರಿಯ ಭಕುತವರ ಪ ಪಾರಾವಾರದಂತಿಹ ಈ ಘೋರ ಸಂಸಾರದ ಪಾರವಗಾಣಲುಪಾಯವ ತೋರೊಅ.ಪ ಇನಕುಲ ತಿಲಕನ ಅನವರತದಿ ದರು ಶನದಲಿ ಹಿಗ್ಗುವ ಅನುಭವವು ಸನಕ ಸನಂದನ ಮುನಿಜನಗಳಿಗುಂಟೆ ವಿನಯದಿ ಬೇಡುವೆ ಅನುಗ್ರಹವ 1 ಈ ಮಹಿಯೊಳು ಬಲ ಭೀಮನೆಂಬ ದಿವ್ಯ ನಾಮದಿ ಪರಿಪರಿ ಸೇವಿಸುತ ಸತ್ಯ ಭಾಮಾಕಾಂತನ ಪ್ರೇಮ ಪಾತ್ರನೆಂದು ಕಾಮಿಸುವೆನು ನಿನ್ನ ವರ ದಯುವ 2 ವರ ಯತಿ ವೇಷದಿ ಹರಿಮತವನು ಬಲು ಹರಡುತ ಧರೆಯೊಳು ಸುಜನರಿಗೆ ನರ ಹರಿ ಲೋಕಕೆ ಮಾರ್ಗವರುಹಿದ ಗುರುಗಣ ಗುರು ಮಧ್ವರಾಯ ಪ್ರಸನ್ನನಾಗೊ 3
--------------
ವಿದ್ಯಾಪ್ರಸನ್ನತೀರ್ಥರು