ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓದುವುದು ವೇದ ಹಾಕುವುದು ಗಾಳ ಪ. ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ 1 ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) 2 ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ 3 ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ 4 ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ 5
--------------
ವಾದಿರಾಜ
ಭಾಗವತ ಮಹಿಮೆ ಬಣ್ಣಿಸಲಳವೇ ಪ ಈ ಭವಶರಧಿಗೆ ಸುನಾವೆಯಂತಿಹುದಯ್ಯಅ.ಪ ಸೂನು ಶ್ರೀ ಮನ್ನಾರಾಯಣ ಆಪದ್ಬಾಂಧವನಲ್ಲದಿನ್ನಿಲ್ಲವೆಂಬುವಾ1 ಮತ್ತೆ ಶಾಪದಲಿ ನಾರದನ ವಿಷಯವ ಪೇಳ್ವ 2 ಪರೀಕ್ಷಿತ ಶುಕ ಶ್ರೀಹರಿಯ ಅವತಾರಗಳ ವರ್ಣನೆಗಳು ಮತ್ತೆ ಮಹದಾದಿ ತತ್ವ ಸೃಷ್ಟಿಕ್ರಮ ಇತ್ಯಾದಿ ಪುಣ್ಯಚರಿತಗಳನು ಪೇಳ್ವ 3 ಆ ಬೊಮ್ಮಂಡದಿಂದೆ ಚತುರ್ಮುಖನ ಸೃಷ್ಟಿಯು ವಿಭಾಗವ ಪೇಳ್ವ ಸೂಕ್ಷ್ಮ ಪರಮಾಣು ಅಬ್ದಾದಿ ಕಾಲಗಳು ವ್ಯಷ್ಟಿ ಭೂತೋತ್ಪತ್ತಿ ಶ್ರೀ ವರಹ ರೂಪದಿ ತೋರಿದ ಮಹಿಮೆಯಾ 4 ವರಹಾವತಾರದೀ ಧರಣೀಯ ತಂದಂಥ ಶ್ರೀ ಕಪಿಲ ದೇವಹೂತಿಯ ಸಂವಾದವ ಪೇಳ್ವ 5 ಚತುರ ಸ್ಕಂದದಿ ನವಬ್ರಹ್ಮರ ಉತ್ಪತ್ತಿ ಪ್ರಾಚೀನ ಬರ್ಹಿಷರ ವೃತ್ತಾಂತವನು ಪೇಳ್ವ 6 ನೃಪರ ಋಷಭ ಚರಿತೆಗಳು ಪುತ್ರ ಭರತನ ಕಥೆಯು ನದ ನದಿಗಳ ಸೃಷ್ಟಿ ಜ್ಯೋತಿಶ್ಚಕ್ರ ನರಕ ಪಾತಾಳಗಳ ಪೇಳ್ವ 7 ಮಾನವ ವೃತ್ರನ ಜನನ ಮರಣಗಳೆಲ್ಲ ಪೇಳ್ವ 8 ಹಿರಣ್ಯಕಶಿಪುವಿನ ದುರುಳತನವು ಮತ್ತೆ ಧೀವರನಾದ ಪ್ರಹ್ಲಾದರಾಯನಿಂ ವ- ರ್ಣಿತಮಾದ ಶ್ರೀಹರಿಯ ಮಹಿಮೆಯ ಪೇಳ್ವ 9 ಅಷ್ಟಮ ಸ್ಕಂದದಿ ಮನ್ವಂತರ ವಿವರವು ಕಮಠ ಹಯವದನನವತಾರ ಸುಧೆಯಿತ್ತ ಮಹಿಮೆಯ10 ಇಳೋಪಾಖ್ಯಾನವ ತಾರೋಪಾಖ್ಯಾನವ ಪೇಳ್ವ 11 ಶರ್ಯಾತಿ ಕಾಕುಸ್ಥ ಖಟ್ವಾಂಗ ಧೀರ ಮಾಂ- ಧಾತೃ ಸೌಭರಿ ಸಗರರ ಚರಿತೆ ಪರಮಾತ್ಮ ರಘುರಾಮನ ಚರಿತೆಗಳನು ಪೇಳ್ವ12 ಮತ್ತೆ ನಿಮಿಯ ದೇಹತ್ಯಾಗದ ವಿಷಯವು ಉತ್ತಮ ಚಂದ್ರವಂಶದ ನಹುಷಾಸುತ ಯ- ಯಾತಿ ಶಂತನುಯದು ಚರಿತೆಗಳುಳ್ಳ 13 ದಶಮ ಸ್ಕಂದದಿ ಹರಿ ಯದುವಂಶದಿ ಜನಿಸಿ ಶಿಶುಲೀಲೆಗಳ ತೋರಿ ಅಸುರಿ ಪೂತನಿ ಕೊಂದು ಅಸುರಭಂಜಕ ಹರಿಯು ಮೆರೆದ ಮಹಿಮೆಯ ಪೇಳ್ವ 14 ಮಾಯಾ ಮಹಿಮಧೇನು ಪ್ರಲಂಬಕರಾ ಕೊಂದು ಕಾಡುಕಿಚ್ಚಿನಿಂದ ಗೋಪಾಲರ ಕಾಯ್ದ ನೋಯಿಸಿ ಕಾಳಿಯ ಬಾಯ ಬಿಡಿಸಿ ಕಾಳಿಮರ್ದನ ಕೃಷ್ಣ ನಾಡಿದ15 ಗೋಪಸ್ತ್ರೀಯರ ಚರಿತ ಗೋವರ್ಧನೋದ್ಧಾರಣ ಕಂಸವಧೆಯ ಮಾಡಿ ಗುರುಸುತನನು ತೋರ್ದ 16 ಜರೆಯ ಸೇನೆಯ ಜಯಿಸಿ ಕಾಲಯವನರ ಕೊಂದು ಸಿರಿ ರುಕ್ಮಿಣಿಯ ಪಡೆದು ಸೆರೆಯ ಬಿಡಿಸಿ ರಾಜಕನ್ಯೆಯರನು ಕಾಯ್ದ 17 ದ್ವಿವಿಧ ಮುರಾಸುರರೆಲ್ಲರ ನಾಶಪಡಿಸಿ ಕಾಶೀಪುರವ ದಹನ ಮಾಡಿ ಪಾಂಡವರನ್ನು ಕಾಯ್ದ ಪರಮ ಮಹಿಮೆಯ ಪೇಳ್ವ 18 ಭೂಭಾರನಿಳುಹಲು ಕುರು ಪಾಂಡವರೊಳು ಸದ್ಧವರ್i ಸ್ಥಾಪಿಸಿದ ಶ್ರೀಕೃಷ್ಣಚರಿತೆಯ ಪೇಳ್ವ 19 ಭೂಸುರ ಶಾಪದಿ ಯುದ್ಧವನೆ ಮಾಡಿ ಏಕನಾಗಿದ್ದ ಉದ್ಧವನಿಗೆ ಬೋಧಿಸಿ ಲೋಕಾವನೈದು ನಿಜಧಾಮಕ್ಕೆ ತೆರಳಿದ 20 ನಿತ್ಯನೈಮಿತ್ತಿಕ ಪ್ರಾಕೃತಗಳ ಸೃಷ್ಟಿ ವೇದ ವಿಭಾಗವು ಹರಿರಾತನ ಅಂತ್ಯ ಮಾರ್ಕಂಡೇಯ ಚರಿತ ಸೂರ್ಯಗಣಗಳ ಪೇಳ್ವ 21 ಮರೆ ವೆಯಿಂದಾಗಲಿ ರುಜೆಯಿಂದಾಗಲಿ ಹರಿಯೇನಮಃ ಎಂದುಚ್ಚರಿಸಿದ ಮಾತ್ರದಿ ದುರಿತಪಾಪವು ನಾಶವಾಗಿ ಪೋಗುವುದಯ್ಯ 22 ದುರಿತವ್ಯಾಧಿಗಳು ತ್ವರಿತದಿ ಓಡುವುವು ಹರಿಸಂಬಂಧವಲ್ಲದ ಮಾತೆಲ್ಲವೂ ವ್ಯರ್ಥವೋ 23 ಭಾಗವತದ ಸಪ್ತಾಹದ ಪುಣ್ಯಫಲವು ಪಾವನವಾದ ಶ್ರೀಪಾದವ ಸೇರುವ24
--------------
ಉರಗಾದ್ರಿವಾಸವಿಠಲದಾಸರು
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು
ಎನ್ನಬಿನ್ನಪಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರುವಿಧ ವಸ್ತುಗಳುವಸುಮತಿಯ ಮೇಲಿನ್ನು ಅಸುರ ಜನರೆ ಬಹಳ ವಶವಲ್ಲ ಕಲಿಯ ಬಾಧೆಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದುಅರಿದು
--------------
ಗೋಪಾಲದಾಸರು