ನಾಮರೆತರು ನೀಮರೆವರೆ ಹರಿಯೇ ಪ
ಅಭಿ | ರಾಮಪೂರ್ಣ ಕಾಮದುಷ್ಟರಾಕ್ಷಸಾಂತಕಅ.ಪ
ಸರ್ವತ್ರ ಸರ್ವವಾಗಿ ವ್ಯಾಪಿಸಿನೀನಿರುವೇ
ಸರ್ವೇಶ ಸರ್ವಾಧಾರಣಶರಣಜನ ಸುರತರುವೇ 1
ಸುಜ್ಞಾನಮಯ ಸ್ವರೂಪಾಂತರ್ಯಾಮಿಯು ನೀನು 2
ಪರಿ ಎಲ್ಲ ಭಕ್ತರಾ
ತ್ವರ | ದಿಂದ ಬಂದು ಪೊರೆವೆ ನೀ ಕರುಣಾ ಸಾಗರಾ 3
ಶುಕ | ಶೌನಕಾದಿ ಮೌನಿ ಹೃದಯ ಪದ್ಮಮಿತ್ರನೆ
ನಿನ್ನ | ಧ್ಯಾನ ಮಾಳ್ಪಗುಂಟೆ ಹಾನಿ ದೇವದೇವನೆ 4
ಕರೆದರೆ ಬರದಿರÀಲು ನಮ್ಮ ಕಾವರ್ಯಾರೆಲಾ
ವಿಧಿ | ಹರಮುಖಾಮರವಂದಿತ ಗುರುರಾಮ ವಿಠ್ಠಲ 5