ನಾರದ ನುತಿಸುವನಾಮ ನಾರಾಯಣ ಹರಿನಾಮ ಪ
ಮಾರವೈರಿಯ ಜಪನಾಮ ನೀರಜನಾಭನ ನಾಮ ಅ.ಪ
ತಾಪಸನರಸಿಯ ಶಾಪವನಳಿಸುತೆ
ಆ ಪರಮೇಶನ ಚಾಪವ ಮುರಿದು
ಭೂಪತಿಯಣುಗಿ ಶ್ರೀರೂಪಿಯ ವ್ಯಾe್ಯದಿ
ಪಾಪಿ ರಾವಣನನು ಛೇದಿಸುವಾ ನಾಮ 1
ನಂದ ಯಶೋದ ಕಂದನೆನಿಸಿ ಬಹು
ಮಂದಿ ರಕ್ಕಸರ ಕೊಂದು ಗೋಪಿಯರ
ವೃಂದದಿ ಮುರಳಿಯಾನಂದವ ನೀಡಿದ
ಸುಂದರ ಮಾಂಗಿರಿ ರಂಗನ ನಾಮ 2