ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ಬೇಗದಿ ಮುಕುಂದ ಪ. ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ. ನಿರುತ ನಿನ್ನೊಳಗಿಹವು ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು ಪೀತಾಂಬರದಿಸರಿರವ ರೂಪಿಯಾಗಿ ಹೊಂದಿರುವಳು ನಗುತ 1 ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು ನೆನೆದು ಮರುಳಾದೆನು ವಿಲಿಪ್ತಿಯ ಸಲಿಸು 2 ತೋರದೊ ವರದ ನಿನ್ನನು ಮರೆದ ಕಾಯುವರ ಕಾಣೆ ನಿನ್ನಾಣೆ ಸಲಹೊ ಪುರಂದರಗೊಲಿದ 3 ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು ಸುಖವ ನೀಗಿ ನಾ ಬಾಗಿ ಕೂರ್ಮನಂತಿರುವೆ 4 ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು ಸುಜನಪಹಾಸಗೊಳಿಸದೆ 5
--------------
ತುಪಾಕಿ ವೆಂಕಟರಮಣಾಚಾರ್ಯ