ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಮ್ಮ ಸಲಹಯ್ಯಾ ಸಿರಿರಮಣಾ| ದುರಿತ ನಿವಾರಿಸು ಪೂರ್ಣ| ಮಂದಮತಿಗಳಾ ನೋಡದೆವೆ ನ್ಯೂನಾ| ಛಂದದಿಂದ ಕೊಡು ನಿನ್ನ ಚರಣ ಧ್ಯಾನಾ ಪ ಹಿಂದ ವ್ಯಾಧನೊಬ್ಬ ಹರಿಣಿ ಹಿಡಿಯಲಿ| ನಿಂತು ಚತುರ್ವಿಧ ಬಲಿಯಾನೊಡ್ಡಿರಲಿ| ಮೃಗ ಮೊರೆಯಿಡಲಿ| ಬಂದು ಕರುಣಿಸಿ ರಕ್ಷಿಸಿದ ಪರಿಲಿ 1 ಬಸಿರೊಳಗಿದ್ದ ಪರೀಕ್ಷಿತಗೆಂದು| ಎಸೆಯಲು ಬಾಣಗಳ ದ್ರೋಣಿ ಮುಳಿದು| ಬಿಸಜಾಕ್ಷ ನಿನ್ನ ಚಕ್ರ ಮರೆವಿಡಿದು| ಪರಿ ಬಂದು 2 ದಿನ ವತ್ಸಲ ದಯಾನಿಧಿ ಎನುವಾ| ಖೂನದೋರಿಸಯ್ಯಾ ಬಿರುದಿನ ಅನುವಾ| ನಿನೇ ತಾಯಿ ತಂದೆ ಬಂಧು ಸಖದೈವ| ಘನಗುರು ಮಹಿಪತಿ ಸುಖ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈತ ಲಿಂಗದೇವ ಶಿವನು ಆತ ರಂಗಧಾಮ ವಿಷ್ಣು ಮಾತ ಕೇಳೊ ಮಂಕು ಮನುಜ ಮನದ ಅಹಂಕಾರ ಬಿಟ್ಟು ಪ. ವೇದಕ್ಕೆ ಸಿಕ್ಕಿದನೀತ ವೇದನಾಲ್ಕು ತಂದನಾತ ಬೂದಿ ಮೈಯೊಳು ಧರಿಸಿದನೀತ ಪೋದಗಿರಿಯ ಪೊತ್ತನಾತ 1 ವ್ಯಾಧನಾಗಿ ಒಲಿದನೀತ ಮಾಧವ ಮಧುಸೂದನನಾತ ಮದನನ್ನ ಉರಿಹಿದನೀತ ಮದನನಪಡೆದಾತನಾತ 2 ಗಂಗೆಯ ಪೊತ್ತವನೀತ ಗಂಗೆ ಪದದಿ ಪಡೆದನಾತ ತುಂಗ ಹೆಳವನಕಟ್ಟೆ ಲಿಂಗ ಅಂತರಂಗ ರಂಗನಾಥ 3
--------------
ಹೆಳವನಕಟ್ಟೆ ಗಿರಿಯಮ್ಮ
ನಿನ್ನವರ ಧರ್ಮ ವಿಹಿತವಾಗುವುದು ಮ ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ ಕಡಲ ಮಥನದಲಿ ಕಪರ್ದಿ ಕಾಳಕೂಟ ಕುಡಿಯಲು ಕಂಠಭೂಷಣವಾಯಿತು ಒಡನೆ ರಾಹು ಕೇತು ಸುಧೆಯ ಪಾನದಿಂದ ಮಡಿದರೆಂದು ಮೂರ್ಲೋಕವೇ ಅರಿಯೆ 1 ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ ಸಲೆ ಭಕ್ತನೆಂದು ಬಾಗಿಲ ಕಾಯ್ದೆ ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ ಖಳ ಜರಾಸಂಧನ ಕೊಲಿಸಿದೆ ಹೋಗಿ 2 ಪತಿವ್ರತ ಧರ್ಮದಿ ಮೃತರಾದ ತ್ರಿಪುರರ ಸತಿಯರು ಶಿವನಿಂದ ಹತರಾದರು ಸತಿ ಉಡುಪ ಪತಿಯಿಂದಲಿ ನಿತ್ಯ ಸೇವೆಯೊಳಿರುವಳು 3 ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ ವ್ಯಾಧನ ಯಮಿಕುಲೇಶನ ಮಾಡಿದೆ ವೇದೋಕ್ತ ಕರ್ಮವಾಚರಿಸಿದ ಜಿನನೊಳ್ ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ 4 ಪರಾಶರನು ಸತ್ಯವತಿಯ ಸಂಬಂಧಿಸೆ ಶ್ರೀರಮಣ ನೀನವತರಿಸಿದಲ್ಲಿ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ 5
--------------
ಜಗನ್ನಾಥದಾಸರು
ಭಾವ ಭಕುತಿಗೆ ವಲಿವ ನೋಡಿರೋ| ದೇವ ದೇವ ಮುಕುಂದನು| ಆವನಾಗಲಿ ತನ್ನ ನಂಬಿದ| ಸೇವಕರನು ದ್ಬರಿಸಿ ಪೊರೆವನು ಪ ಆಚರಣೆ ನೋಡಿದನೆ ವ್ಯಾಧನ| ನೀಚನೆಂದನೆ ವಿದುರನ| ಯೋಚಿಸಿದನೇ ಧ್ರುವನ ವಯಸನು| ನಾಚಿದನೇ ಕುಬ್ಜೆಯನು ಕೂಡಲು1 ಏನು ವಿದ್ಯೆ ಗಜೇಂದ್ರದೋರಿದ| ಏನು ಕೊಟ್ಟ ಸುಧಾಮನು| ಏನು ಪೌರುಷ ಉಗ್ರಸೇನನ| ಏನುಣಿಸಿದಳು ಹರಿಗೆ ದ್ರೌಪದಿ2 ಆವಶೇವೆಯೋ ನರನ ಬಂಡಿಯ| ಬೋವತನವನು ಮಾಡಲು| ಭಾವಿಸಲು ಗುರುಮಹಿಪತಿ ಪ್ರಭು| ಕಾವಕರುಣಿಯೋ ಮಹಿಮೆ ತಿಳಿಯದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಶಿಮುಖಿ ಜಾನಕಿ ರಮಣ ವಸುಧೆಯೊಳಗೆ ನಿಮ್ಮ ಭಜನೆಯ ಮಾಡುವರ ಶಿಶುವುಯೆಂದು ತಿಳಿದು ಶೀಘ್ರದಿ ರಕ್ಷಿಸೊ ಪ ಪಶುಪತಿ ರಕ್ಷಕ ಪಾವನ ಮೂರ್ತಿ ಪಶುಪಾಲಕನಾದ ಪರಮಾತ್ಮ ಕುಸುಮಜನನು ಅತಿಕರುಣದಿ ನೀನು ಕುಶಲದಿ ಪಡೆದ ಗುಣವಂತಾ ಹಸ ಮೀರಿನಡೆವಂತ ಅನೇಕ ದುಷ್ಟ ಅಸುರರ ಛೇದಿಸಿದ ಬಲವಂತಾ ದಶದಿಕ್ಕಿನೊಳಗೆ ದಾರನು ಕಾಣೆನೊ ದಶವಂತನು ನಿನಗಾರು ಸರಿಹಾರೊ 1 ಪಿತೃವಾಕ್ಯ ಪರಿಪಾಲನೆ ಮಾಡಿದ ಪುತ್ರನು ಅನಿಸಿದ ಪುಣ್ಯನಿಧಿ ಪತಿ ಧರ್ಮವ ಸರ್ವದಾ ನಡೆಸುವ ಸತ್ಯಮೂರ್ತಿ ಸೌಭಾಗ್ಯನಿಧಿ ಶತದ್ರೋಹಿಯಾಗಿ ಸೀತೆಯ ಒಯ್ದನ ಶತಮುಖನಯ್ಯನ ಸಂಹರಿಸಿದಿ ಸತತ ವಿಭೀಷಣ ಭಕ್ತಿಯಿಟ್ಟ ಸಲುವಾಗಿ ಲಂಕೆಯ ಧಾರೆಯನೆರದೀ 2 ಯಾದವ ಕುಲಪತಿ ಯಶೋದೆನಂದನ ವ್ಯಾಧನ ರಕ್ಷಿಸಿದಿ ವಿಶ್ವೇಶ ಬಾಧಕ್ಕೆ ಒಳಗಾಗಿ ಕರಿಕೂಗಲು ಮಕರಿ ಬಾಧೆಯ ತಪ್ಪಿಸಿದ ಪರಮೇಶಾ ಸಾಧು ಸಜ್ಜನ ಸರ್ವರ ಸಲಹುವ ಸಾಧು ಗುಣಾನಂದ ಸರ್ವೇಶಾ ಮಾಧವ `ಸಿರಿಹೆನ್ನೆ ವಿಠಲ' ನಿನ್ನಯ ಮೋದವ ತೋರೋ ಜಗದೀಶಾ 3
--------------
ಹೆನ್ನೆರಂಗದಾಸರು
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು
ಸ್ಥಳವಲ್ಲದ ಸ್ಥಳದಲ್ಲಿ ಕಸ್ತೂರಿಯನಿಟ್ಟ ಬ್ರಹ್ಮಬಳಿಕ ಬೈದರೆ ವಿವೇಕವಹುದೇ ಎಲೆ ತಮ್ಮಪಶೀಲಮೃಗ ನಾಭಿಯಲಿ ಕಸ್ತೂರಿಯನಿಡುವುದುಖೂಳರ ಜಿಹ್ವೆಯಲಿ ಅದನಿಡಲು ನೀತಿಯಹುದುನಾಲಗೆಯ ಲೋಕೋಪಕಾರವಹುದುಮೇಲೆ ಕಸ್ತೂರಿಬಹುದು ಜಗಸಮ್ಮತವಹುದು1ಕಸ್ತೂರಿಗೋಸ್ಕರವೆ ಧರ್ಮ ಮೃಗವಾದುದನು ಬಿಡದೆಕೊಲ್ಲುವವನು ವ್ಯಾಧನೀಗಸಂಚಲ ಚಿತ್ತವುಳ್ಳವನು ವಿಧಿವರವರಿಯನುಅಸ್ತವ್ಯಸ್ತದಿ ಪಶುಗೆ ನೀರತಿದ್ದಿದನು2ಧರಿಸಿದನು ದೋಷವನು ತಾನೀಗ ಎರಡನ್ನಹಿರಿಯರನು ನಿಂದಿಪುದು ಮೃಗವ ಕೊಂದವನುಕರುಣೆ ಚಿದಾನಂದ ಸದ್ಗುರುವಿಗೆ ಮೆಚ್ಚಿಸು ಅದುಮರವಾದ ಮುಪ್ಪಿನಲಿ ವಿಧಾತ್ರನು3
--------------
ಚಿದಾನಂದ ಅವಧೂತರು