ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ
ಶ್ರೀವಾಸಾನತಮಾಕಲಯಾಚ್ಯುತ ಶ್ರೀವಾಸುಕಿಶಯಮಾಮನಿಶಂಹೃದಾ ಪ ಪುಂಡರೀಕ ನಯನಾಂಡಜವಾಹನ ಕುಂಡಲಶಯ ಮಾಂಡವ್ಯಸೇವ್ಯಪದ 1 ಪುಂಡರೀಕ ಸುಮಂಡಿತಾಂಗಪದ ಪುಂಡರೀಕಶ್ರಿತ ಪಾಂಡುತನಯ ಭೋ 2 ನಂದಗೋಪವರ ನಂದಸುಮನೋ ನಂದನಮುನಿಜನ ವಂದಿತಪದಯುಗ 3 ಧರ್ಮತನಯ ಸಹಧರ್ಮಚಾರಿಣಿ ವರ್ಮಪಾಲ ಸದ್ಧರ್ಮ ಶ್ರೀಲಹರಿ 4 ವ್ಯಾಘ್ರನಾಮ ದೈತ್ಯಾಗ್ರನಿಗ್ರಹ- ಣೋಗ್ರಸೇನ ತನಯಾಗ್ರವಿದಾರಣ 5 ಬಾಲಭಕ್ತ ಪರಿಪಾಲ ಹೇಮಮಯ ಚೇಲ ವಿಧೃತ ವನಮಾಲ ನರಹರೆ 6 ಮಾರಜನಕ ಸುರವಾರವಂದ್ಯ ಮಂ ದಾರ ಹಾರ ಸುಕುಮಾರಶರೀರ 7 ಮಂದರಧರ ಪೂರ್ಣೇಂದು ವದನ ಗೋ ವಿಂದ ಮುಕುಂದ ಸನಂದವಂದಿತ 8 ಖಂಡಪರಶು ಕೋದಂಡ ವೇ ತಂಡ ಹಸ್ತಭುಜದಂಡ ರಘೂದ್ವಹ 9 ಅಂಬರೀಷ ವರದಂಬುಜಾಸನಾ ಲಂಬಮಾನ ಚರಣಾಂಬುಜ ಕೇಶವ 10 ಸಾರವಸ್ತು ಪರಿಪೂರ ವ್ಯಾಘ್ರನಗ ಪಾರಿಜಾತ ವರದಾರ್ಯವಿಠಲ ಶ್ರೀ 11
--------------
ವೆಂಕಟವರದಾರ್ಯರು