ಭವ ಹರಣ
ನತ ಶರಣ ಪ
ಲೀಲಾ ವಿನೋದದಲಿ ಮೂಜಗವ ಸೃಜಿಸಿ
ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ
ಕಾಲಕಾಲಾರ್ಚಿತನೆ ಕಲುಷಹರನೆಂದು
ನೀಲಾಹಿವೇಣಿಯರು ನಿನ್ನ ತೂಗುವರು 1
ಶೇಷ ಪರಿಯಂಕದಲಿ ಶ್ರೀ ಸಮೇತದಲಿ
ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ
ಭಾಷಾಪತಿಯ ಪಡದೆ ನಾಭಿ ಕಮಲದಲಿ
ಪೋಷಿಸುವೆ ಜೀವರನು ಸರ್ವಕಾಲದಲಿ 2
ಶ್ರೀರಾಮ ಮಾಧವಾಶ್ರಿತಜನೋದ್ಧಾರಾ
ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ 3