ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲು ರಮ್ಯವಾಗಿದೆ ಹರಿಯ ಮಂಚ ಪ ಎಲರುಣಿಕುಲ ರಾಜ ರಾಜೇಶ್ವರನ ಮಂಚಅ.ಪ. ಪವನತನಯನ ಮಂಚ ಪಾವನತರ ಮಂಚ ಭುವನತ್ರಯನ ಪೊತ್ತ ಭಾರಿಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ 1 ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಡಿದ ಮಂಚ ತಾಲ ಮುಸಲ ಹಲವ ಪಿಡಿದಿರುವ ಮಂಚ 2 ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸ ರುದ್ರನನು ಪಡೆದ ಮಂಚ ಭಿಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ 3 ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತ್ತಿಸಿ ಹಿಗ್ಗುವ ಮಂಚ ದೇವಕೀಜಠರದಿ ಜನಿಸಿದ ಮಂಚ4 ವಾರುಣೀ ದೇವಿ ವರನೆನಿಸಿದ ಮಂಚ ಸಾರುವ ಭಕುತರ ಸಲಹೊ ಮಂಚ ಕಾರುಣ್ಯನಿಧಿ ಜಗನ್ನಾಥ ವಿಠಲನ ವಿ ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ5
--------------
ಜಗನ್ನಾಥದಾಸರು
ರಾಮನ ನೋಡಿರೋ ನಮ್ಮ ಸೀತಾರಾಮನ ನೋಡಿರೋ ಪ ರಾಮನನೋಡುತ ಪ್ರೇಮವ ಸುರಿಸುತ ನಾಮವ ನುಡಿಯುತ ನೇಮದಿ ಬೇಡುತ ಅ.ಪ ಅಜಭವಾದಿಗಳರಸನೀತಾ ಮತ್ತೆ ನಿಜಭಕುತರಿಗೆ ಮುಕ್ತಿಪ್ರದಾತ ತ್ಯಜಿಸಿ ದುಷ್ಟರಸಂಗ ಭಜಿಸಿ ಶಿಷ್ಯರ ಸಂಗ ಭುಜಗಭವವೆಂದರಿತು ನಿಜಸುಖಮೆಲ್ಲಲು 1 ಪಾದ್ಯ ಮತ್ತೆ ನಿತ್ಯಾನಿತ್ಯ ಜಗಸೃಜಿಪ ದೇವದೇವೇಶ ಮುಕ್ತಾಮುಕ್ತಾಶ್ರಯ ಸತ್ಯ ಪ್ರಾಣನ ಹೃಸ್ಥ ಉತ್ತಮೋತ್ತಮನೆಂದು ಎತ್ತಿಕೈಗಳ ಮುಗಿದು 2 ಭಕ್ತಿಯಿಂದಲಿ ನೋಡೆ ಸರ್ವಾಘಹರವೋ ಮತ್ತೆಪಾಡಲು ಕಾಮಿತ ಕರಗತವೊ ಹಸ್ತಿವರದನ ನೋಡೆ ಮತ್ತರಿಗೆ ಸಾಧ್ಯವೆ ವತ್ತುತ ಗೃಹಕೃತ್ಯ ಬೇಗ ಉತ್ತಮರಲ್ಲಿ 3 ಸುಲಭವಲ್ಲವೊ ಇಂಥಾ ಸಮಯ ಘಳಿಸಿ ನೋಡೀದವನೆ ಕೃತಾರ್ಥ ನಿತ್ಯ ಸಲಹುತ್ತಿರುವಂಥ ಅಲವ ಮಹಿಮಾರ್ಣವ ಲಲನೆ ಲಕ್ಷ್ಮಿಯ ನಾಳ್ವ 4 ಸರ್ವನಾಮಕ ನಿವನೂ ಮತ್ತೆ ಸರ್ವಪ್ರೇರಕ ಬಲಖ್ಯಾತ ನಿಹನೂ ಸರ್ವ ಸರ್ವಾಧಾರ ಸರ್ವೇಶ ಶಾಶ್ವತ ಸರ್ವಗುಣಗಣ ಪೂರ್ಣ ಸರ್ವವ್ಯಾಪ್ತನಾದ 5 ಆರಿಲ್ಲ ಸಮವಧಿಕ ಇವಗೇ ಮತ್ತೆ ಆರು ಕಾಣರು ನೆಲೆಯ ಸಾಕಲ್ಯ ಸತ್ಯ ಸಾರವಿಲ್ಲದ ಜಗದಿ ಸಾರನೊಬ್ಬನೆ ಇವನು ತೊರು ಪಾದಗಳೆಂದು ಸಾರಿಬೀಳುತ ಅಡ್ಡ 6 ಶರಣೆಂದ ವಿಭೀಷಣಗೆ ಪಟ್ಟ ಕಟ್ಟಿದನೂ ಕರುಣದಿಂದಲಿ ಶಬರಿಯ ಪೊರೆದವನು ದುರುಳ ಪಾಪಿಯ ದೊಡ್ಡ ಕವಿಯ ಮಾಡಿದ ಮಹಿಮ ಕರುಣ ಬೇಕಾದವರು 7
--------------
ಕೃಷ್ಣವಿಠಲದಾಸರು
ಏನು ಧನ್ಯಳೋ - ಲಕುಮಿ - ಎಂಥ ಮಾನ್ಯಳೋ ಪಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೊ ಅ.ಪಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಪೂರ್ಣಗುಣಳು ಸರ್ವಕಾಲ ಮಾಡುತಿಹಳು 1ಛತ್ರ ಚಾಮರವ್ಯಜನಪರ್ಯಂಕ ಪಾತ್ರರೂಪದಲ್ಲಿ ನಿಂತು |ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು 2ಸರುವಸ್ಥಳದಿ ವ್ಯಾಪ್ತನಾದ | ಸರುವದೋಷರಹಿತನಾದ |ಗರುಡಗಮನನಾದ ಪುರಂದರವಿಠಲನ ಸೇವಿಸುವಳೋ 3
--------------
ಪುರಂದರದಾಸರು