ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ ಮಧ್ವರಾಯರ ಕರಪದ್ಮ ಸಂಭವರಾದ ಅ.ಪ ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ 1 ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ 2 ಧರೆಯೊಳು ಶರಣರ ಪೊರಿವ ಕಾರ್ಪರನರ ಹರಿಯನೊಲಿಸಿದಂಥ ಪರಮ ಮಹಿಮರಾದ3
--------------
ಕಾರ್ಪರ ನರಹರಿದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು